ಕರ್ನಾಟಕ

karnataka

ETV Bharat / bharat

ವಿಶೇಷ ಲೇಖನ: ಕೊರೊನಾ ಚಿಕಿತ್ಸೆಯಲ್ಲಿ ಆಸ್ಪತ್ರೆಗಳ ಅಮಾನವೀಯತೆ

ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಜೀವಗಳನ್ನು ಉಳಿಸುತ್ತದೆ ಎಂಬ ಭರವಸೆಯಿಂದ ಸಾವಿರಾರು ಕುಟುಂಬಗಳು ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ತೆರಳುತ್ತಿದ್ದಾರೆ. ಆದರೆ, ಅಲ್ಲಿನ ಪರಿಸ್ಥಿತಿ ನಿಜಕ್ಕೂ ಭಯಾನಕವಾಗಿದೆ. ಲಕ್ಷಾಂತರ ರೂ. ಬಿಲ್ ಮೊತ್ತಗಳು, ಆರೋಗ್ಯ ವಿಮೆ ಸೌಲಭ್ಯ ನಿರಾಕರಣೆ, ಕಪ್ಪು ಹಣ ಪಾವತಿ ಬೇಡಿಕೆಗಳು ಮತ್ತು ಬಿಲ್ ಪೂರ್ಣವಾಗಿ ಪಾವತಿಸದಿದ್ದರೆ ಮೃತದೇಹಗಳನ್ನು ಹಸ್ತಾಂತರಿಸಲು ನಿರಾಕರಿಸುವ ದೌರ್ಜನ್ಯಗಳು ಆಘಾತಕಾರಿ.

Covid
ಕೊರೊನಾ

By

Published : Aug 11, 2020, 4:52 PM IST

ಇಡೀ ವಿಶ್ವವೇ ಕೊರೊನಾ ಮಹಾಮಾರಿಯ ಹೊಡೆತಕ್ಕೆ ಸಿಲುಕಿದ್ದು, ಜೀವ ಉಳಿಸಿಕೊಂಡರೆ ಸಾಕು ಎಂಬ ವಾತಾವರಣ ನಿರ್ಮಾಣವಾಗಿದೆ. ನಿತ್ಯ ಅಸ್ತಿತ್ವಕ್ಕಾಗಿ ಹೋರಾಡುವ ಬಡವರು ಸಹ ತಮ್ಮ ಹತ್ತಿರದ ಮತ್ತು ಪ್ರಿಯ ಪಾತ್ರರ ಪ್ರಾಣ ಉಳಿಸಿಕೊಳ್ಳಲು ಸಾಲ ಸೋಲ ಮಾಡಿ ವೈದ್ಯಕೀಯ ಚಿಕಿತ್ಸೆಯ ವೆಚ್ಚಗಳನ್ನು ಹೇಗಾದರೂ ಭರಿಸುತ್ತಿದ್ದಾರೆ. ದೇಶದಲ್ಲಿ ಕೊರೊನಾ ಇನ್ನಿಲ್ಲದಂತೆ ಆತಂಕಕಾರಿಯಾಗಿ ಹರಡುತ್ತಿದ್ದು, ಜನರಲ್ಲಿ ಅಕ್ಷರಶಃ ಭೀತಿ ಸೃಷ್ಟಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕೊರೊನಾ ರೋಗಿಯೊಬ್ಬರು ಚಿಕಿತ್ಸೆಗೆ ವೈದ್ಯರ ಬಳಿಗೆ ಹೋದರೆ ಆಸ್ಪತ್ರೆಗಳು ಹೆಚ್ಚು ಹೆಚ್ಚು ಶುಲ್ಕ ವಿಧಿಸುತ್ತಿವೆ. ಈ ರೀತಿಯ ಶೋಷಣೆ ಮಾಡುವ ಕೊರೊನಾ ಸಂಕಷ್ಟದ ಸಮಯದಲ್ಲಿ ಆಸ್ಪತ್ರೆಗಳ ಅಮಾನವೀಯತೆ ಉತ್ತುಂಗಕ್ಕೆ ತಲುಪಿರುವುದು ಕಂಡುಬರುತ್ತಿದೆ. ಆರೋಗ್ಯದ ದೇಗುಲಗಳಾಗಬೇಕಾದ ಆಸ್ಪತ್ರೆಗಳು ಈ ರೀತಿ ಲೂಟಿ ಮಾಡುವ ಸ್ಥಳಗಳಾಗಿ ಬದಲಾದಾಗ ಮಹಾಮಾರಿ ಕೊರೊನಾ ವೈರಸ್ ವಿರುದ್ಧ ದೇಶ ಜಯ ಸಾಧಿಸಲು ಹೇಗೆ ಸಾಧ್ಯ?

ತಮ್ಮ ಆರ್ಥಿಕ ಸ್ಥಿತಿ ಅಷ್ಟು ಉತ್ತಮವಾಗಿಲ್ಲವಾದರೂ ಸಹ ಜನರು, ಅನಾರೋಗ್ಯದ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಪ್ರೀತಿ ಪಾತ್ರರನ್ನ ಉಳಿಸಿಕೊಳ್ಳುವ ಆತಂಕದಿಂದ ಸಾಲ ಮಾಡಿ ಚಿಕಿತ್ಸೆಗೆ ಮುಂದಾಗುತ್ತಿದ್ದಾರೆ. ಹೀಗಾಗಿ, ಪ್ರತಿವರ್ಷ ಆರು ಕೋಟಿ ಜನರು ತೀವ್ರ ಬಡತನಕ್ಕೆ ಸಿಲುಕುತ್ತಾರೆ. ಜೊತೆಗೆ ಸಾಲವನ್ನು ಹೆಚ್ಚಿಸಿಕೊಳ್ಳುತ್ತಾರೆ. ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಮತ್ತು ಸರ್ಕಾರವು ತ್ವರಿತ ಮತ್ತು ಪರಿಣಾಮಕಾರಿ ವೈದ್ಯಕೀಯ ಸೇವೆಗಳ ಮೂಲಕ ಜನರನ್ನ ರಕ್ಷಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ರೀತಿಯ ವೈದ್ಯಕೀಯ ಸವಾಲುಗಳಿಂದಾಗಿ ಈಗಾಗಲೇ ದೇಶದಲ್ಲಿ 45,000 ಜನರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಮತ್ತು 22 ಲಕ್ಷ ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಆರಂಭದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಕೋವಿಡ್ ಚಿಕಿತ್ಸೆಯನ್ನು ನಿಗದಿಪಡಿಸಿದ್ದ ಸರ್ಕಾರಗಳು, ನಂತರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಸೇವೆಗಳಿಗೆ ಅವಕಾಶ ಮಾಡಿಕೊಟ್ಟವು. ಆರೋಗ್ಯವು ಜನರ ಮೂಲಭೂತ ಹಕ್ಕು ಮತ್ತು ಅವರು ಎಲ್ಲಿ ಬೇಕಾದರೂ ಚಿಕಿತ್ಸೆ ಪಡೆಯುವ ಸ್ವಾತಂತ್ರ್ಯವಿದೆ ಎಂದು ತೆಲಂಗಾಣ ಹೈಕೋರ್ಟ್ ಮೇ ಮೂರನೇ ವಾರದಲ್ಲಿ ನೀಡಿದ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ಆದರೆ ತೆಲಂಗಾಣದ ಹೈಕೋರ್ಟ್ ಖಾಸಗಿ ಆಸ್ಪತ್ರೆಗಳ ಬಗ್ಗೆ ಅತೀವ ಕೋಪ ವ್ಯಕ್ತಪಡಿಸಿದ್ದು, ಇದಕ್ಕೆ ಬಲವಾದ ಕಾರಣಗಳಿವೆ.

'ಹಣ' ಮಾಡುವ ಕೇಂದ್ರಗಳಾಗಿ ಖಾಸಗಿ ಆಸ್ಪತ್ರೆಗಳು…

ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಖಾಲಿಯಾಗಿವೆ ಮತ್ತು ವೈದ್ಯಕೀಯ ಆರೈಕೆ ಉಚಿತ ಎಂದು ಸರ್ಕಾರ ಹೇಳುತ್ತಿದ್ದರೆ, ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಜೀವಗಳನ್ನು ಉಳಿಸುತ್ತದೆ ಎಂಬ ಭರವಸೆಯಿಂದ ಸಾವಿರಾರು ಕುಟುಂಬಗಳು ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ತೆರಳುತ್ತಿದ್ದಾರೆ. ಆದರೆ, ಅಲ್ಲಿನ ಪರಿಸ್ಥಿತಿ ನಿಜಕ್ಕೂ ಭಯಾನಕವಾಗಿದೆ. ಲಕ್ಷಾಂತರ ರೂ. ಬಿಲ್ ಮೊತ್ತಗಳು, ಆರೋಗ್ಯ ವಿಮೆ ಸೌಲಭ್ಯ ನಿರಾಕರಣೆ, ಕಪ್ಪು ಹಣ ಪಾವತಿ ಬೇಡಿಕೆಗಳು ಮತ್ತು ಬಿಲ್ ಪೂರ್ಣವಾಗಿ ಪಾವತಿಸದಿದ್ದರೆ ಮೃತದೇಹಗಳನ್ನು ಹಸ್ತಾಂತರಿಸಲು ನಿರಾಕರಿಸುವ ದೌರ್ಜನ್ಯಗಳು ಆಘಾತಕಾರಿ. ಈ ರೀತಿ ಹಲವಾರು ಖಾಸಗಿ ಆಸ್ಪತ್ರೆಗಳು ಕೊರೊನಾ ಸಂದರ್ಭದಲ್ಲಿ 'ಹಣ' ಮಾಡುವ ಯಂತ್ರಗಳಾಗಿ ಬದಲಾಗಿರುವುದರ ವಿರುದ್ಧ ಸಲ್ಲಿಸಲಾಗಿದ್ದ ಹಲವು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್​ ನ್ಯಾಯಾಧೀಶರ ಕೋಪ ಸ್ಫೋಟಗೊಂಡಿದೆ. ಆದರೆ, ಸರ್ಕಾರವು ನ್ಯಾಯಾಲಯದ ಮುಂದೆ ತನ್ನ ದುಃಖವನ್ನು ತೋರ್ಪಡಿಸಿದ್ದು, ಉಚಿತ ಭೂಮಿ ಅಥವಾ ಅಗ್ಗದ ಭೂಮಿಯನ್ನು ಪಡೆದ ಆಸ್ಪತ್ರೆಗಳು ಸಮಾಜದ ಬಡತನದ ಅಂಚಿನಲ್ಲಿರುವ ವರ್ಗದವರಿಗೆ ಶೇಕಡಾವಾರು ಉಚಿತ ಸೇವೆಯನ್ನು ನೀಡುತ್ತೇವೆ ಎಂಬ ಭರವಸೆಯೊಂದಿಗೆ ಆರಂಭಗೊಂಡಿತ್ತು. ಆದರೆ ಈಗ ತಮ್ಮ ಭರವಸೆಯನ್ನು ಉಳಿಸಿಕೊಳ್ಳುತ್ತಿಲ್ಲ ಎಂದು ತಿಳಿಸಿದೆ. ಹೀಗಾಗಿ, ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯ ಯೋಧರಾಗಿ ರಾಷ್ಟ್ರದ ಗೌರವ ಸ್ವೀಕರಿಸಿದ ವೈದ್ಯರು ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಇದು ಎಂದು ಹೇಳಿದೆ.

ವೈದ್ಯಕೀಯ ಚಿಕಿತ್ಸೆಯು ವ್ಯವಹಾರವಲ್ಲ. ಇದರಲ್ಲಿ ನೀವು ಬೇಡಿಕೆಯ ಪ್ರಕಾರ ಲಾಭವನ್ನು ಪಡೆಯುತ್ತೀರಿ. ಅದೇ ಸಮಯದಲ್ಲಿ, ಎಲ್ಲಾ ಖಾಸಗಿ ಆಸ್ಪತ್ರೆಗಳು ಸಮಂಜಸವಾದ ಲಾಭವನ್ನು ತ್ಯಜಿಸಿ ನಷ್ಟವನ್ನು ಅನುಭವಿಸಬೇಕೆಂದು ಯಾರೂ ಬಯಸುವುದಿಲ್ಲ. ಸೋಂಕಿನ ಪ್ರತಿರೋಧಕ್ಕಾಗಿ ಆ್ಯಂಟಿ-ಬಯೋಟಿಕ್ಸ್ ಅನ್ನು ಬಳಸುವುದಕ್ಕಾಗಿ, ಕುಟುಂಬವು ಎರಡು ದಿನಗಳವರೆಗೆ ಹಸಿವಿನಿಂದ ಬಳಲುತ್ತದೆ. ಸುಪ್ರೀಂ ಕೋರ್ಟ್ ಬಡ ಜನರ ಕರುಣಾಜನಕ ಸ್ಥಿತಿಯನ್ನು ಸ್ಪಷ್ಟವಾಗಿ ವಿವರಿಸಿದೆ. ಆದ್ದರಿಂದ, ಸಣ್ಣ ಪಟ್ಟಣಗಳಲ್ಲಿಯೂ ಸಹ ಕೋವಿಡ್ ಚಿಕಿತ್ಸೆಯನ್ನು ಕಡಿಮೆ ದರದಲ್ಲಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಸೂಚಿಸಿದೆ. ಆಸ್ಪತ್ರೆಗಳೊಂದಿಗೆ ಮಾತನಾಡಲು ಮತ್ತು ಅವಿವೇಕದ ದರಗಳನ್ನು ಸಂಗ್ರಹಿಸದಂತೆ ಮತ್ತು ಕೈಗೆಟುಕುವ ದರಗಳನ್ನು ನಿಗದಿಪಡಿಸದಂತೆ ರಾಜ್ಯಗಳಿಗೆ ಸಲಹೆ ನೀಡುವುದಾಗಿ ಕೇಂದ್ರವು ನ್ಯಾಯಾಲಯಕ್ಕೆ ತಿಳಿಸಿದೆ.

ದಗಾಕೋರ ಆಸ್ಪತ್ರೆಗಳು ...

ಕೇಂದ್ರದ ನಿರ್ದೇಶನಗಳಿಗೆ ಅನುಗುಣವಾಗಿ, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿದಂತೆ ಹತ್ತು ರಾಜ್ಯ ಸರ್ಕಾರಗಳು ಕೋವಿಡ್ ಚಿಕಿತ್ಸೆಗೆ ನಿಗದಿತ ದರಗಳನ್ನು ಹೊಂದಿವೆ. ಆದರೆ, ಕಾರ್ಪೊರೇಟ್ ಆಸ್ಪತ್ರೆಗಳು ಕೇಂದ್ರ ನಿಗದಿಪಡಿಸಿರುವ ಕೋವಿಡ್ ಚಿಕಿತ್ಸಾ ದರಗಳು ತಮಗೆ ಕಾರ್ಯಸಾಧ್ಯವಲ್ಲ ಎಂದು ಸ್ಪಷ್ಟಪಡಿಸಿರುವುದು ಸಹ ಒಂದು ಸತ್ಯ. ಈ ಮಧ್ಯೆ, ಕೆಲವು ದುಬಾರಿ ಔಷಧಿಗಳು, ದುಬಾರಿ ಬೆಲೆಯ ರೋಗ ಪತ್ತೆ ಪರೀಕ್ಷೆಗಳು, ಪಿಪಿಇ ಕಿಟ್​ಗಳು ಮತ್ತು ಮಾಸ್ಕ್​ಗಳಿಗೆ ಸರ್ಕಾರ ವಿನಾಯಿತಿ ನೀಡಿದೆ ಎಂಬ ಅಂಶವೂ ಇದೆ. ಆದರೆ, ಈ ಬಗ್ಗೆ ತಲೆಕೆಡಿಸಿಕೊಳ್ಳದೆ ಕೆಲ ಖಾಸಗಿ ಆಸ್ಪತ್ರೆಗಳು ದಿನಕ್ಕೆ 50,000 ರೂ.ಗಳಿಂದ ಒಂದು ಲಕ್ಷ ರೂ. ವರೆಗೆ ಚಾರ್ಜ್ ಮಾಡುತ್ತಿವೆ. ಗುರ್​ಗಾಂವ್​ನಲ್ಲಿ ಮೂರು ವರ್ಷಗಳ ಹಿಂದೆ, ಕಾರ್ಪೊರೇಟ್ ಆಸ್ಪತ್ರೆಯೊಂದು ಏಳು ವರ್ಷದ ಡೆಂಗ್ಯೂ ಪೀಡಿತ ಹುಡುಗಿಯ ಚಿಕಿತ್ಸೆಗಾಗಿ ನಿಜವಾಗಿ ಆದ ವೆಚ್ಚಕ್ಕಿಂತ 17 ಪಟ್ಟು ಹೆಚ್ಚು ಬಿಲ್ ಮಾಡಿದೆ. ಇದನ್ನು ನ್ಯಾಷನಲ್ ಫಾರ್ಮಾಸಿಟಿಕಲ್ ಪ್ರೆಸ್ಸಿಂಗ್ ಅಥಾರಿಟಿ ಸಹ ಖಚಿತಪಡಿಸಿದೆ. ಮಹಾಮಾರಿ ಕೋವಿಡ್ ಚಿಕಿತ್ಸೆಯ ಸಮಯದಲ್ಲಿ ಆ ರೀತಿಯ ಲೂಟಿ ತುಂಬಾ ಅಸಹ್ಯಕರವಾಗಿರುತ್ತದೆ. ಆಸ್ಪತ್ರೆಯು ಲೂಟಿ ಕೇಂದ್ರವಾಗಿ ಬದಲಾದರೆ, ಕೊರೊನಾದ ಮೇಲೆ ನಾವು ಹೇಗೆ ವಿಜಯಶಾಲಿಯಾಗಿ ಹೊರಬರಬಹುದು ಎಂಬ ಪ್ರಶ್ನೆ ಎದುರಾಗುತ್ತದೆ?

ABOUT THE AUTHOR

...view details