ಕರ್ನಾಟಕ

karnataka

ETV Bharat / bharat

ಭಾರತೀಯ ಟಿವಿ ಉದ್ಯಮ ಮತ್ತು ಟಿಆರ್​​​ಪಿ: ಇಲ್ಲಿದೆ ಫುಲ್​ ಡೀಟೇಲ್ಸ್​​ - ignificance of viewership data

ದೂರದರ್ಶನ ಚಲಿಸುವ ಚಿತ್ರಗಳನ್ನು ಶಬ್ದದೊಂದಿಗೆ ಪ್ರಸಾರ ಮಾಡುವ ಮತ್ತು ಪ್ರದರ್ಶಿಸುವ ಒಂದು ತಂತ್ರಜ್ಞಾನ. ಪ್ರದರ್ಶನ ಮಾಡುವ ಉಪಕರಣವನ್ನು ದೂರದರ್ಶನ ಪೆಟ್ಟಿಗೆ ಎಂದು ಕರೆಯಲಾಗುತ್ತದೆ. ಇಂದು ಟಿವಿ ಇಲ್ಲದ ಮನೆಗಳು ನಮ್ಮ ಭಾರತದಲ್ಲಿ ಇಲ್ಲವೇ ಇಲ್ಲ. ಮನರಂಜನೆ ಹಾಗೂ ಮಾಹಿತಿಗಾಗಿ ಟಿವಿ ನೆಚ್ಚಿಕೊಂಡು ದಿನದೂಡುವವರು ಅದೆಷ್ಟೋ ಮಂದಿ ನಮ್ಮ ನಡುವೆ ಇದ್ದಾರೆ.

ಭಾರತೀಯ ಟಿವಿ ಉದ್ಯಮದ ಒಂದು ನೋಟ.
ಭಾರತೀಯ ಟಿವಿ ಉದ್ಯಮದ ಒಂದು ನೋಟ.

By

Published : Oct 8, 2020, 9:04 PM IST

Updated : Oct 8, 2020, 9:10 PM IST

ಭಾರತದಲ್ಲಿ ಟಿವಿ ಬಹಳ ಪ್ರಬಲ ಮಾಧ್ಯಮ. ಈ ಕಾರಣಕ್ಕಾಗಿಯೇ ಭಾರತದಲ್ಲಿ 197 ಮಿಲಿಯನ್ ಟೆಲಿವಿಷನ್ ಇರುವ ಮನೆಗಳಿವೆ. ಹಾಗೆಯೇ 886 ಮಿಲಿಯನ್ ವ್ಯಕ್ತಿಗಳು ಟಿವಿ ವೀಕ್ಷಕರಿದ್ದು, ಇದರಲ್ಲಿ ಸುಮಾರು 600 ಮಿಲಿಯನ್ ಜನರು ನಿತ್ಯ ಟಿವಿ ವೀಕ್ಷಿಸುತ್ತಾರೆ.

ದೇಶದಲ್ಲಿ ಈವರೆಗೆ ಅಂದಾಜು 900 ಪರವಾನಗಿ ಪಡೆದ ಉಪಗ್ರಹ ಟೆಲಿವಿಷನ್ ಚಾನೆಲ್‌ಗಳಿವೆ. ಅವುಗಳಲ್ಲಿ ಸುಮಾರು 600 ಚಾನೆಲ್‌ಗಳಲ್ಲಿ ವೀಕ್ಷಕರನ್ನು ಟಿಆರ್​ಪಿಗಾಗಿ ಲೆಕ್ಕಹಾಕಲಾಗುತ್ತದೆ. ಇದನ್ನು ಬಾರ್ಕ್ ಇಂಡಿಯಾ (ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್) ನಿರ್ವಹಿಸುತ್ತದೆ. ವೀಕ್ಷಕರ ಸಂಖ್ಯೆ ಜಾಹೀರಾತಿನ ಮೌಲ್ಯವನ್ನು ಇದು ತಿಳಿಸುತ್ತದೆ. ಮಾರುಕಟ್ಟೆದಾರರು ಮತ್ತು ಜಾಹೀರಾತುದಾರರು ತಮ್ಮ ಸಂದೇಶವನ್ನು ಹೆಚ್ಚು ಪರಿಣಾಮಕಾರಿಯಾಗಿ ಪ್ರಸಾರ ಮಾಡಲು ಜಾಹೀರಾತುಗಳನ್ನು ಯಾವ ಮಾಧ್ಯಮದಲ್ಲಿ ಪ್ರಸಾರ ಮಾಡಿಸಬೇಕೆಂದು ಇದು ಮಾಹಿತಿ ನೀಡುತ್ತದೆ.

ವೀಕ್ಷಕರ ಡೇಟಾ ತಿಳಿಯಲು ಟೆಲಿವಿಷನ್ ಪ್ಲಾಟ್‌ಫಾರ್ಮ್‌ಗೆ ವಾರ್ಷಿಕವಾಗಿ 30,500 ಕೋಟಿ ಹಣವನ್ನು ಖರ್ಚು ಮಾಡಲಾಗುತ್ತದೆ. 2019 ರಲ್ಲಿ ಭಾರತದ ಟಿವಿ ಉದ್ಯಮವು ಐಎನ್‌ಆರ್ 74,000 ಕೋಟಿಯಿಂದ ಐಎನ್‌ಆರ್ 78,700 ಕೋಟಿ ಗಳಿಕೆ ಮಾಡಿತ್ತು. ಇದು ವಿತರಣೆಯ ಮೂಲಕ ಶೇ 60ರಷ್ಟು ಆದಾಯ ಮತ್ತು ಜಾಹೀರಾತಿನಿಂದ ಶೇ 40ರಷ್ಟು ಗಳಿಕೆ ಮಾಡಿತ್ತು.

ಅಂದಾಜಿನ ಪ್ರಕಾರ, ಪ್ರಸಾರಕರ ಆದಾಯವು 2019 ರಲ್ಲಿ 41,300 ಕೋಟಿ ರೂ.ಗಳಿಂದ 45,000 ಕೋಟಿ ರೂ.ಗೆ ಏರಿದೆ. ಅದರಲ್ಲಿ ಜಾಹೀರಾತು ಆದಾಯ ಸುಮಾರು ಶೇ 70ರಷ್ಟು ಹಾಗೂ ಚಂದಾದಾರಿಕೆ ಆದಾಯ ಸುಮಾರು ಶೇ 30ರಷ್ಟು ಆಗಿದೆ.

ಬ್ರಾಡ್‌ಕಾಸ್ಟರ್‌ನ ಆದಾಯ (ಕೋಟಿ ರೂ. ಗಳಲ್ಲಿ)

ವರ್ಷದ ಚಂದಾದಾರಿಕೆ ಆದಾಯ - ಜಾಹೀರಾತು ಆದಾಯ

2016 9000 24300

2017 9900 26700

2018 10900 30400

2019 13000 32000

ಭಾರತದಲ್ಲಿ ವೀಕ್ಷಕರ ಸಂಖ್ಯೆಯನ್ನು ಹೇಗೆ ಮಾಡಲಾಗುತ್ತದೆ?

ಹೌದು, ಇದು ಎಲ್ಲರಿಗೂ ಇರುವ ಕುತೂಹಲಕಾರಿ ಪ್ರಶ್ನೆ. ಪ್ರಪಂಚದಾದ್ಯಂತದ ಎಲ್ಲಾ ಟೆಲಿವಿಷನ್ ಮಾರುಕಟ್ಟೆಗಳಂತೆ ಭಾರತದಲ್ಲಿ ವೀಕ್ಷಕರ ಅಳತೆಯನ್ನು ಸಹ ಪ್ರತಿನಿಧಿ ಮಾದರಿ ಆಧಾರಿತ ಸಮೀಕ್ಷೆಯಲ್ಲಿ ನಡೆಸಲಾಗುತ್ತದೆ.

ಬಾರ್ಕ್ ಇಂಡಿಯಾ ತನ್ನ BAROMETERS ಅನ್ನು ಟೆಲಿವಿಷನ್ ಮನೆಗಳ ಸಣ್ಣ ಫಲಕದಲ್ಲಿ ಅಳವಡಿಸುತ್ತದೆ. ಈ ಮನೆಗಳನ್ನು ವಾರ್ಷಿಕ ಸ್ಥಾಪನಾ ಸಮೀಕ್ಷೆಯ ಆಧಾರದ ಮೇಲೆ ಎಚ್ಚರಿಕೆಯಿಂದ ಆಯ್ಕೆ ಮಾಡಲಾಗುತ್ತದೆ. ಇದರಿಂದಾಗಿ ವೀಕ್ಷಕರ ದಾಖಲೆಗಳು, ದೂರದರ್ಶನ ವೀಕ್ಷಣೆಯ ನಿಖರ ಮಾಹಿತಿಯನ್ನು ಪತ್ತೆ ಹಚ್ಚಬಹುದಾಗಿದೆ.

ಟಿವಿ ರೇಟಿಂಗ್‌ಗಳ ಪ್ರಾಮುಖ್ಯತೆ ಏನು?

ಜಾಹೀರಾತುದಾರರು ಯಾವ ಚಾನಲ್‌ನಲ್ಲಿ ಜಾಹೀರಾತು ನೀಡಬೇಕೆಂದು ನಿರ್ಧರಿಸಲು ಟಿಆರ್‌ಪಿಗಳು ಮುಖ್ಯ ಪಾತ್ರ ವಹಿಸುತ್ತದೆ. ಪ್ರಸಾರಕರ ಆದಾಯದಲ್ಲಿ 2019 ರಲ್ಲಿ 45,000 ಕೋಟಿ ರೂ., ಜಾಹೀರಾತು ಆದಾಯದಿಂದ 32,000 ಕೋಟಿ ರೂ.ಗಳಿಕೆ ಮಾಡಲಾಗಿತ್ತು. ಇದು ಜಾಹೀರಾತು ಆದಾಯದ ಮೇಲೆ ಉದ್ಯಮದ ಅವಲಂಬನೆಯನ್ನು ಒತ್ತಿ ಹೇಳುತ್ತದೆ. ಅಲ್ಲದೇ, ಹೆಚ್ಚಾಗಿ ಪ್ರೇಕ್ಷಕರು ಏನನ್ನು ಹೆಚ್ಚು ಇಷ್ಟಪಡುತ್ತಾರೆ ಎಂಬುದರ ಬಗ್ಗೆ ಗುರುತಿಸುತ್ತದೆ.

ರೇಟಿಂಗ್​ ಸಂಸ್ಥೆಗಳ ಬೆಳವಣಿಗೆ...

ಬಾರ್ಕ್ ಎನ್ನುವುದು ಇಂಡಿಯನ್ ಬ್ರಾಡ್‌ಕಾಸ್ಟಿಂಗ್ ಫೌಂಡೇಶನ್ (ಐಬಿಎಫ್), ಇಂಡಿಯನ್ ಸೊಸೈಟಿ ಆಫ್ ಅಡ್ವರ್ಟೈಸರ್ಸ್ (ಐಎಸ್‌ಎ) ಮತ್ತು ಜಾಹೀರಾತು ಏಜೆನ್ಸಿಗಳ ಸಂಘ (ಎಎಎಐ) ಪ್ರತಿನಿಧಿಸುವ ಉದ್ಯಮ-ನೇತೃತ್ವದ ಸಂಸ್ಥೆಯಾಗಿದೆ. ಬಾರ್ಕ್ ಇಂಡಿಯಾ ತನ್ನ ಕಾರ್ಯಾಚರಣೆಯನ್ನು 2015 ರಲ್ಲಿ ಪ್ರಾರಂಭಿಸಿತು. ಅಂದಿನಿಂದ ಇದು ವಾಣಿಜ್ಯ ಆಧಾರದ ಮೇಲೆ ಟೆಲಿವಿಷನ್ ರೇಟಿಂಗ್ ಸೇವೆಗಳನ್ನು ಒದಗಿಸುವ ಏಕೈಕ ಸಂಸ್ಥೆಯಾಗಿದೆ.

ಭಾರತದಲ್ಲಿ, ORG-MARG ನ INTAM (ಇಂಡಿಯನ್ ನ್ಯಾಷನಲ್ ಟೆಲಿವಿಷನ್ ಆಡಿಯನ್ಸ್ ಮಾಪನ) ಅನ್ನು 1994 ರಲ್ಲಿ ಸ್ಥಾಪಿಸಲಾಯಿತು. INTAM ನ ಮಾದರಿ ಗಾತ್ರವು ಚಿಕ್ಕದಾಗಿದ್ದು ಪ್ರಮುಖ ನಗರಗಳಿಗೆ ಸೀಮಿತವಾಗಿದೆ. INTAM ಕಾರ್ಯಾಚರಣೆಯಲ್ಲಿದ್ದಾಗಲೇ ಎರಡನೇ ರೇಟಿಂಗ್ ಏಜೆನ್ಸಿಯಾದ TAM ಅನ್ನು 1998 ರಲ್ಲಿ ಆರಂಭಿಸಲಾಯಿತು. ತದನಂತರ ಅಂದರೆ 2001 ರಲ್ಲಿ INTAM ಮತ್ತು TAM ವಿಲೀನಗೊಂಡವು.

2004 ರಲ್ಲಿ ಮತ್ತೊಂದು ರೇಟಿಂಗ್ ಏಜೆನ್ಸಿಯಾದ ಆಡಿಯನ್ಸ್ ಮಾಪನ ಮತ್ತು ಅನಾಲಿಟಿಕ್ಸ್ ಲಿಮಿಟೆಡ್ (amap)ಆರಂಭವಾಯಿತು. ಆದಾಗ್ಯೂ, ಇದರ ವಾಣಿಜ್ಯ ಕಾರ್ಯಾಚರಣೆಗಳು ಅಧೀಕೃತವಾಗಿ ಫೆಬ್ರವರಿ 2007 ರಲ್ಲಿ ಪ್ರಾರಂಭವಾದವು. ಈ ಎರಡೂ ಏಜೆನ್ಸಿಗಳ ಕಾರ್ಯಾಚರಣೆಗಳು ಒಂದು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಕೆಲವು ದೊಡ್ಡ ನಗರಗಳಿಗೆ ಸೀಮಿತವಾಗಿವೆ. ಎರಡು ಏಜೆನ್ಸಿಗಳಲ್ಲಿ ಯಾವೊಂದು ಕೂಡ ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮ ನೆಲೆ ಕಂಡುಕೊಂಡಿಲ್ಲ.

2008 ರಲ್ಲಿ ವಾಣಿಜ್ಯ ಆಧಾರದ ಮೇಲೆ ಟಿವಿ ರೇಟಿಂಗ್ ಸೇವೆಗಳನ್ನು ಟಿಎಎಂ ಮೀಡಿಯಾ ರಿಸರ್ಚ್ ಮತ್ತು ಆಡಿಯನ್ಸ್ ಮಾಪನ ಮತ್ತು ಅನಾಲಿಟಿಕ್ಸ್ ಲಿಮಿಟೆಡ್ (amap) ಒದಗಿಸಿತು. ಇದಾದ ನಂತರ ಭಾರತದಲ್ಲಿ ರೇಟಿಂಗ್ ವ್ಯವಸ್ಥೆಯ ವಿಶ್ವಾಸಾರ್ಹತೆಯ ಬಗ್ಗೆ ಕಳವಳ ವ್ಯಕ್ತಪಡಿಸಲಾಯಿತು. 2008 ರಲ್ಲಿ MIB ಟೆಲಿವಿಷನ್ ಪ್ರೇಕ್ಷಕರ ಮಾಪನ (TAM), ಟೆಲಿವಿಷನ್ ರೇಟಿಂಗ್ ಪಾಯಿಂಟ್‌ಗಳು (TRP) ಮತ್ತು ರೇಟಿಂಗ್ ಏಜೆನ್ಸಿಗಳಿಗೆ ಅಳವಡಿಸಿಕೊಳ್ಳಬೇಕಾದ ನೀತಿ ಮಾರ್ಗಸೂಚಿಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ TRAI ಯು ಶಿಫಾರಸುಗಳನ್ನು ಕೋರಿತು.

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ತನ್ನ ಶಿಫಾರಸುಗಳನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ (ಎಂಐಬಿ) 2008 ರ ಆಗಸ್ಟ್ 19 ರಂದು ಸಲ್ಲಿಸಿತು. ಇನ್ನು ಕೈಗಾರಿಕಾ ನೇತೃತ್ವದ ಸಂಸ್ಥೆ ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಅನ್ನು ಸ್ಥಾಪಿಸುವ ಮೂಲಕ ಸ್ವಯಂ ನಿಯಂತ್ರಣದ ವಿಧಾನವನ್ನು TRAI ಶಿಫಾರಸು ಮಾಡಿತು. ಈಗ TAM ಮೀಡಿಯಾ ರಿಸರ್ಚ್ ವಾಣಿಜ್ಯ ಆಧಾರದ ಮೇಲೆ ಟೆಲಿವಿಷನ್ ರೇಟಿಂಗ್ ಸೇವೆಗಳ ಏಕೈಕ ಪೂರೈಕೆದಾರನಾಗಿದೆ. ಕಾರಣ AMAP ತನ್ನ ಸೇವೆಗಳನ್ನು ಸ್ಥಗಿತಗೊಳಿಸಿದೆ.

Last Updated : Oct 8, 2020, 9:10 PM IST

ABOUT THE AUTHOR

...view details