ನೀಲಗಿರಿ:ದೇಶದಲ್ಲಿ ಮೊದಲ ಬಾರಿಗೆ ಅರಣ್ಯ ವಲಯದಲ್ಲಿ ಮಂಗಳಮುಖಿಯೊಬ್ಬರು ಕಾರ್ಯ ಕೈಗೊಂಡಿದ್ದಾರೆ.
ದೇಶದಲ್ಲಿ ಮೊದಲ ಬಾರಿಗೆ ಅರಣ್ಯ ಇಲಾಖೆಯಲ್ಲಿ ಮಂಗಳಮುಖಿ ಕಾರ್ಯ - ನೀಲಗಿರಿ ಅರಣ್ಯಾಧಿಕಾರಿಯಾಗಿ ಭಾರತದ ಮೊದಲ ಟ್ರಾನ್ಸ್ಜೆಂಡರ್
ತಮಿಳುನಾಡಿನಲ್ಲಿ ದೇಶದಲ್ಲೇ ಮೊದಲ ಬಾರಿಗೆ ಟ್ರಾನ್ಸ್ಜೆಂಡರ್ವೊಬ್ಬರು ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಹೌದು, ತಮಿಳುನಾಡಿನ ನೀಲಗಿರಿ ಜಿಲ್ಲೆಯ ಅರಣ್ಯ ವಿಭಾಗದಲ್ಲಿ ದೀಪ್ತಿ ಕೇಲಸ ಮಾಡ್ತಿದ್ದಾರೆ. ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಬ್ರಮಣಿ ಕುಡಿಯಾಗಿರುವ ದೀಪ್ತಿ ಬಿಕಾಂ ಪದವಿ ಪಡೆದಿದ್ದಾರೆ. 2007ರಲ್ಲಿ ರಸ್ತೆ ಅಪಘಾತದಲ್ಲಿ ದೀಪ್ತಿ ತನ್ನ ತಂದೆಯನ್ನು ಕಳೆದುಕೊಂಡಿದ್ದರು. ಇನ್ನು ದೀಪ್ತಿಗೆ ಸರ್ಕಾರಿ ಉದ್ಯೋಗ ಪಡೆಯುವ ಹಂಬಲ ಹೊಂದಿದ್ದರು. ಇದಕ್ಕಾಗಿ ದೀಪ್ತಿ ಹಗಲಿರುಳು ಹೋರಾಡಿದ್ದರು.
ನಿವೃತ್ತಿ ಮುಂಚೆಗೆ ತಂದೆ ಸಾವನ್ನಪ್ಪಿರುವುದರಿಂದ ಅವರ ಉದ್ಯೋಗವನ್ನು ಮಕ್ಕಳಿಗೆ ಪಡೆಯುವ ಹಕ್ಕಿದೆ. ಅದರಂತೆ ತಮಿಳುನಾಡು ಸರ್ಕಾರ ಸುಬ್ರಮಣಿ ಉದ್ಯೋಗವನ್ನು ದೀಪ್ತಿಗೆ ನೀಡಿ ಆದೇಶ ಹೊರಡಿಸಿತ್ತು. ನಿನ್ನೆ ಆದೇಶ ಪತ್ರವನ್ನು ನೀಲಗಿರಿ ಅರಣ್ಯವಲಯಕ್ಕೆ ನೀಡಿ ತಮ್ಮ ಕಾರ್ಯ ಕೈಗೊಂಡರು. ಇದರಿಂದಾಗಿ ದೀಪ್ತಿ ಅವರ ಸರ್ಕಾರಿ ಆಸೆ ಈಡೇರಿದಂತಾಯಿತು.