ಕರ್ನಾಟಕ

karnataka

By

Published : Aug 25, 2020, 10:15 AM IST

ETV Bharat / bharat

ದೇಶದಲ್ಲಿ 31 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ... 7 ಲಕ್ಷ ಕೇಸ್​ಗಳು ಮಾತ್ರ ಆ್ಯಕ್ಟೀವ್​​​​

ಭಾರತದಲ್ಲಿ ಕೋವಿಡ್​​ ಸೋಂಕಿತರ ಸಂಖ್ಯೆ 31,67,324 ಹಾಗೂ ಮೃತರ ಸಂಖ್ಯೆ 58,390ಕ್ಕೆ ಏರಿಕೆಯಾಗಿದೆ.

India's COVID 19 case tally crosses 31 lakh mark
ಭಾರತದಲ್ಲಿ ಕೋವಿಡ್​​ ಸೋಂಕಿತರ ಸಂಖ್ಯೆ

ನವದೆಹಲಿ: ದೇಶದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 58 ಸಾವಿರ ಗಡಿ ದಾಟಿದ್ದು, ಕೇಸ್​ಗಳ ಸಂಖ್ಯೆ 31 ಲಕ್ಷ ಗಡಿ ದಾಡಿದೆ.

ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 60,975 ಸೋಂಕಿತರು ಪತ್ತೆಯಾಗಿದ್ದು, 848 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಭಾರತದಲ್ಲಿ ಸೋಂಕಿತರ ಸಂಖ್ಯೆ 31,67,324 ಹಾಗೂ ಮೃತರ ಸಂಖ್ಯೆ 58,390ಕ್ಕೆ ಏರಿಕೆಯಾಗಿದೆ.

ಒಟ್ಟು ಸೋಂಕಿತರ ಪೈಕಿ 24,04,585 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಚ್​ ಆಗಿದ್ದಾರೆ. ಉಳಿದಂತೆ 7,04,348 ಕೇಸ್​​ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಕೋವಿಡ್​ ಟೆಸ್ಟಿಂಗ್​ ಅಪ್​ಡೇಟ್ಸ್​​

ಆಗಸ್ಟ್​ 2ರವರೆಗೆ 3,68,27,520 ಜನರಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದ್ದು, ನಿನ್ನೆ ಒಂದೇ ದಿನ 9,25,383 ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.

ABOUT THE AUTHOR

...view details