ನವದೆಹಲಿ:ಭಾರತದಲ್ಲಿ ಕೋವಿಡ್ಗೆ ಬಲಿಯಾದವರ ಸಂಖ್ಯೆ ಲಕ್ಷ ಗಡಿ ತಲುಪುತ್ತಿದೆ. ದೇಶದಲ್ಲಿನ 63 ಲಕ್ಷ ಕೇಸ್ಗಳ ಪೈಕಿ ಶೇ.83ಕ್ಕೂ ಅಧಿಕ ಅಂದರೆ 53 ಲಕ್ಷ ಸೋಂಕಿತರು ಚೇತರಿಸಿಕೊಂಡಿದ್ದಾರೆ.
ಕಳೆದ 24 ಗಂಟೆಗಳಲ್ಲಿ 81,484 ಸೋಂಕಿತರು ಪತ್ತೆಯಾಗಿದ್ದು, 1,095 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 63,94,069 ಹಾಗೂ ಮೃತರ ಸಂಖ್ಯೆ 99,773ಕ್ಕೆ ಏರಿಕೆಯಾಗಿದೆ.
ಒಟ್ಟು ಸೋಂಕಿತರ ಪೈಕಿ 53,52,078 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ 9,42,217 ಕೇಸ್ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಕೋವಿಡ್ ಟೆಸ್ಟಿಂಗ್ ಅಪ್ಡೇಟ್ಸ್ ಅಕ್ಟೋಬರ್ 1ರವರೆಗೆ 7,67,17,728 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 10,97,947 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.
ಕೋವಿಡ್ ಪೀಡಿತ ರಾಜ್ಯಗಳ ಪೈಕಿ ಮೊದಲ ಐದು ಸ್ಥಾನಗಳಲ್ಲಿ ಮಹಾರಾಷ್ಟ್ರ (14,00,922 ಕೇಸ್), ಆಂಧ್ರಪ್ರದೇಶ (7,00,000), ಕರ್ನಾಟಕ (6,01,767), ತಮಿಳುನಾಡು (5,97,602) ಹಾಗೂ ಉತ್ತರ ಪ್ರದೇಶ (4,00,000) ರಾಜ್ಯಗಳಿವೆ.