ಕರ್ನಾಟಕ

karnataka

ETV Bharat / bharat

​ ಈ ಉದ್ಯಮಿಗೆ ಇಂದೋರ್​ನಲ್ಲಿ ವಂಚನೆ.. 80 ಲಕ್ಷ ರೂ. ಪಂಗನಾಮ - ಇಂದೋರ್​ ಸುದ್ದಿ,

ಮಧ್ಯಪ್ರದೇಶದ ಇಂದೋರ್​ನಲ್ಲಿ ಹೈದರಾಬಾದ್​ ಉದ್ಯಮಿಯೊಬ್ಬರಿಗೆ ಮೂವರು ಆರೋಪಿಗಳು 80 ಲಕ್ಷ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

80 lakh Cheating, 80 lakh Cheating with Hyderabad businessman, 80 lakh Cheating with Hyderabad businessman in Indore, Indore news, Indore crime news, 80 ಲಕ್ಷ ವಂಚನೆ, ಹೈದರಾಬಾದ್ ಉದ್ಯಮಿಗೆ 80 ಲಕ್ಷ ವಂಚನೆ, ಇಂದೋರ್​ನಲ್ಲಿ ಹೈದರಾಬಾದ್ ಉದ್ಯಮಿಗೆ 80 ಲಕ್ಷ ವಂಚನೆ, ಇಂದೋರ್​ ಸುದ್ದಿ, ಇಂದೋರ್​ ಅಪರಾಧ ಸುದ್ದಿ,
ಹೈದರಾಬಾದ್​ ಉದ್ಯಮಿಗೆ ಇಂದೋರ್​ನಲ್ಲಿ ವಂಚನೆ

By

Published : Jan 29, 2021, 10:16 AM IST

ಇಂದೋರ್​( ಮಧ್ಯಪ್ರದೇಶ): ಹೈದರಾಬಾದ್ ಉದ್ಯಮಿಯೊಬ್ಬರನ್ನು ಗುರಿಯಾಗಿಸಿಕೊಂಡು ಒಟ್ಟು 80 ಲಕ್ಷ ಹಣವನ್ನು ವಂಚಿಸಿರುವ ಘಟನೆ ಕನಾಡಿಯ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹಣ ಡಬಲ್​ಗೊಳಿಸಲಾವುದೆಂದು ಆಮಿಷವೊಡ್ಡುವ ಮೂಲಕ ಹೈದರಾಬಾದ್​ ಉದ್ಯಮಿಗೆ 80 ಲಕ್ಷ ಹಣವನ್ನು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಪರಾರಿಯಾಗಿರುವ ಮತ್ತೊಬ್ಬ ಆರೋಪಿಗಾಗಿ ಬಲೆ ಬೀಸಿದ್ದಾರೆ.

ಡಿಸೆಂಬರ್‌ನಲ್ಲಿ ವಂಚನೆ

ಹೈದರಾಬಾದ್​ ಉದ್ಯಮಿಗೆ ಇಂದೋರ್​ನಲ್ಲಿ ವಂಚನೆ

ಕಳೆದ ವರ್ಷ ಡಿಸೆಂಬರ್‌ನಲ್ಲಿ ಕನಾಡಿಯಾದ ಪೊಲೀಸರು ಹೈದರಾಬಾದ್‌ನಲ್ಲಿ ಉದ್ಯಮಿಯೊಬ್ಬರ ದೂರಿನ ಮೇರೆಗೆ ನಾಲ್ಕು ಜನರ ವಿರುದ್ಧ ವಂಚನೆ ಮಾಡಿದ ಅಪರಾಧವನ್ನು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಬಗ್ಗೆ ಶೋಧ ಕಾರ್ಯ ನಡೆಸುತ್ತಿದ್ದೇವೆ ಎಂದು ಕನಾಡಿಯಾ ಪೊಲೀಸ್​ ಠಾಣೆಯ ಇನ್​ಚಾರ್ಜ್​ ರಾಜೀವ್ ಭದೌರಿಯಾ ಹೇಳಿದ್ದಾರೆ.

ಇಂದೋರ್‌ನ ವಿವಿಧ ಪೊಲೀಸ್ ಠಾಣೆಗಳಲ್ಲಿ ಇಂತಹ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಪ್ರಕರಣಗಳ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಾರೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ABOUT THE AUTHOR

...view details