ಹೈದರಾಬಾದ್: ಮಕ್ಕಳು ಹಾಗೂ ವೃದ್ಧರಿಗೆ ಕೊರೊನಾ ಸೋಂಕು ತಗುಲಿದರೆ ಗುಣಪಡಿಸುವುದು ಅಸಾಧ್ಯ ಎನ್ನಲಾಗುತ್ತಿದೆ. ಆದರೆ, 45 ದಿನದ ಮಗುವೊಂದು ಕೊರೊನಾ ಮಹಾಮಾರಿಯನ್ನು ಗೆದ್ದುಬಂದಿದೆ.
ಪ್ರಪಂಚಕ್ಕೆ ಕಾಲಿಟ್ಟ 20 ದಿನಕ್ಕೇ ಸೋಂಕು, 45 ದಿನದ ಮಗುವನ್ನು ಬಚಾವ್ ಮಾಡಿದ ಹೈದರಾಬಾದ್ ವೈದ್ಯರು - ಕೊರೊನಾ ಗೆದ್ದುಬಂದ ಮಗು
ತನ್ನ ತಂದೆಯಿಂದಲೇ ಸೋಂಕಿಗೆ ಒಳಗಾದ ಈ ಮಗುವಿಗೆ 15 ದಿನಗಳ ಕಾಲ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ.
ಕೊರೊನಾ ಗೆದ್ದುಬಂದ 45 ದಿನದ ಮಗು
ಹದಿನೈದು ದಿನಗಳ ನಿರಂತರ ಚಿಕಿತ್ಸೆಯ ನಂತರ 45 ದಿನಗಳ ಗಂಡು ಮಗುವನ್ನು ಕೊರೊನಾದಿಂದ ಗುಣಪಡಿಸಲಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಮೆಹಬೂಬ್‌ನಗರ ಜಿಲ್ಲೆಯ ಈ ಮಗುವಿಗೆ ತಂದೆಯಿಂದಲೇ ಸೋಂಕು ತಗುಲಿತ್ತು. ಈ ಹಿನ್ನೆಲೆ ಏಪ್ರಿಲ್ 4 ರಂದು ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇನ್ನು ಈ ಮಗು ಹುಟ್ಟಿದ 20 ದಿನಗಳಿಗೆ ಕೊರೊನಾ ಆವರಿಸಿದ್ದರಿಂದ, ದೇಶದ ಕಿರಿಯ ವಯಸ್ಸಿನ ರೋಗಿ ಎಂದು ದಾಖಲಾಗಿತ್ತು. ಚೇತರಿಸಿಕೊಂಡ ಈ ಮಗುವನ್ನು ಆಸ್ಪತ್ರೆಯಿಂದ ಬಿಡಿಗಡೆ ಮಾಡುವ ಸಂಬಂಧ ರಾಜ್ಯ ಆರೋಗ್ಯ ಸಚಿವ ಇ ರಾಜೇಂದರ್ ಸಂತೋಷ ವ್ಯಕ್ತಪಡಿಸಿದ್ದಾರೆ.