ಕರ್ನಾಟಕ

karnataka

ETV Bharat / bharat

'ಉಗ್ರ ಸುರಂಗ'ಕ್ಕೆ ಎಂಜಿನಿಯರ್​ಗಳ 'ಕೊಡುಗೆ': ಉನ್ನತಾಧಿಕಾರಿಗಳ ಶಂಕೆ - ಬಿಎಸ್​ಎಫ್​ ಯೋಧರಿಂದ ಮಾಹಿತಿ

ನವೆಂಬರ್ 22ರಂದು ಪತ್ತೆಯಾದ ಸುರಂಗ ಹೆದ್ದಾರಿಯೊಂದಕ್ಕೆ ಸಂಪರ್ಕಿಸಿರುವ ಸಾಧ್ಯತೆಯಿದೆ ಎಂದು ಸೇನೆಯ ಉನ್ನತಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

unearth tunnel in jammu
ಜಮ್ಮು ಕಾಶ್ಮೀರದಲ್ಲಿ ಉಗ್ರ ಸುರಂಗ

By

Published : Dec 1, 2020, 5:28 PM IST

Updated : Dec 1, 2020, 5:34 PM IST

ನವದೆಹಲಿ:ಭಯೋತ್ಪಾದಕರು ಭಾರತದೊಳಗೆ ನುಸುಳಲು ಬಳಸುತ್ತಿದ್ದರು ಎನ್ನಲಾದ ಸುರಂಗದಲ್ಲಿ ಭಾರತೀಯ ಸೇನೆ ಸುಮಾರು 200 ಮೀಟರ್​ಗಳಷ್ಟು ದೂರ ಕ್ರಮಿಸಿದೆ ಎಂದು ಸರ್ಕಾರದ ಉನ್ನತ ಮೂಲಗಳು ಮಾಹಿತಿ ನೀಡಿವೆ.

ನವೆಂಬರ್ 22ರಂದು ಜಮ್ಮು ಕಾಶ್ಮೀರದ ಸಾಂಬಾ ಸೆಕ್ಟರ್​ನ ಅಂತಾರಾಷ್ಟ್ರೀಯ ಗಡಿಯಲ್ಲಿ ಸುರಂಗ ಮಾರ್ಗವೊಂದನ್ನು ಭಾರತೀಯ ಸೇನೆ ಪತ್ತೆ ಹಚ್ಚಿತ್ತು. ಈ ಸುರಂಗದ ಒಳಗೆ ತೆರಳಿರುವ ಸೇನೆ ಈಗ ಪಾಕಿಸ್ತಾನದ ಕಡೆಗೆ 200 ಮೀಟರ್ ಚಲಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನವೆಂಬರ್​ನ ಮೂರನೇ ವಾರದಲ್ಲಿ ಕೆಲವು ಭಯೋತ್ಪಾದಕರನ್ನು ಕೊಂದ ಸೇನೆ ಕೆಲವು ಮೊಬೈಲ್​ಗಳನ್ನು ಜಪ್ತಿ ಮಾಡಿತ್ತು. ಈ ಮೊಬೈಲ್​ಗಳನ್ನು ಪರಿಶೀಲನೆ ನಡೆಸಿದ ವೇಳೆ ಸುರಂಗದ ಬಗ್ಗೆ ಕೆಲವು ಮಾಹಿತಿ ಸಿಕ್ಕಿತ್ತು. ಬಿಎಸ್​ಎಫ್​ ಹಾಗೂ ಜಮ್ಮು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಸುರಂಗವನ್ನು ಪತ್ತೆಹಚ್ಚಲಾಗಿತ್ತು.

ಇದನ್ನೂ ಓದಿ:ಉಗ್ರರ ಕಳ್ಳ ಮಾರ್ಗ: ಗಡಿರೇಖೆ ಬಳಿ ರಹಸ್ಯ ಸುರಂಗ ಪತ್ತೆ ಹಚ್ಚಿದ ಭಾರತೀಯ ಸೇನೆ

ಬಿಎಸ್​ಎಫ್​ ಸಂಸ್ಥಾಪನಾ ದಿನದ ಅಂಗವಾಗಿ ಮಾತನಾಡಿದ ಬಿಎಸ್​ಎಫ್ ಡಿಜಿ ರಾಕೇಶ್ ಆಸ್ಥಾನಾ ಈ ಮಾಹಿತಿ ನೀಡಿದ್ದು, ಕಾರ್ಯಾಚರಣೆ ಯಾವ ಹಂತದಲ್ಲಿದೆ ಎಂಬ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ಈ ಸುರಂಗ ಯಾವುದಾದರೂ ಹೆದ್ದಾರಿಗೆ ಸಂಪರ್ಕಿಸುವ ಗುಮಾನಿಯಿದೆ ಎಂದು ಬಿಎಸ್​ಎಫ್​ ಜಮ್ಮು ಫ್ರಾಂಟಿಯರ್​ನ ಇನ್ಸ್​ಪೆಕ್ಟರ್ ಜನರಲ್​ ಎನ್​.ಎಸ್​.ಜಮ್ವಾಲ್​​​​ ಸಂಶಯ ವ್ಯಕ್ತಪಡಿಸಿದ್ದು, ಸುರಂಗದ ಕೊನೆಯ ಭಾಗ ಪೊದೆಗಳಿಂದ ಕೂಡಿದ್ದು, ಮರಗಳು ಹಾಗೂ ಮಣ್ಣಿನ ಮೂಟೆಗಳಿಂದ ಮುಚ್ಚಲ್ಪಟ್ಟಿತ್ತು. ಈ ಮಣ್ಣಿನ ಮೂಟೆಗಳು ಪಾಕಿಸ್ತಾನದ ಕರಾಚಿಯಿಂದ ತರಲಾಗಿದೆ ಎಂದು ಹೇಳಿದ್ದಾರೆ.

ಇದರ ಜೊತೆಗೆ ಸುರಂಗ ಮಾರ್ಗ ಹೊಸದಾಗಿ ತೋಡಿದ್ದು, ಸುರಂಗ ನಿರ್ಮಿಸಲು ಎಂಜಿನಿಯರ್​ಗಳೂ ಸಾಥ್ ನೀಡಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದು ಎನ್​.ಎಸ್​. ಜಮ್ವಾಲ್​ ಆತಂಕಕಾರಿ ಮಾಹಿತಿ ನೀಡಿದ್ದಾರೆ.

Last Updated : Dec 1, 2020, 5:34 PM IST

ABOUT THE AUTHOR

...view details