ಹೈದರಾಬಾದ್:ಪ್ರಪಂಚದಾದ್ಯಂತ ಕೊರೊನಾ ಅಬ್ಬರ ಜೋರಾಗಿದ್ದು, ಇಲ್ಲಿಯವರೆಗೆ ಅದಕ್ಕಾಗಿ ಯಾವುದೇ ಪ್ರತ್ಯೇಕ ಲಸಿಕೆ ಕಂಡು ಹಿಡಿದಿಲ್ಲ. ಆದರೆ ಇದರ ಮಧ್ಯೆ ಭಾರತದಲ್ಲಿ ಪ್ರಥಮ ಲಸಿಕೆ ಸಿದ್ಧವಾಗಿದ್ದು, ಮಾನವರ ಮೇಲೆ ಪ್ರಯೋಗಿಸಲಾಗುವುದು ಎಂದು ತಿಳಿದು ಬಂದಿದೆ.
ಭಾರತ ಬಯೋಟೆಕ್, ಭಾರತೀಯ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಸಹಯೋಗದೊಂದಿಗೆ ಕೊವಾಕ್ಸಿನ್ ಲಸಿಕೆ ಕಂಡು ಹಿಡಿಯಲಾಗಿದೆ. ಈಗಾಗಲೇ ಇದಕ್ಕೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜೆಐ), ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅನುಮೋದನೆ ಸಿಕ್ಕಿದ್ದು, ಮುಂದಿನ ತಿಂಗಳಿಂದ ಕೋವಿಡ್ ಸೋಂಕಿತರ ಮೇಲೆ ಪರೀಕ್ಷೆ ನಡೆಸುವ ಸಾಧ್ಯತೆ ದಟ್ಟವಾಗಿದೆ.
ಕೋವಿಡ್ ಮೊದಲ ಹಾಗೂ 2ನೇ ಹಂತದ ವ್ಯಕ್ತಿಗಳ ಮೇಲೆ ಪ್ರಯೋಗ ನಡೆಸಬಹುದಾಗಿದೆ. ಜುಲೈ ಮೊದಲ ವಾರದಿಂದ ಪ್ರಯೋಗ ನಡೆಸಲು ಇದೀಗ ತೀರ್ಮಾನ ಮಾಡಲಾಗಿದೆ. ಈ ಲಸಿಕೆ ಭಾರತದಲ್ಲಿ ಹೊಸ ಮೈಲುಗಲ್ಲು ಎಂದು ಭಾರತ ಬಯೋಟೆಕ್ನ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಕೃಷ್ಣ ಎಲಾ ತಿಳಿಸಿದ್ದಾರೆ. ಕೊವಾಕ್ಸಿನ್ ಲಸಿಕೆ ಘೋಷಣೆ ಮಾಡಲು ನಮಗೆ ಹೆಮ್ಮೆ ಇದೆ. ಕೊರೊನಾ ವಿರುದ್ಧ ಕಂಡು ಹಿಡಿಯಲಾಗಿರುವ ಭಾರತದ ಮೊದಲ ಲಸಿಕೆ ಇದಾಗಿದೆ ಎಂದಿದ್ದಾರೆ.