ನವದೆಹಲಿ: ಪ್ರಪಂಚದ ಕೋವಿಡ್ ಪೀಡಿತ ರಾಷ್ಟ್ರಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 75 ಲಕ್ಷ ಗಡಿ ದಾಟಿದೆ. ಆದರೆ 66 ಲಕ್ಷ ಜನರು ಮಹಾಮಾರಿಯಿಂದ ಚೇತರಿಸಿಕೊಂಡಿದ್ದಾರೆ.
ಈ ಹಿಂದಿನ ತಿಂಗಳುಗಳಿಗೆ ಹೋಲಿಸಿದರೆ ನಿನ್ನೆ ದೇಶದಲ್ಲಿ ಕಡಿಮೆ ಹೊಸ ಕೋವಿಡ್ ಕೇಸ್ಗಳು ಹಾಗೂ ಸಾವು ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ 55,722 ಸೋಂಕಿತರು ಪತ್ತೆಯಾಗಿದ್ದು, 579 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 75,50,273 ಹಾಗೂ ಮೃತರ ಸಂಖ್ಯೆ 1,14,610ಕ್ಕೆ ಏರಿಕೆಯಾಗಿದೆ.