ನವದೆಹಲಿ: ರಾಷ್ಟ್ರಾದ್ಯಂತ ಲಾಕ್ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಇಂಡಿಗೋ ಏರ್ಲೈನ್ಸ್ ಏಪ್ರಿಲ್ 30ರವರೆಗೆ ತನ್ನ ಹಾರಾಟವನ್ನು ರದ್ದು ಮಾಡಿದೆ. ಇದರಿಂದಾಗಿ ಅಂತಾರಾಷ್ಟ್ರೀಯ ವಿಮಾನಯಾನ ಯಾನ ಸೇವೆ ರದ್ದಾಗಲಿದೆ.
ಇಂಡಿಗೋ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಏಪ್ರಿಲ್ 30ರ ವರೆಗೆ ಬ್ಯಾನ್..! - ಕೊರೊನಾ
ಇಂಡಿಗೋ ಏರ್ಲೈನ್ಸ್ ಏಪ್ರಿಲ್ 30ರ ವರೆಗೆ ತನ್ನ ವಿಮಾನಯಾನ ಸೇವೆಯನ್ನು ರದ್ದು ಮಾಡಿದೆ. ಈ ಕುರಿತು ಟ್ವೀಟ್ ಮಾಡಿದ್ದು, ನಿಮ್ಮ ಹಣ ನಮ್ಮ ಬಳಿ ಸುರಕ್ಷಿತವಾಗಿದೆ ಎಂದು ಸ್ಪಷ್ಟನೆ ನೀಡಿದೆ.
ಈ ಬಗ್ಗೆ ಟ್ವೀಟಿಸಿರುವ ಇಂಡಿಗೋ ''ನಾವು ಅಂತಾರಾಷ್ಟ್ರೀಯ ವಿಮಾನಯಾವನ್ನು ರದ್ದು ಮಾಡುತ್ತಿದ್ದೇವೆ. ಈಗಾಗಲೇ ಟಿಕೆಟ್ ಬುಕ್ ಮಾಡಿರುವವರ ಹಣ ನಮ್ಮಲ್ಲಿ ಸುರಕ್ಷಿತವಾಗಿದ್ದು, ಒಂದು ವರ್ಷದೊಳಗೆ ಯಾವಾಗ ಬೇಕಾದರೂ ವಾಪಸ್ ತೆಗೆದುಕೊಳ್ಳಬಹುದು'' ಎಂದು ಸ್ಪಷ್ಟಪಡಿಸಿದೆ.
ಭಾರತದಲ್ಲಿ ಲಾಕ್ಡೌನ್ 21 ದಿನಗಳ ಕಾಲ ಘೋಷಣೆಯಾಗಿತ್ತು. ಈಗ ಇನ್ನೂ ಮುಂದುವರೆಯುವ ಸೂಚನೆ ಇರುವ ಕಾರಣದಿಂದ ವಿಮಾನಯಾನ ಸೇವೆ ರದ್ದು ಮಾಡಲಾಗಿದೆ. ನಾಗರಿಕ ವಿಮಾನಯಾನ ಖಾತೆ ಸಚಿವ ಹರದೀಪ್ ಸಿಂಗ್ ಪುರಿ ಕೊರೊನಾ ನಿಯಂತ್ರಣಕ್ಕೆ ಬಂದಾಗ ವಿಮಾನಗಳು ಹಾರಾಡಲು ಅನುಮತಿ ನೀಡುವುದಾಗಿ ಹೇಳಿದ್ದರು.