ಕರ್ನಾಟಕ

karnataka

ETV Bharat / bharat

ಮಹಾಬಲಿಪುರಂನಲ್ಲಿ ಮೋದಿ - ಕ್ಸಿ ಜಿನ್‌ಪಿಂಗ್ ಭೇಟಿ: ಇಂಡೋ- ಚೀನಾ ಸಂಬಂಧದ ಇತಿಹಾಸ ಏನು ಗೊತ್ತೇ? - ಇಂಡೋ-ಚಿನಾ ಸಂಬಂಧ

ತಮಿಳುನಾಡಿನ ಮಹಾಬಲಿಪುರಂನಲ್ಲಿ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭೇಟಿ ಯಾಗಲಿದ್ದು, ಪುರಾತತ್ವಶಾಸ್ತ್ರಜ್ಞ ರಾಜವೇಲ ಸಾಂಪ್ರದಾಯಿಕ ಯುಗದ ಕಾಲದಲ್ಲಿ ಮಹಾಬಲಿಪುರಂ ಮತ್ತು ಚೀನಾ ನಡುವೆ ಇದ್ದ ಸಂಬಂಧದ ಬಗ್ಗೆ ವಿವರಿಸಿದ್ದಾರೆ.

ಮಹಾಬಲಿಪುರಂನಲ್ಲಿ ಮೋದಿ- ಕ್ಸಿ ಜಿನ್‌ಪಿಂಗ್ ಭೇಟಿ

By

Published : Oct 9, 2019, 2:08 PM IST

ಮಹಾಬಲಿಪುರಂ:ಭಾರತದ ಜತೆ ದ್ವಿಪಕ್ಷೀಯ ಮಾತುಕತೆಗಾಗಿ ಅಕ್ಟೋಬರ್​​​ 11ರಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆಗಮಿಸುತ್ತಿದ್ದು, ತಮಿಳುನಾಡಿನ ಮಹಾಬಲಿಪುರಂನಲ್ಲಿ ಪ್ರಧಾನಿ ಮೋದಿ ಮತ್ತು ಕ್ಸಿ ಜಿನ್‌ಪಿಂಗ್ ಭೇಟಿ ಆಗಲಿದ್ದಾರೆ.

ಮಹಾಬಲಿಪುರಂನಲ್ಲಿ ಮೋದಿ- ಕ್ಸಿ ಜಿನ್‌ಪಿಂಗ್ ಭೇಟಿ

ಮಹಾಬಲಿಪುರಂನಲ್ಲಿ ಮೋದಿ ಚೀನಾ ಅಧ್ಯಕ್ಷರನ್ನ ಭೇಟಿ ಹಿನ್ನೆಲೆಯಲ್ಲಿ ತಮಿಳುನಾಡಿನ ಪುರಾತತ್ವಶಾಸ್ತ್ರಜ್ಞ ರಾಜವೇಲ ಅವರು ಸಾಂಪ್ರದಾಯಿಕ ಯುಗದ ಕಾಲದಲ್ಲಿ ಮಹಾಬಲಿಪುರಂ ಮತ್ತು ಚೀನಾ ನಡುವೆ ಇದ್ದ ಸಂಬಂಧವನ್ನ ವಿವರಿಸಿದ್ದಾರೆ.

ಮಹಾಬಲಿಪುರಂ ಅಥವಾ ಮಮಲ್ಲಪುರಂ, ಬಹು ಹಿಂದಿನ ಕಾಲದಿಂದದಲೂ ಚೀನಾದೊಂದಿಗೆ ಸಂಪರ್ಕ ಹೊಂದಿತ್ತು ಎಂದು ರಾಜವೇಲ ಅವರು ತಿಳಿಸದ್ದಾರೆ. ಕ್ರಿ.ಪೂ 300 ರಿಂದ ಕ್ರಿ.ಶ 300ರ ಕಾಲದಲ್ಲಿ ಪಲ್ಲವರು, ಚೋಳರು, ಪಾಂಡ್ಯರು ಮತ್ತು ವಿಜಯನಗರದ ಕಾಲಗಟ್ಟದಲ್ಲಿ ಐತಿಹಾಸಿಕ ನಗರ ಮಹಾಬಲಿಪುರಂ ವಿಶೇಷ ಸ್ಥಾನ ಹೊಂದಿತ್ತು.

ಅದರಲ್ಲೂ ಪಲ್ಲವರ ಕಾಲದಲ್ಲಿ ಚೀನಾ ಮತ್ತು ಮಹಾಬಲಿಪುರಂ ಉತ್ತಮವಾದ ನಂಟು ಹೊಂದಿದ್ದವು ಎಂದಿದ್ದಾರೆ. ಕ್ರಿ.ಪೂ. 378-320ರ ಚೀನಿ ರಾಜ ವೀ ತಮಿಳುನಾಡಿಗೆ ವ್ಯಾಪಾರಕ್ಕಾಗಿ ಚೀನಿ ವ್ಯಾಪಾರಿಗಳನ್ನ ಕಳುಹಿಸಿಕೊಟ್ಟಿದ್ದ ಎಂದು ಇತಿಹಾಸ ಹೇಳುತ್ತದೆ. ಪಲ್ಲವರ ರಾಜ ಕೂಡ ತನ್ನ ರಾಯಭಾರಿಗಳನ್ನ ಚೀನಾಕ್ಕೆ ಕಳುಹಿಸಿದ್ದರು ಎಂದು ರಾಜವೇಲ್ ಮಾಹಿತಿ ನೀಡಿದ್ದಾರೆ.

ಪಲ್ಲವರು ಚೀನಾದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರಲ್ಲದೇ ವ್ಯಾಪಾರಕ್ಕಾಗಿ ಸಮುದ್ರ ಮಾರ್ಗವನ್ನ ಅನುಸರಿಸುತ್ತಿದ್ದರು. ಮುಂದೆ ಚೋಳರು ಕೂಡ ಚೀನಾದೊಂದಿಗೆ ಉತ್ತಮ ವ್ಯಾಪಾರ ಸಂಪರ್ಕ ಹೊಂದಿದ್ದರು ಎಂದು ಇತಿಹಾಸವನ್ನ ಬಿಚ್ಚಿಟ್ಟಿದ್ದಾರೆ.

ABOUT THE AUTHOR

...view details