ಕರ್ನಾಟಕ

karnataka

ETV Bharat / bharat

'ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್'ನಲ್ಲಿ ಸ್ಥಾನ ಪಡೆದ ಭಾರತದ 2018ರ ಹುಲಿಗಣತಿ - ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್'

ಕ್ಯಾಮೆರಾ ಟ್ರ್ಯಾಪಿಂಗ್​​​​ನಿಂದ 3,48,58,623 ವನ್ಯಜೀವಿ ಚಿತ್ರಗಳನ್ನು ಸಂಗ್ರಹಿಸಲಾಗಿದೆ. ಅವುಗಳಲ್ಲಿ 76,651 ಹುಲಿಗಳು, 51,777 ಚಿರತೆಗಳು ಮತ್ತು ಉಳಿದವು ಇತರ ಜೀವಿಗಳ ಚಿತ್ರಗಳಾಗಿವೆ. ಈ ಸಾಫ್ಟ್‌ವೇರ್‌ನಿಂದ ಒಟ್ಟು 2,461 ಹುಲಿಗಳನ್ನು (ಮರಿಗಳನ್ನು ಹೊರತುಪಡಿಸಿ) ಗುರುತಿಸಲಾಗಿದೆ..

India's 2018 Tiger Census makes it to Guinness Book of World Records
'ಗಿನ್ನಿಸ್​ ರೆಕಾರ್ಡ್'​​​ನಲ್ಲಿ ಸ್ಥಾನ ಪಡೆದ ಭಾರತದ 2018ರ ಹುಲಿಗಣತಿ

By

Published : Jul 11, 2020, 6:44 PM IST

ಹೈದರಾಬಾದ್​ :ಭಾರತದಲ್ಲಿ 2018ರಲ್ಲಿ ನಡೆಸಿದ ಹುಲಿಗಣತಿ 'ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್'ನಲ್ಲಿ ಸ್ಥಾನ ಪಡೆದುಕೊಂಡಿದೆ. ಇದು ವಿಶ್ವದ ಅತಿದೊಡ್ಡ ಕ್ಯಾಮೆರಾ ಟ್ರ್ಯಾಪಿಂಗ್ ವನ್ಯಜೀವಿ ಸಮೀಕ್ಷೆ ಎಂದು ಸಂಘಟಕರು ಹೇಳಿದ್ದಾರೆ.

ಕಳೆದ ವರ್ಷ ಹುಲಿದಿನದ ಸಂದರ್ಭದಲ್ಲಿ 4ನೇ ಹುಲಿಗಣತಿಯ (2018ರ ಹುಲಿಗಣತಿ ವರದಿ) ವರದಿಯನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಿದ್ದರು. ಆ ವರದಿಯ ಪ್ರಕಾರ ಭಾರತದಲ್ಲಿ 2,967 ಹುಲಿಗಳಿವೆ. ಅಂದರೆ ವಿಶ್ವದ ಶೇ.75ರಷ್ಟು ಹುಲಿಗಳು ಭಾರತದಲ್ಲಿವೆ. ಈ ಮೂಲಕ ಜಗತ್ತಿನಲ್ಲಿ ಹುಲಿ ಸಂತತಿಗೆ ಅತ್ಯಂತ ಸುರಕ್ಷಿತ ಸ್ಥಳವಾಗಿ ಭಾರತ ಗುರುತಿಸಿದೆ.

ಭಾರತ ಹುಲಿಗಣತಿ ಗಿನ್ನೆಸ್​​ ಬುಕ್​​​ನಲ್ಲಿ ಸ್ಥಾನ ಪಡೆದಿರುವುದು ಒಂದು ಉತ್ತಮ ಕ್ಷಣ. ನಿಸ್ವಾರ್ಥ ಭಾರತದ ಅದ್ಭುತ ಉದಾಹರಣೆ. ಮೋದಿ ಅವರ ನೇತೃತ್ವದಲ್ಲಿ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ 'ಸಂಕಲ್ಪ'ದ ಗುರಿಯನ್ನು ನಾಲ್ಕು ವರ್ಷಗಳ ಹಿಂದೆಯೇ ಅದನ್ನು ಸಾಧಿಸಿದ್ದೇವೆ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್​​ ಜಾವ್ಡೇಕರ್​​ ಸಂತಸ ವ್ಯಕ್ತಪಡಿಸಿದ್ದಾರೆ.

ಗಿನ್ನಿಸ್ ವೆಬ್‌ಸೈಟ್ ಪ್ರಕಾರ :2018-19ರಲ್ಲಿ ಭಾರತದಲ್ಲಿ ನಡೆಸಿದ ಹುಲಿ ಸಮೀಕ್ಷೆಯು ಸಂಪನ್ಮೂಲಗಳು ಮತ್ತು ಮಾಹಿತಿಯ ದೃಷ್ಟಿಯಿಂದ ಕೂಡಿತ್ತು. ಕ್ಯಾಮೆರಾ ಟ್ರ್ಯಾಪಿಂಗ್ 141 ವಿವಿಧ ತಾಣಗಳಲ್ಲಿ 26,838 ಸ್ಥಳಗಳಲ್ಲಿ ಸ್ಥಾಪಿಸಲಾಯಿತು. ಈ ಕ್ಯಾಮೆರಾಗಳಲ್ಲಿ ಅಳವಡಿಸಲಾದ ಚಲನೆ ಸಂವೇದಕವು ಪ್ರಾಣಿಗಳ ಓಡಾಟವನ್ನು (ಚಲನವಲನ) ಸಂಪೂರ್ಣವಾಗಿ ಸೆರೆಹಿಡಿಯಿತು. ಹೀಗಾಗಿ, 1,21,337 ಚದರ ಕಿ.ಮೀ​​​​​​​ ಸಮೀಕ್ಷೆ ನಡೆಸಿದ ಪರಿಣಾಮ ಸಮಗ್ರ ಮಾಹಿತಿ ದೊರೆಯಿತು.

ಕ್ಯಾಮೆರಾ ಟ್ರ್ಯಾಪಿಂಗ್​​​​ನಿಂದ 3,48,58,623 ವನ್ಯಜೀವಿ ಚಿತ್ರಗಳನ್ನು ಸಂಗ್ರಹಿಸಲಾಗಿದೆ. ಅವುಗಳಲ್ಲಿ 76,651 ಹುಲಿಗಳು, 51,777 ಚಿರತೆಗಳು ಮತ್ತು ಉಳಿದವು ಇತರ ಜೀವಿಗಳ ಚಿತ್ರಗಳಾಗಿವೆ. ಈ ಸಾಫ್ಟ್‌ವೇರ್‌ನಿಂದ ಒಟ್ಟು 2,461 ಹುಲಿಗಳನ್ನು (ಮರಿಗಳನ್ನು ಹೊರತುಪಡಿಸಿ) ಗುರುತಿಸಲಾಗಿದೆ.

2006ರಲ್ಲಿ ದೇಶದಲ್ಲಿ 1411 ಹುಲಿಗಳು, 2014ರ ಗಣತಿಯ ಪ್ರಕಾರ 2,226 ಹುಲಿಗಳಿವೆ ಎಂದು ಅಂದಾಜಿಸಲಾಗಿತ್ತು. 2006ರಿಂದ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ದೇಶದಲ್ಲಿ ಹುಲಿ ಗಣತಿ ನಡೆಸಲಾಗುತ್ತಿದೆ.

ABOUT THE AUTHOR

...view details