ಕರ್ನಾಟಕ

karnataka

By

Published : Jul 20, 2020, 10:09 AM IST

Updated : Jul 20, 2020, 1:07 PM IST

ETV Bharat / bharat

ದೇಶದಲ್ಲಿ ಒಂದೇ ದಿನ 40 ಸಾವಿರ ಕೇಸ್ ಪತ್ತೆ: 11 ಲಕ್ಷ ಗಡಿ ದಾಟಿದ ಕೋವಿಡ್​ ಸೋಂಕಿತರ ಸಂಖ್ಯೆ

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 11,18,043 ಹಾಗೂ ಮೃತರ ಸಂಖ್ಯೆ 27,497ಕ್ಕೆ ಏರಿಕೆಯಾಗಿದೆ.

India's COVID 19 case tally crosses 11 lakh mark
ಭಾರತದಲ್ಲಿ ಕೊರೊನಾ ಪ್ರಕರಣಗಳು

ನವದೆಹಲಿ:ಭಾರತದಲ್ಲಿ ಕೊರೊನಾ ವೈರಸ್​ ಹರಡುತ್ತಿರುವ ಪ್ರಮಾಣ ಎಷ್ಟಿದೆಯೆಂದರೆ ಕೇವಲ ಮೂರೇ ದಿನಗಳಲ್ಲೇ ಲಕ್ಷ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಇದೀಗ ದೇಶದಲ್ಲಿ ಕೋವಿಡ್​ ಕೇಸ್​ಗಳ ಸಂಖ್ಯೆ 11 ಲಕ್ಷ ಗಡಿ ದಾಡಿದೆ.

ಕಳೆದ 24 ಗಂಟೆಗಳಲ್ಲಿ ಈವರೆಗೆ ಅತಿ ಹೆಚ್ಚು ಪ್ರಕರಣಗಳು ಎಂಬಂತೆ ಬರೋಬ್ಬರಿ 40,425 ಸೋಂಕಿತರು ಪತ್ತೆಯಾಗಿದ್ದು, 681 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 11,18,043 ಹಾಗೂ ಮೃತರ ಸಂಖ್ಯೆ 27,497ಕ್ಕೆ ಏರಿಕೆಯಾಗಿದೆ.

ಒಟ್ಟು ಸೋಂಕಿತರ ಪೈಕಿ ಶೇ. 64ರಷ್ಟು ಅಂದರೆ 7,00,087 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಚ್​ ಆಗಿದ್ದಾರೆ. ಉಳಿದಂತೆ 3,90,459 ಕೇಸ್​​ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

Last Updated : Jul 20, 2020, 1:07 PM IST

ABOUT THE AUTHOR

...view details