ಕರ್ನಾಟಕ

karnataka

ETV Bharat / bharat

ಸ್ಪಲ್ಪದರಲ್ಲೇ ತಪ್ಪಿದ ಭಾರೀ ಅನಾಹುತ.. ಹಿಮದ ರಾಶಿಗೆ ಇಂಡಿಗೋ ವಿಮಾನ ಡಿಕ್ಕಿ - ಶ್ರೀನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ

ಮೂಲಗಳ ಪ್ರಕಾರ ವಿಮಾನವು ಹಿಮರಾಶಿಯ ಹತ್ತಿರ ಬರುತ್ತಿರುವಾಗಲೇ ಅದರ ವೇಗ ಕಡಿಮೆಯಾಗಿತ್ತು ಎನ್ನಲಾಗಿದೆ..

Indigo aircraft survives snow crash at Srinagar Airport
ಹಿಮದ ರಾಶಿಗೆ ಇಂಡಿಗೋ ವಿಮಾನದ ಡಿಕ್ಕಿ

By

Published : Jan 13, 2021, 8:18 PM IST

ಶ್ರೀನಗರ :ಇಲ್ಲಿನ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಪ್ರಯಾಣಿಕರ ವಿಮಾನವೊಂದು ಹಿಮಕ್ಕೆ ಡಿಕ್ಕಿ ಹೊಡೆದಿದ್ದು, ಸ್ಪಲ್ಪದರಲ್ಲೇ ಬಹುದೊಡ್ಡ ಅಪಘಾತದಿಂದ ಪಾರಾಗಿದೆ. ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ಹಿಮದ ರಾಶಿಗೆ ತಾಕಿದ್ದು, ಇಂಜಿನ್ ಬ್ಲೇಡ್​​ಗಳಿಗೆ ಹಾನಿಯಾಗಿದೆ.

ಅದೃಷ್ಟವಶಾತ್ ಘಟನೆಯಲ್ಲಿ ಯಾವೊಬ್ಬ ಸಿಬ್ಬಂದಿ ಹಾಗೂ ಪ್ರಯಾಣಿಕರಿಗೆ ಗಾಯವಾಗಿಲ್ಲ. ಆದರೆ, ವಿಮಾನಕ್ಕೆ ಹಾನಿಯಾಗಿದೆ. ಈ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿದ ಶ್ರೀನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕರು, ಇಂಡಿಗೋ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಕರನ್ನು ಸುರಕ್ಷಿತವಾಗಿ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದಿದ್ದಾರೆ.

ಮೂಲಗಳ ಪ್ರಕಾರ ವಿಮಾನವು ಹಿಮರಾಶಿಯ ಹತ್ತಿರ ಬರುತ್ತಿರುವಾಗಲೇ ಅದರ ವೇಗ ಕಡಿಮೆಯಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ:'ಮೇಕ್​ ಇನ್ ಇಂಡಿಯಾ'ಗೆ ಮತ್ತಷ್ಟು ಬಲ: HALನಿಂದ 83 ತೇಜಸ್​ ಯುದ್ಧ ವಿಮಾನ ಖರೀದಿಗೆ ಕೇಂದ್ರ ಒಪ್ಪಿಗೆ!

ABOUT THE AUTHOR

...view details