ಕರ್ನಾಟಕ

karnataka

ETV Bharat / bharat

12ನೇ ವಯಸ್ಸಿಗೆ 12ನೇ ತರಗತಿ ಪಾಸ್;​ ಬಾಲಕಿಯ ಕೌಶಲ್ಯಕ್ಕೆ ಎಲ್ಲರೂ ಫಿದಾ! - 12ನೇ ವಯಸ್ಸಿನಲ್ಲಿ 12ನೇ ತರಗತಿ ಪರೀಕ್ಷೆ ಪಾಸ್​

12ನೇ ವಯಸ್ಸಿನಲ್ಲೇ ಬಾಲಕಿಯೋರ್ವಳು 12ನೇ ತರಗತಿ ಪರೀಕ್ಷೆ ಪಾಸ್ ಮಾಡಿ ಹೊಸ ದಾಖಲೆ ನಿರ್ಮಿಸಿದ್ದು, ಮಧ್ಯಪ್ರದೇಶದಲ್ಲಿ ಈ ಘಟನೆ ನಡೆದಿದೆ.

Tanishka
Tanishka

By

Published : Feb 5, 2021, 3:42 PM IST

ಇಂದೋರ್​: ಚಿಕ್ಕ ಮಕ್ಕಳಂತೆ ಆಟವಾಡಿಕೊಂಡು ಇರಬೇಕಾದ ಬಾಲಕಿಯೋರ್ವಳು ಕೇವಲ 12ನೇ ವಯಸ್ಸಿನಲ್ಲೇ 12ನೇ ತರಗತಿ ಪರೀಕ್ಷೆ ಪಾಸ್ ಮಾಡುವ ಮೂಲಕ ಹೊಸ ಇತಿಹಾಸ ರಚನೆ ಮಾಡಿದ್ದಾಳೆ.

12ನೇ ವಯಸ್ಸಿನಲ್ಲಿ 12ನೇ ತರಗತಿ ಪರೀಕ್ಷೆ ಪಾಸ್​ ಮಾಡಿದ ಬಾಲಕಿ

ಇಂದೋರ್​ನ ತನಿಷ್ಕಾ ಸುಜಿತ್​ ಈ ದಾಖಲೆ ಬರೆದಿರುವ ವಿದ್ಯಾರ್ಥಿನಿ. 12ನೇ ವಯಸ್ಸಿನಲ್ಲಿ ದ್ವಿತೀಯ ಪಿಯು ಪರೀಕ್ಷೆ ಪಾಸ್ ಮಾಡಿದ್ದು, ಸದ್ಯ ದೇವಿ ಅಹಲ್ಯ ವಿಶ್ವವಿದ್ಯಾನಿಲಯ ಇಂದೋರ್​​ನಲ್ಲಿ ಸಾಮಾಜಿಕ ವಿಜ್ಞಾನ ವಿಷಯದಲ್ಲಿ ಪದವಿ ಪಡೆದುಕೊಳ್ಳುತ್ತಿದ್ದಾಳೆ.

11ನೇ ವಯಸ್ಸಿನಲ್ಲಿ 10ನೇ ತರಗತಿ ಪಾಸ್ ಆಗಿರುವ ತನಿಷ್ಕಾ, ಸದ್ಯ ಪದವಿ ವ್ಯಾಸಂಗ ಮಾಡ್ತಿದ್ದಾಳೆ. 5ನೇ ತರಗತಿಯಲ್ಲಿ ಓದುತ್ತಿದ್ದ ವೇಳೆ ಆಕೆಯಲ್ಲಿನ ಕೌಶಲ್ಯ ನೋಡಿ 10ನೇ ತರಗತಿಗೆ ಬಡ್ತಿ ನೀಡಲಾಗಿದೆ. ಇದಾದ ಬಳಿಕ 12ನೇ ತರಗತಿ ಪರೀಕ್ಷೆ ಬರೆಯಲು ಅನುಮತಿ ಮಾಡಿಕೊಡಲಾಗಿದೆ.

ಓದಿ: ಆಂಧ್ರ ಸಿಎಂ ವಿರುದ್ಧ ಸಮನ್ಸ್ ಜಾರಿ ಮಾಡಿದ ತೆಲಂಗಾಣ ಕೋರ್ಟ್​

ಕೊರೊನಾ ವೈರಸ್ ಕಾರಣ ಆನ್​ಲೈನ್ ಕ್ಲಾಸ್​ಗಳಿಗೆ ತನಿಷ್ಕಾ ಹಾಜರಾಗುತ್ತಿದ್ದಾಳೆ. ಮಧ್ಯಪ್ರದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಬಡ್ತಿ ನೀಡುವ ಅವಕಾಶವಿಲ್ಲ. ಆದರೆ ತನಿಷ್ಕಾಳ ಕೌಶಲ್ಯದಿಂದಾಗಿ ಈ ವಿಶೇಷ ಅನುಮತಿ ನೀಡಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ತನಿಷ್ಕಾ, ನಾನು 5ನೇ ತರಗತಿಯಲ್ಲಿದ್ದ ವೇಳೆ ಪೋಷಕರು 10ನೇ ತರಗತಿ ಸಮೀಕರಣ ಬಿಡಿಸಲು ನೀಡುತ್ತಿದ್ದರು. ನಾನು ಅವುಗಳನ್ನ ಸುಲಭವಾಗಿ ಬಿಡಿಸಿದ ಕಾರಣ 10ನೇ ತರಗತಿಗೆ ಪ್ರವೇಶ ನೀಡಲಾಯಿತು ಎಂದಿದ್ದಾರೆ. ಸದ್ಯ ಪದವಿಯಲ್ಲೂ ಆಕೆ ಉತ್ತಮವಾಗಿ ವ್ಯಾಸಂಗ ಮಾಡ್ತಿದ್ದಾಳೆ ಎಂದು ಅಲ್ಲಿನ ಶಿಕ್ಷಕರು ತಿಳಿಸಿದ್ದಾರೆ.

ABOUT THE AUTHOR

...view details