ಇಂದೋರ್ (ಮಧ್ಯಪ್ರದೇಶ ) :ಕೋವಿಡ್-19 ಸ್ಯಾಂಪಲ್ ಪರೀಕ್ಷಾ ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿದ್ದ ಮಹಾತ್ಮ ಗಾಂಧಿ ಸ್ಮಾರಕ ವೈದ್ಯಕೀಯ ಕಾಲೇಜಿನ ವೈದ್ಯನಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಕೊರೊನಾ ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿದ್ದ ವೈದ್ಯನಿಗೆ ಪಾಸಿಟಿವ್... - Positive Case
ಇಂದೋರ್ನ ಮಹಾತ್ಮ ಗಾಂಧಿ ಸ್ಮಾರಕ ವೈದ್ಯಕೀಯ ಕಾಲೇಜಿನ ವೈರಾಲಜಿ ಲ್ಯಾಬ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ವೈದ್ಯನಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
Indore doctor documenting COVID-19 tests gets infected himself
ಮನೋಶಾಸ್ತ್ರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಇವರನ್ನು ವೈರಾಲಜಿ ಲ್ಯಾಬ್ನಲ್ಲಿ ದಾಖಲೆಗಳ ನಿರ್ವಹಣೆಗೆಂದು ಹೆಚ್ಚುವರಿಯಾಗಿ ನಿಯೋಜನೆ ಮಾಡಲಾಗಿತ್ತು. ಈ ವೇಳೆ ಸೋಂಕು ತಗುಲಿರುವ ಶಂಕೆಯಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಲೇಜು ಅಧಿಕಾರಿಗಳು, ಪ್ರಯೋಗಾಲಯದಲ್ಲಿ ನಡೆಯುತ್ತಿದ್ದ ಸ್ಯಾಂಪಲ್ಸ್ ಪರೀಕ್ಷೆಗೂ ವೈದ್ಯನಿಗೂ ಯಾವುದೇ ಸಂಬಂಧವಿಲ್ಲರಲಿಲ್ಲ. ಸೋಂಕಿತ ವೈದ್ಯನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದಿದ್ದಾರೆ.