ಖಂದ್ವಾ (ಮಧ್ಯಪ್ರದೇಶ):ಖಾಸಗಿ ಆಸ್ಪತ್ರೆಯೊಂದು ಉದ್ಯಮಿಯೊಬ್ಬರ ಮೃತದೇಹವೆಂದು ಕೋವಿಡ್ ರೋಗಿಯ ಮೃತದೇಹವನ್ನು ಕುಟುಂಬಸ್ಥರಿಗೆ ನೀಡಿರುವ ಘಟನೆ ಮಧ್ಯಪ್ರದೇಶದ ಖಂದ್ವಾ ಜಿಲ್ಲೆಯಲ್ಲಿ ನಡೆದಿದೆ.
ಪಿಪಿಇ ಕಿಟ್ ಅವಾಂತರ.. ಕ್ಯಾನ್ಸರ್ನಿಂದ ಸತ್ತ ಉದ್ಯಮಿ ಕುಟುಂಬಕ್ಕೆ ಕೋವಿಡ್ ರೋಗಿಯ ಶವ ಹಸ್ತಾಂತರ
ಮಧ್ಯಪ್ರದೇಶದ ಖಂದ್ವಾ ಜಿಲ್ಲೆಯ ಗ್ರೇಟರ್ ಕೈಲಾಸ್ ಆಸ್ಪತ್ರೆ ಉದ್ಯಮಿಯೊಬ್ಬರ ಮೃತದೇಹವೆಂದು ಕೋವಿಡ್ ರೋಗಿಯ ಮೃತದೇಹವನ್ನು ಕುಟುಂಬಸ್ಥರಿಗೆ ನೀಡಿದೆ.
ಆಸ್ಪತ್ರೆ ಎಡವಟ್ಟು
ಶ್ವಾಸಕೋಶ ಕ್ಯಾನ್ಸರ್ನಿಂದ ಬಳಲುತ್ತಿದ್ದ ಖಂದ್ವಾ ನಿವಾಸಿಯಾಗಿರುವ ಗೆಂಡಾಲಾಲ್ ರಾಥೋಡ್ ಎಂಬ ಉದ್ಯಮಿ ನಾಲ್ಕು ದಿನಗಳ ಹಿಂದೆ ಇಂದೋರ್ನ ಗ್ರೇಟರ್ ಕೈಲಾಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಶುಕ್ರವಾರ ರಾತ್ರಿ ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟಿದ್ದು, ಬಳಿಕ ಮೃತಪಟ್ಟಿದ್ದಾರೆ.
ಗೆಂಡಾಲಾಲ್ ರಾಥೋಡ್ರ ಮೃತದೇಹವನ್ನು ಕೊರೊನಾ ರೋಗಿಗಳ ಮೃತದೇಹಗಳ ಜೊತೆ ಇಟ್ಟಿದ್ದಾರೆ. ಯಾರದ್ದೋ ಮೃತದೇಹವನ್ನು ರಾಥೋಡ್ ಕುಟುಂಬಕ್ಕೆ ಕೊರೊನಾ ನಿಯಮಗಳನ್ನು ಪಾಲಿಸದೆ ಹಸ್ತಾಂತರ ಮಾಡಿದ್ದು, ಕುಟುಂಬಸ್ಥರು ಆಸ್ಪತ್ರೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.