ಕರ್ನಾಟಕ

karnataka

ETV Bharat / bharat

10 ತಿಂಗಳಿಂದ ಈವರೆಗೂ.. ಭಾರತದಲ್ಲಿ ಅಬ್ಬರಿಸಿ ತಣ್ಣಗಾಗುತ್ತಿರುವ ಮಹಾಮಾರಿ - India's covid recovery rate

ಡಿಸೆಂಬರ್​ 18ರವರೆಗೆ 16 ಕೋಟಿಗೂ ಹೆಚ್ಚು (16,00,90,514) ಜನರಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದೆ. ನಿನ್ನೆ ಒಂದೇ ದಿನ 11,71,868 ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ..

India's COVID 19 case tally crosses the 1 crore mark
ದೇಶದಲ್ಲಿ ಒಂದು ಕೋಟಿ ಗಡಿ ದಾಟಿದ ಕೋವಿಡ್​ ಕೇಸ್​...!

By

Published : Dec 19, 2020, 10:11 AM IST

Updated : Dec 19, 2020, 10:20 AM IST

ನವದೆಹಲಿ :ಜಾಗತಿಕ ಮಹಾಮಾರಿ ಕೊರೊನಾ ಭಾರತಕ್ಕೆ ಕಾಲಿಟ್ಟು 10 ತಿಂಗಳು ಕಳೆದಿದೆ. ಈವರೆಗೆ ಒಂದು ಕೋಟಿ ಜನರಿಗೆ ಸೋಂಕು ಅಂಟಿರುವುದು ದೃಢಪಟ್ಟಿದೆ. ಈ ಹಿಂದಿನ ಕೆಲ ತಿಂಗಳುಗಳಿಗೆ ಹೋಲಿಸಿದರೆ ಸಾವು-ನೋವಿನ ಪ್ರಮಾಣದಲ್ಲಿ ಚೇತರಿಕೆ ಕಂಡುಬಂದಿದ್ದು, ಕೋವಿಡ್​ ವಿರುದ್ಧದ ದೇಶದ ಹೋರಾಟಕ್ಕೆ ಸಫಲತೆ ದೊರೆಯುತ್ತಿದೆ.

ಆರೋಗ್ಯ ಇಲಾಖೆ ಟ್ವೀಟ್​

ಕಳೆದ 24 ಗಂಟೆಗಳಲ್ಲಿ 25,153 ಸೋಂಕಿತರು ಪತ್ತೆಯಾಗಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ 1,00,04,599ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 1,45,136ಕ್ಕೆ ಹೆಚ್ಚಳವಾಗಿದ್ದರೂ ಮರಣ ಪ್ರಮಾಣ ಶೇ.1.45ಕ್ಕೆ ಇಳಿಕೆಯಾಗಿದೆ.

ಒಟ್ಟು ಸೋಂಕಿತರ ಪೈಕಿ ಶೇ.95.46ರಷ್ಟು ಅಂದ್ರೆ 95,50,712 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ. ಶೇ.3.09ರಷ್ಟು (3,08,751) ಕೇಸ್​​ಗಳು ಮಾತ್ರ ಸಕ್ರಿಯವಾಗಿವೆ. ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಕೋವಿಡ್​ ಟೆಸ್ಟಿಂಗ್​ ಅಪ್​ಡೇಟ್ಸ್​​

ಡಿಸೆಂಬರ್​ 18ರವರೆಗೆ 16 ಕೋಟಿಗೂ ಹೆಚ್ಚು (16,00,90,514) ಜನರಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದೆ. ನಿನ್ನೆ ಒಂದೇ ದಿನ 11,71,868 ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.

Last Updated : Dec 19, 2020, 10:20 AM IST

ABOUT THE AUTHOR

...view details