ನವದೆಹಲಿ: ಕೋವಿಡ್ ಹೋರಾಟದಲ್ಲಿ ಜಾಗತಿಕವಾಗಿ ಭಾರತವು ಪ್ರತಿ ಮಿಲಿಯನ್ ಜನಸಂಖ್ಯೆಗೆ ಅತಿ ಕಡಿಮೆ ಸಾವುಗಳನ್ನು ಹೊಂದಿದೆ. 22 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಿಲಿಯನ್ ಜನಸಂಖ್ಯೆಗೆ ದೇಶದ ಸರಾಸರಿ ಸಾವಿನ ಸಂಖ್ಯೆಗಿಂತ ಕಡಿಮೆ ಸಾವು ವರದಿಯಾಗಿದೆ.
ಕಳೆದ 24 ಗಂಟೆಗಳಲ್ಲಿ 63,371 ಸೋಂಕಿತರು ಪತ್ತೆಯಾಗಿದ್ದು, 895 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 73,70,469 ಹಾಗೂ ಮೃತರ ಸಂಖ್ಯೆ 1,12,161ಕ್ಕೆ ಏರಿಕೆಯಾಗಿದೆ. ಆದರೆ ದೇಶದಲ್ಲಿ ಕೋವಿಡ್ ಮೃತರ ಪ್ರಮಾಣ ಶೇ. 1.52ರಷ್ಟು ಕುಸಿದಿದ್ದು, ಚೇತರಿಕೆಯ ಪ್ರಮಾಣ ಶೇ. 87.4ಕ್ಕೆ ಹೆಚ್ಚಳವಾಗಿದೆ.