ನವದೆಹಲಿ: ಭಾರತದಲ್ಲಿ ಕೊರೊನಾ ಅಬ್ಬರಿಸುತ್ತಿದ್ದು, ಕೇವಲ ಎರಡೇ ದಿನದಲ್ಲಿ ಲಕ್ಷ ಸನಿಹ ಕೇಸ್ಗಳು ವರದಿಯಾಗುತ್ತಿವೆ. ಇದೀಗ ಸೋಂಕಿತರ ಸಂಖ್ಯೆ 13 ಲಕ್ಷ ಗಡಿ ದಾಟಿದೆ.
ದೇಶದಲ್ಲಿ ಕೊರೊನಾರ್ಭಟ: 13 ಲಕ್ಷ ಗಡಿ ದಾಟಿದ ಕೇಸ್ಗಳ ಸಂಖ್ಯೆ!
ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 13,36,861 ಹಾಗೂ ಮೃತರ ಸಂಖ್ಯೆ 31,358ಕ್ಕೆ ಏರಿಕೆಯಾಗಿದೆ.
ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ
ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 48,916 ಪ್ರಕರಣಗಳು ಪತ್ತೆಯಾಗಿದ್ದು, 757 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 13,36,861 ಹಾಗೂ ಮೃತರ ಸಂಖ್ಯೆ 31,358ಕ್ಕೆ ಏರಿಕೆಯಾಗಿದೆ.
ಒಟ್ಟು ಸೋಂಕಿತರ ಪೈಕಿ 8,49,431 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ. ಉಳಿದಂತೆ 4,56,071 ಕೇಸ್ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.