ಕರ್ನಾಟಕ

karnataka

By

Published : Apr 12, 2020, 12:55 PM IST

ETV Bharat / bharat

ವಿದೇಶಗಳಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು.. ನೆರವಿಗಾಗಿ ಮೊರೆ

ಆಸ್ಟ್ರೇಲಿಯಾದಲ್ಲಿ ಈ ರೀತಿಯಾದರೆ ವೈದ್ಯಕೀಯ ಅಧ್ಯಯನಕ್ಕಾಗಿ ಕಿರ್ಗಿಸ್ತಾನ್‌ಗೆ ತೆರಳಿದ ತೆಲುಗು ವಿದ್ಯಾರ್ಥಿಗಳು ಅಲ್ಲಿ ಸಿಕ್ಕಿಕೊಂಡಿದ್ದಾರೆ. ಅವರನ್ನು ವಾಪಸ್ ಕಳುಹಿಸುವಂತೆ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಮಾಡುತ್ತಿದ್ದಾರೆ. ಹೆಚ್ಚುತ್ತಿರುವ ಪಾಸಿಟಿವ್ ಪ್ರಕರಣಗಳು ಮತ್ತು ವೈದ್ಯಕೀಯ ಸೌಲಭ್ಯಗಳ ಕೊರತೆ ವಿದ್ಯಾರ್ಥಿಗಳನ್ನು ಭೀತಿಗೊಳಿಸುತ್ತಿದೆ.

Covid-19
ಭಾರತೀಯ ವಿದ್ಯಾರ್ಥಿಗಳು

ಕೋವಿಡ್-19 ಆಸ್ಟ್ರೇಲಿಯಾದಲ್ಲಿನ ತೆಲುಗು ವಿದ್ಯಾರ್ಥಿಗಳ ಜೀವನೋಪಾಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಲಾಕ್‌ಡೌನ್ ನಂತರ ಅರೆಕಾಲಿಕ ಉದ್ಯೋಗಗಳು ಸಿಗುವುದು ಕಷ್ಟವಿದೆ. ಅರೆಕಾಲಿಕ ಉದ್ಯೋಗ ಕಳೆದುಕೊಂಡ ನಂತರ ಅಲ್ಲಿ ಬದುಕು ನಡಸುವುದು ವಿದ್ಯಾರ್ಥಿಗಳಿಗೆ ಕಷ್ಟವಾಗಲಿದೆ. ತೆಲಂಗಾಣ ಮೂಲದ ಯಂಗ್ ಲಿಬರಲ್ಸ್ ಮಲ್ಟಿಕಲ್ಚರಲ್ ಅಸೋಸಿಯೇಶನ್‌ನ ಅಧ್ಯಕ್ಷ ಮತ್ತು ಎನ್‌ಆರ್‌ಐ ವಿದ್ಯಾರ್ಥಿಗಳ ಸಂಯೋಜಕ ಆರ್ ಶಿವರೆಡ್ಡಿ ಅವರು ವಿದ್ಯಾರ್ಥಿಗಳು ಎದುರಿಸುತ್ತಿರುವ ಸವಾಲುಗಳನ್ನು ಈನಾಡು ಜೊತೆ ಹಂಚಿಕೊಂಡಿದ್ದಾರೆ. ಮೆಲ್ಬೋರ್ನ್‌ನಿಂದಲೇ ಇವರು ಮಾತನಾಡಿದ್ದಿಷ್ಟು..

ಆಸ್ಟ್ರೇಲಿಯಾ ಸರ್ಕಾರವು ವಿದ್ಯಾರ್ಥಿಗಳಿಗೆ ಅರೆಕಾಲಿಕ ಕೆಲಸ ಮಾಡಲು ಅವಕಾಶ ನೀಡುತ್ತದೆ. ಆದರೆ, ಹೆಚ್ಚಿನ ವಿದ್ಯಾರ್ಥಿಗಳು ಅನಧಿಕೃತವಾಗಿ ಉದ್ಯೋಗದಲ್ಲಿದ್ದಾರೆ. ಪ್ರಸ್ತುತ ಲಾಕ್‌ಡೌನ್‌ನಿಂದಾಗಿ ಸೂಪರ್‌ಮಾರ್ಕೆಟ್‌ಗಳು ಮತ್ತು ಗ್ಯಾಸ್ ಸ್ಟೇಷನ್‌ಗಳಲ್ಲಿ ಕೆಲಸ ಮಾಡುವವರಿಗೆ ಮಾತ್ರ ಉದ್ಯೋಗವಿದೆ. ಉಳಿದವರು ಉದ್ಯೋಗ ಕಳೆದುಕೊಂಡಿದ್ದಾರೆ. ಅಂತಹ ವಿದ್ಯಾರ್ಥಿಗಳಿಗೆ ನಾವು ಅಗತ್ಯ ವಸ್ತುಗಳನ್ನು ಒದಗಿಸುತ್ತಿದ್ದೇವೆ. ವೈರಸ್ ಹರಡುವಿಕೆ ಇಲ್ಲಿ ನಿಯಂತ್ರಣದಲ್ಲಿದೆ. ಲಾಕ್‌ಡೌನ್ ಇನ್ನೂ ಕೆಲವು ವಾರಗಳವರೆಗೆ ವಿಸ್ತರಿಸಬಹುದು. ಇಲ್ಲಿ 1.2 ಲಕ್ಷ ತೆಲುಗು ವಿದ್ಯಾರ್ಥಿಗಳಿದ್ದಾರೆ. ಅವರಲ್ಲಿ ಹೆಚ್ಚಿನವರು ಆತಿಥ್ಯ ಕ್ಷೇತ್ರದಲ್ಲಿ ಸಣ್ಣ ಉದ್ಯೋಗಗಳನ್ನು ಹೊಂದಿದ್ದಾರೆ. ಈ ವಲಯದ ಮುಚ್ಚುವಿಕೆಯೊಂದಿಗೆ ಅವರ ಸಮಸ್ಯೆಗಳು ಹೆಚ್ಚಾಗುತ್ತಿವೆ.

ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ಪುನಾರಂಭಗೊಂಡ ನಂತರ ವಿದೇಶಿ ವಿದ್ಯಾರ್ಥಿಗಳು ತಮ್ಮ ದೇಶಗಳಿಗೆ ಮರಳಬೇಕು ಎಂದು ಆಸ್ಟ್ರೇಲಿಯಾ ಸರ್ಕಾರ ಘೋಷಿಸಿದೆ. ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬಂದ ನಂತರ ಅವರಿಗೆ ಮರಳಲು ಅನುಮತಿ ಸಿಗಬಹುದು. ಆಸ್ಟ್ರೇಲಿಯಾದ ಪೌರತ್ವ ಹೊಂದಿರುವ ವಿದೇಶಿ ನಾಗರಿಕರಿಗೆ ಮಾತ್ರ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ. ನಾವು ಆಸ್ಟ್ರೇಲಿಯಾದ ಭಾರತದ ಹೈಕಮಿಷನ್‌ನ ಸಂಪರ್ಕಿಸಿದ್ದೇವೆ ಮತ್ತು ಅಧಿಕಾರಿಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಅವರು ಸಹಾಯದ ಅಗತ್ಯವಿರುವ ವಿದ್ಯಾರ್ಥಿಗಳು https://www.hcicanberra.gov.in/register ನಲ್ಲಿ ನೋಂದಾಯಿಸಬೇಕೆಂದು ಹೇಳಿದ್ದಾರೆ. ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಇಲ್ಲಿ ಕಾನೂನುಬದ್ಧವಾಗಿ ಕೆಲಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸೂಪರ್ ವಾರ್ಷಿಕ ವೇತನ ಬಳಸಲು ಸರ್ಕಾರ ಅನುಮೋದನೆ ನೀಡಿದೆ. ಇಲ್ಲಿ ಅಗತ್ಯ ವಸ್ತುಗಳ ಕೊರತೆಯಿಲ್ಲ. ಆದರೆ, ಸೂಪರ್ ಮಾರ್ಕೆಟ್‍ಗಳು ಒಂದು ಸಮಯದಲ್ಲಿ ಕೇವಲ 10 ಜನರಿಗೆ ಮಾತ್ರ ಅವಕಾಶ ನೀಡುತ್ತವೆ.

ಆಸ್ಟ್ರೇಲಿಯಾದಲ್ಲಿ ಈ ರೀತಿಯಾದರೆ ವೈದ್ಯಕೀಯ ಅಧ್ಯಯನಕ್ಕಾಗಿ ಕಿರ್ಗಿಸ್ತಾನ್‌ಗೆ ತೆರಳಿದ ತೆಲುಗು ವಿದ್ಯಾರ್ಥಿಗಳು ಅಲ್ಲಿ ಸಿಕ್ಕಿಕೊಂಡಿದ್ದಾರೆ. ಅವರನ್ನು ವಾಪಸ್ ಕಳುಹಿಸುವಂತೆ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಮಾಡುತ್ತಿದ್ದಾರೆ. ಹೆಚ್ಚುತ್ತಿರುವ ಪಾಸಿಟಿವ್ ಪ್ರಕರಣಗಳು ಮತ್ತು ವೈದ್ಯಕೀಯ ಸೌಲಭ್ಯಗಳ ಕೊರತೆ ವಿದ್ಯಾರ್ಥಿಗಳನ್ನು ಭೀತಿಗೊಳಿಸುತ್ತಿದೆ. ಆ ವಿದ್ಯಾರ್ಥಿಗಳಲ್ಲಿ ಕೆಲವರು ಈನಾಡು ಜೊತೆ ಮಾತನಾಡಿದ್ದಾರೆ. ಕಿರ್ಗಿಸ್ತಾನ್‌ನಲ್ಲಿ ಸುಮಾರು 15,000 ಭಾರತೀಯ ವಿದ್ಯಾರ್ಥಿಗಳು ಮೆಡಿಸಿನ್ ಕಲಿಯುತ್ತಿದ್ದಾರೆ. ದೇಶದ ರಾಜಧಾನಿಯಾದ ಬಿಷ್ಕೆಕ್‌ನ ವಿವಿಧ ಕಾಲೇಜುಗಳಲ್ಲಿ ಸುಮಾರು 1,500 ತೆಲುಗು ವಿದ್ಯಾರ್ಥಿಗಳಿದ್ದಾರೆ. ಲಾಕ್‌ಡೌನ್‍ನಿಂದಾಗಿ ಅವರು ಕಳೆದ 20 ದಿನಗಳಿಂದ ಹಾಸ್ಟೆಲ್ ಕೋಣೆಗಳಿಗೆ ಸೀಮಿತರಾಗಿದ್ದಾರೆ. 70 ಲಕ್ಷ ಜನಸಂಖ್ಯೆ ಹೊಂದಿರುವ ದೇಶದಲ್ಲಿ 280 ಕೋವಿಡ್ -19 ಪ್ರಕರಣ ದಾಖಲಾಗಿವೆ.

ಹರಡುವಿಕೆಯ ಸ್ಥಿತಿ ಹದಗೆಟ್ಟರೆ ಪರಿಸ್ಥಿತಿ ನಿಯಂತ್ರಣ ಮೀರಿ ಹೋಗಬಹುದು ಎಂದು ವಿದ್ಯಾರ್ಥಿ ಸಂಯೋಜಕ ಮೋಹನ್ ಕಳವಳ ವ್ಯಕ್ತಪಡಿಸಿದರು. ತೆಲಂಗಾಣ ಮತ್ತು ಆಂಧ್ರ ಮುಖ್ಯಮಂತ್ರಿಗಳು ಈ ಕುರಿತು ಅಗತ್ಯ ಉಪಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು. ಅಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಮಾರೆಡ್ಡಿ ಶ್ರೀರಾಮ್ ಅವರ ತಂದೆ ನಾಗೇಂದರ್ ರೆಡ್ಡಿ, ವಿದ್ಯಾರ್ಥಿಗಳನ್ನು ಮತ್ತೆ ಭಾರತಕ್ಕೆ ಕರೆತರುವಂತೆ ಕೇಂದ್ರ ಸಚಿವ ಕಿಶನ್ ರೆಡ್ಡಿ ಅವರಿಗೆ ಮನವಿ ಮಾಡಿದರು.

ABOUT THE AUTHOR

...view details