ಕರ್ನಾಟಕ

karnataka

ETV Bharat / bharat

24 ಗಂಟೆಯಲ್ಲಿ18,522 ಹೊಸ ಕೇಸ್​​:  ದೇಶದಲ್ಲಿ 5,66,840ಕ್ಕೆ ತಲುಪಿದ ಸೋಂಕಿತರ ಸಂಖ್ಯೆ - ಭಾರತದಲ್ಲಿ ಗುಣಮಖರಾದವರ ಸಂಖ್ಯೆ

ಮಂಗಳವಾರ 24 ಗಂಟೆಯೊಳಗೆ ದೇಶದಲ್ಲಿ 418 ಜನರು ಕೋವಿಡ್​ಗೆ ಬಲಿಯಾಗಿದ್ದಾರೆ. ಈ ಮೂಲಕ ಒಟ್ಟು ಮೃತಪಟ್ಟವರ ಸಂಖ್ಯೆ, 16,893 ಆಗಿದೆ. ಸದ್ಯ, 2,15,125 ಸಕ್ರೀಯ ಪ್ರಕರಣಗಳಿದ್ದು, ಇದುವರೆಗೆ 3,34,821 ಮಂದಿ ಗುಣಮುಖರಾಗಿದ್ದಾರೆ.

India's COVID-19 tally
ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ

By

Published : Jul 1, 2020, 8:13 AM IST

ನವದೆಹಲಿ : ಮಂಗಳವಾರ ದೇಶದಲ್ಲಿ ಒಟ್ಟು 18,522 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 5,66,840 ಆಗಿದೆ ಎಂದು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ, ಮಂಗಳವಾರ 24 ಗಂಟೆಯೊಳಗೆ 418 ಜನರು ಕೋವಿಡ್​ಗೆ ಬಲಿಯಾಗಿದ್ದಾರೆ. ಈ ಮೂಲಕ ಒಟ್ಟು ಮೃತಪಟ್ಟವರ ಸಂಖ್ಯೆ, 16,893 ಆಗಿದೆ. ಸದ್ಯ, 2,15,125 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೆ 3,34,821 ಮಂದಿ ಗುಣಮುಖರಾಗಿದ್ದಾರೆ.

ಸದ್ಯ ಸಕ್ರಿಯ ಪ್ರಕರಣಗಳಿಗಿಂತ 1,19,696 ಹೆಚ್ಚು ಜನ ಚೇತರಿಸಿಕೊಂಡಿದ್ದಾರೆ. ಇದರಿಂದಾಗಿ ಚೇತರಿಕೆ ಪ್ರಮಾಣ ಏರಿಕೆಯಾಗಿದ್ದು, ಶೇ. 59.07 ಆಗಿದೆ. ಮಂಗಳವಾರ 24 ಗಂಟೆಯ ಅವಧಿಯಲ್ಲಿ ಒಟ್ಟು 13,099 ಮಂದಿ ಗುಣ ಮುಖರಾಗಿದ್ದಾರೆ. ದೇಶದಲ್ಲಿ ಹೊಸದಾಗಿ 1049 ಡಯಗ್ನೋಸ್ಟಿಕ್ ಲ್ಯಾಬ್​ಗಳನ್ನು ಕೋವಿಡ್​ ಚಿಕಿತ್ಸೆಗೆಂದು ಮೀಸಲಿಡಲಾಗಿದೆ. ಈ ಪೈಕಿ 761 ಸರ್ಕಾರಿ ಮತ್ತು 288 ಖಾಸಗಿ ಲ್ಯಾಬ್​ಗಳಿವೆ ಎಂದು ಸಚಿವಾಲಯ ತಿಳಿಸಿದೆ.

ಮಹಾರಾಷ್ಟ್ರದಲ್ಲಿ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು, ಮಂಗಳವಾರ 4,878 ಹೊಸ ಪ್ರಕರಣಗಳು ದಾಖಲಾಗಿವೆ. 245 ಮಂದಿ ಮೃತಪಟ್ಟಿದ್ದಾರೆ. ರಾಜ್ಯ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಸದ್ಯ, 75,979 ಸಕ್ರಿಯ ಪ್ರಕರಣಗಳಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,74,761 ಆಗಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ಜುಲೈ 31 ರವರೆಗೆ ಲಾಕ್ ಡೌನ್​ ವಿಸ್ತರಿಸಿದೆ.

ಇನ್ನು, ತಮಿಳುನಾಡಿನಲ್ಲಿ ಮಂಗಳವಾರ 3,943 ಹೊಸ ಪ್ರಕರಣಗಳು ದಾಖಲಾಗಿದ್ದು, 60 ಮಂದಿ ಮೃತಪಟ್ಟಿದ್ದಾರೆ. ಸದ್ಯ, 38,889 ಸಕ್ರಿಯ ಪ್ರಕರಣಗಳಿದ್ದು, 50,074 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ 1,201 ಮಂದಿ ಮೃತಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 90,167 ಆಗಿದೆ.

ರಾಜಧಾನಿ ದೆಹಲಿಯಲ್ಲಿ ಮಂಗಳವಾರ 2,199 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 87,360 ಆಗಿದೆ. ಸದ್ಯ 26,270 ಸಕ್ರಿಯ ಪ್ರಕರಣಗಳಿದ್ದು, 58,348 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ 2,742 ಮಂದಿ ಮೃತಪಟ್ಟಿದ್ದಾರೆ.

ಮಂಗಳವಾರ 24 ಗಂಟೆಯ ಅವಧಿಯಲ್ಲಿ ಗುಜರಾತ್​ನಲ್ಲಿ 620 ಹೊಸ ಪ್ರಕರಣಗಳು ದಾಖಲಾಗಿದ್ದು, 20 ಮಂದಿ ಮೃತಪಟ್ಟಿದ್ದಾರೆ. ರಾಜ್ಯ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ಇದುವರೆಗೆ 23,670 ಮಂದಿ ಗುಣಮುಖರಾಗಿದ್ದು, 1,848 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 32,446 ಆಗಿದೆ.

ABOUT THE AUTHOR

...view details