ಕರ್ನಾಟಕ

karnataka

ETV Bharat / bharat

ಭಾರತೀಯ ವಾಯುಪಡೆಗೆ ರಫೇಲ್ ಅಧಿಕೃತ ಸೇರ್ಪಡೆ: ರಕ್ಷಣಾ ವ್ಯವಸ್ಥೆಗೆ ಆನೆ ಬಲ

ಫ್ರಾನ್ಸ್​ ನಿರ್ಮಿತ ರಫೇಲ್ ಜೆಟ್​ ವಿಮಾನಗಳು ಇಂದು ಅಧಿಕೃತವಾಗಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿದ್ದು, ರಕ್ಷಣಾ ವ್ಯವಸ್ಥೆಯ ಬಲವನ್ನು ಮತ್ತಷ್ಟು ಹೆಚ್ಚಿಸಿವೆ.

Induction ceremony of rafale fighters jet
ಭಾರತೀಯ ವಾಯುಪಡೆಗೆ ರಫೇಲ್ ಅಧಿಕೃತ ಸೇರ್ಪಡೆ

By

Published : Sep 10, 2020, 11:24 AM IST

ನವದೆಹಲಿ: ಮೊದಲ ಬ್ಯಾಚ್​ನಲ್ಲಿ ಭಾರತಕ್ಕೆ ಹಸ್ತಾಂತರಿಸಲ್ಪಟ್ಟಿದ್ದ ಐದು ರಫೇಲ್​ ಫೈಟರ್ ಜೆಟ್​ಗಳು ಅಧಿಕೃತವಾಗಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿದ್ದು, 17 ಸ್ಕ್ವಾಡ್ರನ್ ಗೋಲ್ಡನ್ ಆರೋಸ್​ನ ಭಾಗವಾಗಿವೆ.

ಹರಿಯಾಣದ ಅಂಬಾಲಾ ವಾಯುನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಫ್ರಾನ್ಸ್​ನ ರಕ್ಷಣಾ ಸಚಿವ ಫ್ಲಾರೆನ್ಸ್ ಪಾರ್ಲಿ ಹಾಗೂ ಭಾರತದ ವಾಯುಪಡೆಯ ಉನ್ನತಾಧಿಕಾರಿಗಳ ಸಮಕ್ಷಮದಲ್ಲಿ ನಡೆದ ಸಮಾರಂಭದಲ್ಲಿ ರಫೇಲ್​ ಫೈಟರ್​ ಜೆಟ್​ಗಳು ವಾಯುಪಡೆಗೆ ಸೇರ್ಪಡೆಯಾದವು. ರಫೇಲ್ ವಿಮಾನಕ್ಕೆ ಸಾಂಪ್ರದಾಯಿಕ ಜಲ ಫಿರಂಗಿ ವಂದನೆ ಸಲ್ಲಿಸುವ ಮೂಲಕ 17 ಸ್ಕ್ವಾಡ್ರನ್‌ಗೆ ವಿಧ್ಯುಕ್ತವಾಗಿ ಸೇರ್ಪಡೆಗೊಳಿಸಲಾಯಿತು.

ಆಕಾಶದಲ್ಲಿ ಹಾರುತ್ತಿರುವಾಗಲೇ ಶತ್ರುಗಳನ್ನು ಸದೆಬಡಿಯುವ ಸಾಮರ್ಥ್ಯ ರಫೇಲ್​ ಯುದ್ಧ ವಿಮಾನಗಳಿಗಿದೆ. ಏರ್​​ ಟು ಏರ್​ ಅಂದರೆ ಬಾನಿನಲ್ಲೇ ಶತ್ರು ಸೇನೆಯ ವಿಮಾನಗಳ ಮೇಲೆ ಬಾಂಬ್ ದಾಳಿ ಮಾಡುವ ಜೊತೆಗೆ ಏರ್​ ಟು ಅರ್ತ್​ ಅಂದರೆ ಆಕಾಶದಿಂದ ಭೂಮಿಯ ಮೇಲಿರುವ ಗುರಿಗೆ ಬಾಂಬ್ ಹಾಕುವ ನೈಪುಣ್ಯವನ್ನು ಈ ಸಮರ ವಿಮಾನಗಳು ಹೊಂದಿವೆ.

ಎಂತಹ ಹವಾಮಾನದಲ್ಲೂ ಶತ್ರು ಪಡೆಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುತ್ತವೆ. ಕಣ್ಣಿಗೆ ಕಾಣಿಸದಷ್ಟು ದೂರದಿಂದ ದಾಳಿ​ ಮಾಡಬಲ್ಲ ಶಕ್ತಿ ರಫೇಲ್​ ಯುದ್ಧ ವಿಮಾನಗಳಿಗಿದ್ದು, ನೂತನ ಜೆಟ್​ಗಳಿಂದ ಭಾರತೀಯ ರಕ್ಷಣಾ ವ್ಯವಸ್ಥೆಯ ಬಲ ಮತ್ತಷ್ಟು ಹೆಚ್ಚಿದೆ.

ABOUT THE AUTHOR

...view details