ಕರ್ನಾಟಕ

karnataka

ETV Bharat / bharat

ದೇಶದಲ್ಲೇ ಮೊದಲ ಬಾರಿಗೆ ವೈರಾಲಜಿ ಲ್ಯಾಬ್‌ ಆರಂಭ... ಏನಿದರ  ವೈಶಿಷ್ಟ್ಯ

ಕೊರೊನಾ ಸೋಂಕು ಪರೀಕ್ಷೆ ಮತ್ತು ವೈರಸ್‌ನ ಕಲ್ಚರ್‌ ತಿಳಿದುಕೊಳ್ಳುವ ಸಲುವಾಗಿ ದೇಶದಲ್ಲಿ ಇದೇ ಮೊದಲ ಬಾರಿಗೆ ಹೈದರಾಬಾದ್‌ನಲ್ಲಿ ವೈರಾಲಜಿ ಲ್ಯಾಬ್‌ ಆರಂಭಿಸಲಾಗಿದೆ.

rajanath singh
ರಾಜನಾಥ್‌ ಸಿಂಗ್

By

Published : Apr 23, 2020, 5:42 PM IST

ಹೈದರಾಬಾದ್‌: ದೇಶದಲ್ಲಿ ಇದೇ ಮೊದಲ ಬಾರಿಗೆ ಹೈದರಾಬಾದ್‌ನ ಇಎಸ್‌ಐ ಆಸ್ಪತ್ರೆಯಲ್ಲಿ ಮೊಬೈಲ್‌ ವೈರಾಲಾಜಿ ಲ್ಯಾಬ್ ‌ಅನ್ನು ಆರಂಭಿಸಲಾಗಿದ್ದು, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಇಂದು ಆನ್‌ಲೈನ್‌‌ ಮೂಲಕ ಉದ್ಘಾಟನೆ ಮಾಡಿದರು.

ಕೊರೊನಾ ಸೋಂಕು ಪರೀಕ್ಷೆ, ವೈರಸ್‌ನ ಕಲ್ಚರ್‌ ಮತ್ತು ವ್ಯಾಕ್ಸಿನ್‌ ಸಿದ್ಧಪಡಿಸಲು ವೈರಾಲಾಜಿ ಲ್ಯಾಬ್‌ ಸಹಕಾರಿಯಾಗಲಿದೆ. ಐಕ್ಲೀನ್‌, ಐ ಸೇಫ್‌ ಸಂಸ್ಥೆಯ ಜೊತೆ ಗೂಡಿ ಡಿಆರ್‌ಡಿಒ ಲ್ಯಾಬ್‌ ಅನ್ನು ತಯಾರಿಸಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಈ ಸಾಧನೆಯನ್ನು ರಾಜನಾಥ್‌ ಸಿಂಗ್‌ ಶ್ಲಾಘಿಸಿದ್ದಾರೆ. ಮಾತ್ರವಲ್ಲದೇ, ಕೋವಿಡ್‌-19 ವಿರುದ್ಧ ಹೋರಾಡುತ್ತಿರುವ ಎಲ್ಲ ಸಿಬ್ಬಂದಿಯ ಸೇವೆಗೆ ಧನ್ಯವಾದ ತಿಳಿಸಿದ್ದಾರೆ.

ದೇಶದಲ್ಲಿ ಪಿಪಿಇ ಕಿಟ್‌ಗಳನ್ನು ಹೆಚ್ಚಳ ಮಾಡಬೇಕು. ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಇದೆ ಎಂದು ಹೇಳಿದರು. ಸಚಿವರಾದ ಕಿಶನ್‌ ರೆಡ್ಡಿ, ಸಂತೋಷ್‌ ಗಂಗ್ವಾರ್‌ ಮತ್ತು ತೆಲಂಗಾಣ ಐಟಿ ಮಿನಿಸ್ಟರ್‌ ಕೆಟಿಆರ್‌ ವೈರಾಲಜಿ ಲ್ಯಾಬ್‌ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ABOUT THE AUTHOR

...view details