ಹರಿಯಾಣ: 'ಮಿನಿ ಕ್ಯೂಬಾ' ಎಂದು ಪ್ರಸಿದ್ಧಿ ಪಡೆದ ಹರಿಯಾಣದ ಭಿವಾನಿ ಜಿಲ್ಲೆಯ, ಬಾಕ್ಸರ್‌ಗಳ ಶಕ್ತಿ ಇಡೀ ಜಗತ್ತಿಗೆ ಗೊತ್ತಿದೆ. ಹರಿಯಾಣದ ಆರು ಬಾಕ್ಸರ್ಗಳಲ್ಲಿ ಮೂವರು 21 ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಆಡಿದ್ದರು. ಅವರಲ್ಲಿ ವಿಕಾಸ್ ಯಾದವ್ ಚಿನ್ನ, ಮನೀಶ್ ಕೌಶಿಕ್ ಬೆಳ್ಳಿ ಮತ್ತು ನಮನ್ ಕಂಚಿನ ಪದಕ ಗೆದ್ದಿದ್ದಾರೆ.
ಭಿವಾನಿ ಜಿಲ್ಲೆಯಲ್ಲಿ ಸುಮಾರು 2,000 ಬಾಕ್ಸರ್ಸ್ ಮತ್ತು 20 ಸಾವಿರ ಕ್ರೀಡಾಪಟುಗಳು ಇದ್ದಾರೆ. ಇಲ್ಲಿ 2,000 ಬಾಕ್ಸರ್‌ಗಳು ನಿತ್ಯ ಬಾಕ್ಸಿಂಗ್ ಅಭ್ಯಾಸ ಮಾಡುತ್ತಾರೆ. ಇದು ಭಿವಾನಿಗೆ 'ಮಿನಿ ಕ್ಯೂಬಾ' ಎಂಬ ಹೆಸರನ್ನು ತಂದು ಕೊಟ್ಟಿದೆ. ಭಿವಾನಿಯಲ್ಲಿ ಹೆಚ್ಚಿನ ಸಂಖ್ಯೆಯ ದೇವಾಲಯಗಳು ಇವೆ. ಆದ್ದರಿಂದ ಈ ಹಿಂದೆ ಇದನ್ನು ಚೋಟಾ ಕಾಶಿ ಎಂದು ಕರೆಯಲಾಗುತ್ತಿತ್ತು. ಆದರೆ, ಕಳೆದ ಎರಡು ದಶಕಗಳಲ್ಲಿ ಭಿವಾನಿಯ ಬಾಕ್ಸರ್‌ಗಳು ಜಗತ್ತಿನಲ್ಲಿ ಸಂಚಲನವನ್ನು ಸೃಷ್ಟಿಸಿದ್ದಾರೆ. ಆದ್ದರಿಂದ ಇದೀಗ ಭಿವಾನಿಯು 'ಮಿನಿ ಕ್ಯೂಬಾ' ಎಂದು ಪ್ರಸಿದ್ಧಿ ಪಡೆದಿದೆ.
ಬಾಕ್ಸರ್‌ಗಳ ತವರೂರು ಹರಿಯಾಣದ ಭಿವಾನಿ ಭಿವಾನಿಯನ್ನು ಬಾಕ್ಸಿಂಗ್‌ನ ಭದ್ರಕೋಟೆಯನ್ನಾಗಿ ಮಾಡುವಲ್ಲಿ ಭಿವಾನಿ ಬಾಕ್ಸಿಂಗ್ ಕ್ಲಬ್ ಪ್ರಮುಖ ಕೊಡುಗೆ ನೀಡಿದೆ. ಈ ಕ್ಲಬ್ ಅನೇಕ ಅಂತಾರಾಷ್ಟ್ರೀಯ ಬಾಕ್ಸರ್ಗಳನ್ನು ದೇಶಕ್ಕೆ ನೀಡಿದೆ. ಈ ಬಾಕ್ಸಿಂಗ್ ಕ್ಲಬ್ ಅನ್ನು 17 ಫೆಬ್ರವರಿ 2003 ರಂದು ಸ್ಥಾಪಿಸಲಾಯಿತು. ಒಲಿಂಪಿಕ್ ಪದಕ ವಿಜೇತ ವಿಜೇಂದರ್ ಸಿಂಗ್ ಬಾಲ್ಯದಲ್ಲಿ ಭಿವಾನಿ ಬಾಕ್ಸಿಂಗ್ ಕ್ಲಬ್‌ನಲ್ಲಿ, ತಮ್ಮ ಬಾಕ್ಸಿಂಗ್ ಪ್ರಾರಂಭಿಸಿದರು. ಇಲ್ಲಿಂದ ತರಬೇತಿ ಪಡೆದ ಅನೇಕ ಆಟಗಾರರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಟಾರ್ ಬಾಕ್ಸರ್ ಎಂದು ಸಾಬೀತುಪಡಿಸಿದ್ದಾರೆ.
2008 ರ ಒಲಿಂಪಿಕ್ಸ್‌ನಲ್ಲಿ ವಿಜೇಂದರ್ ಕಂಚಿನ ಪದಕ ಗೆದ್ದರು. ವಿಜೇಂದರ್ ಅವರಲ್ಲದೇ ಜಿತೇಂದ್ರ ಮತ್ತು ದಿನೇಶ್ ಅವರು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದಾರೆ. ಬಾಕ್ಸಿಂಗ್ ಕ್ಲಬ್ ತರಬೇತುದಾರ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಜಗದೀಶ್ ಸಿಂಗ್ ಕೂಡ ಇದರ ಸ್ಥಾಪಕರಲ್ಲೊಬ್ಬರು.
1966 ರ ದಶಕದಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಇಲ್ಲಿನ ಹವಾ ಸಿಂಗ್ ಚಿನ್ನದ ಪದಕ ಗೆದ್ದು, ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದರು. ನಾಲ್ಕು ವರ್ಷಗಳ ನಂತರ 1970 ರಲ್ಲಿ ಮತ್ತೆ ಚಿನ್ನದ ಪದಕ ಗೆದ್ದ ಅವರು, ಸತತ ಎರಡು ಏಷ್ಯನ್ ಕ್ರೀಡಾಕೂಟಗಳಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಹವಾ ಸಿಂಗ್ ಅವರ ಅತ್ಯುತ್ತಮ ಆಟಕ್ಕಾಗಿ 1966 ರಲ್ಲಿ ಅರ್ಜುನ ಪ್ರಶಸ್ತಿ ನೀಡಲಾಯಿತು.
ಭಿವಾನಿಗೆ ಮಿನಿ ಕ್ಯೂಬಾ ಎಂಬ ಹೆಸರು ಸುಲಭವಾಗಿ ಸಿಕ್ಕಿಲ್ಲ, ಆದರೆ, ಇದರ ಹಿಂದೆ ಕಳೆದ ಎರಡು ದಶಕಗಳ ಬಾಕ್ಸರ್‌ಗಳ ದಣಿವರಿಯದ ಶ್ರಮವಿದೆ. ಇನ್ನು ಭಿವಾನಿಯು ವಿಜೇಂದರ್ ಸಿಂಗ್, ಅಖಿಲ್ ಕುಮಾರ್, ಜಿತೇಂದ್ರ ಸಿಂಗ್, ದಿನೇಶ್ ಕುಮಾರ್, ವಿಕಾಶ್ ಕೃಷ್ಣನ್ ಮತ್ತು ರಾಜ್ ಕುಮಾರ್ ಸಾಂಗ್ವಾನ್ರಂತಹ ಅಂತಾರಾಷ್ಟ್ರೀಯ ಕ್ರೀಡಾಪಟುಗಳನ್ನು ದೇಶಕ್ಕೆ ನೀಡಿದೆ.
ಖೇಲ್ ರತ್ನ ಪ್ರಶಸ್ತಿಯಿಂದ ಅರ್ಜುನ ಪ್ರಶಸ್ತಿಯಂತಹ ಉನ್ನತ ಪ್ರಶಸ್ತಿಗಳವರೆಗೆ ಭಿವಾನಿ ಜಿಲ್ಲೆಯ ಬಾಕ್ಸರ್‌ಗಳು ಪಡೆದುಕೊಂಡಿದ್ದಾರೆ. ಭಿವಾನಿ ಜಿಲ್ಲೆಯ ಬಾಕ್ಸರ್‌ಗಳು ಈವರೆಗೆ 14 ಅರ್ಜುನ ಪ್ರಶಸ್ತಿಗಳು, ಒಂದು ಖೇಲ್ ರತ್ನ ಪ್ರಶಸ್ತಿ ಪಡೆದಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಈವರೆಗೆ 6 ಪದಕಗಳನ್ನು ಗೆದ್ದಿದ್ದು, ಇದರಲ್ಲಿ ಮೂವರು ಭಿವಾನಿ ಬಾಕ್ಸರ್‌ಗಳಾದ ವಿಜೇಂದರ್ ಸಿಂಗ್, ವಿಕಾಸ್ ಕೃಷ್ಣನ್ ಮತ್ತು ಮನೀಶ್ ಕೌಶಿಕ್ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇನ್ನು ಭಿವಾನಿ ಜಿಲ್ಲೆಯ ಸುಮಾರು 10 ಒಲಿಂಪಿಕ್ ಬಾಕ್ಸರ್‌ಗಳು ಇದ್ದಾರೆ..