ಜೈಸಲ್ಮೇರ್/ನವದೆಹಲಿ:ಇರಾನ್ ಮತ್ತು ಇಟಲಿಯಲ್ಲೂ ಕೊರೊನಾ ವೈರಸ್ ತಾಂಡವವಾಡುತ್ತಿದ್ದು, ಅಲ್ಲಿದ್ದ ಭಾರತೀಯರಲ್ಲಿ ಇಂದು ಕೆಲವರನ್ನು ಸ್ವದೇಶಕ್ಕೆ ಕರೆತರಲಾಗಿದೆ.
ಇರಾನ್‌ನಿಂದ ಏರೋ ಇಂಡಿಯಾ ವಿಮಾನ ಮೂಲಕ 236 ಭಾರತೀಯರನ್ನು ಕರೆತರಲಾಗಿದೆ. ರಾಜಸ್ಥಾನದ ಜೈಸಲ್ಮೇರ್ಗೆ ಸ್ಥಳಾಂತರಿಸಲಾಗಿದೆ. ಇರಾನ್‌ನಿಂದ ಸ್ಥಳಾಂತರಿಸಲಾಗಿರುವ ಎಲ್ಲಾ 236 ಭಾರತೀಯರನ್ನು ಜೈಸಲ್ಮೇರ್‌ನಲ್ಲಿ ರಚಿಸಲಾದ ಸೇನಾ ಕೇಂದ್ರದಲ್ಲಿ ಇರಿಸಲಾಗಿದ್ದು, ಮುನ್ನೆಚ್ಚರಿಕೆಯಾಗಿ ಅವರನ್ನು ಪ್ರತ್ಯೇಕ ವಾರ್ಡ್‌ನಲ್ಲಿ ಇಡಲಾಗಿದೆ.
ಇರಾನ್ , ಇಟಲಿಯಿಂದ ಸ್ವದೇಶಕ್ಕೆ ಮರಳಿದ 454 ಮಂದಿ ಭಾರತೀಯರು ಇನ್ನು ಇಂದು ಕರೆತಂದಿರುವ ಭಾರತೀಯರಲ್ಲಿ ಕೊರೊನಾವೈರಸ್ ಲಕ್ಷಣಗಳು ಕಂಡುಬಂದಿಲ್ಲವೆಂದು ತಿಳಿದುಬಂದಿದೆ. ಆದರೂ ಮುನ್ನೆಚ್ಚರಿಕ ಕ್ರಮವಾಗಿ ಅವರನ್ನ ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಲಾಗುವುದು. ಹಾಗೆಯೇ 14 ದಿನಗಳ ಕಾಲ ವೈದ್ಯರ ಮೇಲ್ವಿಚಾರಣೆಯಲ್ಲಿರಿಸಿ, ನಂತರ ಅವರನ್ನು ಅವರ ಮನೆಗಳಿಗೆ ಕಳುಹಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಚೀನಾ ಮತ್ತು ಇಟಲಿಯನ್ನು ಹೊರತುಪಡಿಸಿ ಅತಿ ಹೆಚ್ಚು ಪ್ರಕರಣಗಳು ಇರಾನ್ನಲ್ಲಿ ಕಂಡು ಬಂದಿದ್ದು, ಇದುವರೆಗೆ 12,729 ಪ್ರಕರಣಗಳು ಪತ್ತೆಯಾಗಿವೆ ಹಾಗೂ 611 ಜನರು ಸಾವನ್ನಪ್ಪಿದ್ದಾರೆ.
ಮತ್ತೊಂದೆಡೆ ದೆಹಲಿ ವಿಮಾನ ನಿಲ್ದಾಣದಲ್ಲಿ ಇಟಲಿಯ ಮಿಲನ್‌ನಿಂದ ಬಂದಿಳಿದ 218 ಭಾರತೀಯರನ್ನು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರ ಚಾವ್ಲಾ ಕ್ಯಾಂಪ್‌ಗೆ ಸ್ಥಳಾಂತರಿಸಲಾಗಿದೆ.