ನವದೆಹಲಿ:ಏಕತೆಯಲ್ಲಿ ವೈವಿಧ್ಯತೆಯನ್ನು ಹುಡುಕುವ ಬದಲು, ವೈವಿಧ್ಯತೆಯಲ್ಲಿ ಏಕತೆಯನ್ನು ಕಂಡುಕೊಂಡು ಭಾರತದ ಜನತೆ ಜಗತ್ತನ್ನು ಮುನ್ನಡೆಸುತ್ತ ಸಾಗಬೇಕೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಪ್ರತಿಪಾದನೆ ಮಾಡಿದ್ದಾರೆ.
ಈಡಿ ಜಗತ್ತಿನಲ್ಲಿ ವೈವಿಧ್ಯತೆ ಇದೆ ಅದನ್ನು ನಾವು ಒಪ್ಪಿಕೊಂಡು ಗೌರವಿಸಬೇಕು. ವೈವಿಧ್ಯತೆಯು ಏಕತೆಯಿಂದ ಹೊರಬಂದಿದೆ ಎಂಬ ಜ್ಞಾನದಿಂದ ಬದುಕುವುದು ಈ ದೇಶದ ಸಂಸ್ಕೃತಿಯಾಗಿದೆ. ನಾವು ಏಕತೆಯಲ್ಲಿ ವೈವಿಧ್ಯತೆಯನ್ನು ಹುಡುಕುವವರಲ್ಲ. ಏಕತೆಯಲ್ಲಿ ವೈವಿಧ್ಯತೆ ಇದೆ ಎಂದು ನಂಬಿದವರು ಎಂದು ಭಾಗವತ್ ಹೇಳಿದ್ರು.