ಮೊರಾದಾಬಾದ್, ಉತ್ತರ ಪ್ರದೇಶ:ಕೊರೊನಾ ಸೋಂಕಿತರ ಬಗ್ಗೆ ಮಾಹಿತಿ ಸಂಗ್ರಹಿಸುವಾಗ ಹಲ್ಲೆಗೊಳಗಾಗಿದ್ದ ವೈದ್ಯ ಡಾ. ಎಸ್. ಸಿ. ಅಗರ್ವಾಲ್ ಕಿವಿಮಾತು ಹೇಳಿದ್ದಾರೆ.
ಸಾಂಕ್ರಾಮಿಕ ವೈರಸ್ ವಿರುದ್ಧ ನೇರ ಹೋರಾಟದಲ್ಲಿ ತೊಡಗಿರುವ ಪ್ರತಿಯೊಬ್ಬ ಸಿಬ್ಬಂದಿಯೂ ವೈಯಕ್ತಿಕ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ಕೊಡಬೇಕು. ಅದಕ್ಕೆ ಬೇಕಾದ ಅಗತ್ಯ ಸುರಕ್ಷಾ ವಸ್ತುಗಳನ್ನು ಯಾವಾಗಲು ತಮ್ಮೊಂದಿಗೆ ಒಯ್ಯಬೇಕು ಎಂದಿದ್ದಾರೆ.
ಈ ಸಂಬಂಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಗೊಂಡ ವೈದ್ಯರು ಈಟಿವಿ ಭಾರತ್ದೊಂದಿಗೆ ಮಾತನಾಡಿ, ಆ ದಾಳಿ ಅಪಾಯಕಾರಿಯಾಗಿತ್ತು. ನಾವು ಸಾವನ್ನೇ ನಮ್ಮ ಕಣ್ಣ ಮುಂದೆ ನೋಡಿದೆವು ಎಂದರು.