ನವದೆಹಲಿ:ದೇಶದಲ್ಲಿ 58 ಲಕ್ಷ ಜನರು ಮಹಾಮಾರಿ ಕೊರೊನಾ ಸುಳಿಯಲ್ಲಿ ಸಿಲುಕಿದ್ದು, ಇವರಲ್ಲಿ ಶೇ. 81.55ರಷ್ಟು ಅಂದರೆ 47 ಲಕ್ಷ ಸೋಂಕಿತರು ಗುಣಮುಖರಾಗಿದ್ದಾರೆ.
ಸೆಪ್ಟೆಂಬರ್ 24ರವರೆಗೆ 6,89,28,440 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ ಈವರೆಗೆ ಅತಿ ಹೆಚ್ಚು ಎಂಬಂತೆ 14,92,409 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.
ಕೋವಿಡ್ ಟೆಸ್ಟಿಂಗ್ ಅಪ್ಡೇಟ್ಸ್ ಕಳೆದ 24 ಗಂಟೆಗಳಲ್ಲಿ 86,052 ಸೋಂಕಿತರು ಪತ್ತೆಯಾಗಿದ್ದು, 1,141 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 58,18,571 ಹಾಗೂ ಮೃತರ ಸಂಖ್ಯೆ 92,290ಕ್ಕೆ ಏರಿಕೆಯಾಗಿದೆ.
ಒಟ್ಟು ಸೋಂಕಿತರ ಪೈಕಿ 47,56,165 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ 9,70,116 ಕೇಸ್ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.