ಕರ್ನಾಟಕ

karnataka

'ಕೋವಿಡ್ ಭಾರತ': ಒಂದೇ ದಿನ 55 ಸಾವಿರ ಕೇಸ್​ ಪತ್ತೆ: 16 ಲಕ್ಷ ಗಡಿ ದಾಟಿದ ಸೋಂಕಿತರು

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 16,38,871 ಹಾಗೂ ಮೃತರ ಸಂಖ್ಯೆ 35,747ಕ್ಕೆ ಏರಿಕೆಯಾಗಿದೆ.

By

Published : Jul 31, 2020, 10:17 AM IST

Published : Jul 31, 2020, 10:17 AM IST

India's COVID tally crosses 16 lakh mark
ಕೋವಿಡ್ ಭಾರತ

ನವದೆಹಲಿ: ಕಿಲ್ಲರ್​​ ಕೊರೊನಾ ಆರ್ಭಟಕ್ಕೆ ಭಾರತ ತಲ್ಲಣಗೊಂಡಿದ್ದು, ಪ್ರಕರಣಗಳ ಸಂಖ್ಯೆ 16 ಲಕ್ಷದ ಗಡಿ ಹಾಗೂ ಸಾವಿನ ಸಂಖ್ಯೆ 35,747ಕ್ಕೆ ಏರಿಕೆ ಆಗಿದೆ.

ಕಳೆದ 24 ಗಂಟೆಗಳಲ್ಲಿ ಈವರೆಗೆ ಅತಿ ಹೆಚ್ಚು ಪ್ರಕರಣಗಳು ಎಂಬಂತೆ ಬರೋಬ್ಬರಿ 55,079 ಸೋಂಕಿತರು ಪತ್ತೆಯಾಗಿದ್ದು, 779 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 16,38,871 ಹಾಗೂ ಮೃತರ ಸಂಖ್ಯೆ 35,747ಕ್ಕೆ ಏರಿಕೆಯಾಗಿದೆ.

ಒಟ್ಟು ಸೋಂಕಿತರ ಪೈಕಿ 10,57,806 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್​​​​​ ಆಗಿದ್ದಾರೆ. ಉಳಿದಂತೆ 5,45,318 ಕೇಸ್​​ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

For All Latest Updates

ABOUT THE AUTHOR

...view details