ಕರ್ನಾಟಕ

karnataka

ETV Bharat / bharat

ಜನರು ವಿಶ್ವಾಸ ಇಡುವ ರೀತಿಯಲ್ಲಿ ಸರ್ಕಾರ ಕಾರ್ಯ ನಿರ್ವಹಿಸಬೇಕು:ತಿವಾರಿ

ಕೋವಿಡ್ -19 ಲಸಿಕೆ 'ಕೋವ್ಯಾಕ್ಸಿನ್​' ತುರ್ತು ಬಳಕೆಗೆ ಸರ್ಕಾರ ಅವಕಾಶ ನೀಡಿದೆ. ಆದ್ರೆ ಮೂರನೇ ಹಂತದ ಪ್ರಯೋಗಗಳು ಪೂರ್ಣಗೊಂಡಿಲ್ಲ. ಹೀಗಿರುವಾಗ ಅದನ್ನು ಜನರ ಮೇಲೆ ಪ್ರಯೋಗ ಮಾಡುವ ಹಾಗೆ ಇಲ್ಲ ಎಂದು ಕಾಂಗ್ರೆಸ್​ ಮುಖಂಡ ಮನೀಶ್ ತಿವಾರಿ ಹೇಳಿದರು.

Indians are not guinea pigs, you can't use Covaxin rollout as phase 3 trial: Manish Tewari
ಜನರು ವಿಶ್ವಾಸ ಇಡುವ ರೀತಿಯಲ್ಲಿ ಸರ್ಕಾರ ಕಾರ್ಯ ನಿರ್ವಹಿಸಬೇಕು; ತಿವಾರಿ

By

Published : Jan 14, 2021, 7:09 AM IST

ನವದೆಹಲಿ: ಕೋವಿಡ್ -19 ಲಸಿಕೆ 'ಕೋವ್ಯಾಕ್ಸಿನ್​' ತುರ್ತು ಬಳಕೆಗೆ ಸರ್ಕಾರ ಅವಕಾಶ ನೀಡಿದೆ. ಆದ್ರೆ ಮೂರನೇ ಹಂತದ ಪ್ರಯೋಗಗಳು ಸಂಪೂರ್ಣವಾಗಿ ಪೂರ್ಣಗೊಂಡಿಲ್ಲ. ಹೀಗಿರುವಾಗ ಅದನ್ನು ಜನರ ಮೇಲೆ ಪ್ರಯೋಗ ಮಾಡುವ ಹಾಗೆ ಇಲ್ಲ ಎಂದು ಕಾಂಗ್ರೆಸ್​ ಮುಖಂಡ ಮನೀಶ್ ತಿವಾರಿ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ತಿವಾರಿ, ಕೋವ್ಯಾಕ್ಸಿನ್​ ತುರ್ತು ಬಳಕೆಗಾಗಿ ಅವಕಾಶ ಸಿಕ್ಕಿದೆ. ಈಗ ಸರ್ಕಾರವು, ಲಸಿಕೆ ಸ್ವೀಕರಿಸುವವರಿಗೆ ಅವರು ನೀಡುವ ಲಸಿಕೆಯನ್ನು ಆಯ್ಕೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳುತ್ತಿದೆ. ಕೊವಾಕ್ಸಿನ್‌ನ ಮೂರು ಹಂತದ ಪ್ರಯೋಗಗಳು ಪೂರ್ಣಗೊಳ್ಳದಿರುವ ಈ ಸಂದರ್ಭದಲ್ಲಿ ಅದನ್ನು ಬಳಸಿದರೆ ಹಲವು ಪರಿಣಾಮ ಎದುರಿಸಬೇಕಾಗಬಹುದು ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ:'ಮಹಾ' ಸಚಿವ ನವಾಬ್​ ಮಲಿಕ್​ ಅಳಿಯ ಡ್ರಗ್​ ಪ್ರಕರಣದಲ್ಲಿ ಅರೆಸ್ಟ್​

ಪ್ರಯೋಗಗಳು ಸಂಪೂರ್ಣವಾಗಿ ಮುಗಿಯುವವರೆಗೂ ಕೋವ್ಯಾಕ್ಸಿನ್​ ಅನ್ನು ನೀಡಬಾರದು. ಸರ್ಕಾರ ಸಂಪೂರ್ಣ ವಿಶ್ವಾಸಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದಿದ್ದಾರೆ.

ABOUT THE AUTHOR

...view details