ಕರ್ನಾಟಕ

karnataka

ETV Bharat / bharat

ನಾಳೆಯಿಂದ ಪ್ಯಾಸೆಂಜರ್​ ರೈಲು ಸೇವೆ... ಇಂದಿನಿಂದಲೇ ಆನ್​ಲೈನ್​ ಬುಕ್ಕಿಂಗ್​ ಆರಂಭ

ಲಾಕ್​ಡೌನ್​ ಮಧ್ಯೆ ಕೂಡ ಆಯ್ದ ಕೆಲವೊಂದು ನಗರಗಳಿಗೆ ರೈಲು ಸೇವೆ ಆರಂಭ ಮಾಡಲು ಭಾರತೀಯ ರೈಲ್ವೆ ಇಲಾಖೆ ಮುಂದಾಗಿದೆ.

By

Published : May 11, 2020, 8:18 AM IST

Updated : May 11, 2020, 9:35 AM IST

Indian Railways
Indian Railways

ನವದೆಹಲಿ: ದೇಶಾದ್ಯಂತ ಲಾಕ್​ಡೌನ್​​ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ತಿಂಗಳಿಂದ ಸೇವೆ ಸ್ಥಗಿತಗೊಳಿಸಿದ್ದ ರೈಲ್ವೆ ಇಲಾಖೆ ನಾಳೆಯಿಂದ ಸೇವೆ ಪುನಾರಂಭ ಮಾಡಲು ನಿರ್ಧರಿಸಿದೆ. ಹೀಗಾಗಿ ಕೆಲವೊಂದು ಮಹತ್ವದ ಷರತ್ತುಗಳೊಂದಿಗೆ ನಾಳೆಯಿಂದ ದೇಶದಲ್ಲಿ ರೈಲ್ವೆ ಕಾರ್ಯಾಚರಣೆ ಆರಂಭಗೊಳ್ಳಲಿದೆ.

ದೇಶದಲ್ಲಿ ಹೇರಿಕೆ ಮಾಡಲಾಗಿರುವ ಲಾಕ್​​ಡೌನ್​ ಮೇ.17ಕ್ಕೆ ಮುಕ್ತಾಯಗೊಳ್ಳಲಿದ್ದು, ಅದಕ್ಕೂ ನಾಲ್ಕು ದಿನ ಮುಂಚಿತವಾಗಿ ರೈಲು ಸೇವೆ ಆರಂಭ ಮಾಡಲು ಕೇಂದ್ರ ರೈಲ್ವೆ ಇಲಾಖೆ ನಿರ್ಧರಿಸಿದ್ದು, ಆರಂಭದಲ್ಲಿ ಕೇವಲ 15 ವಿಶೇಷ ರೈಲುಗಳು ಸಂಚಾರ ಆರಂಭ ಮಾಡಲಿವೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ರೈಲ್ವೆ ಖಾತೆ ಸಚಿವ ಪಿಯೂಷ್​ ಗೋಯಲ್​ ಟ್ವೀಟ್​ ಮಾಡಿ ಮಾಹಿತಿ ನೀಡಿದ್ದಾರೆ.

ಇಂದು ಸಂಜೆ 4 ಗಂಟೆಯಿಂದ ಆನ್​​ಲೈನ್​​ನಲ್ಲಿ ಟಿಕೆಟ್​ ಬುಕ್ಕಿಂಗ್​ ಮಾಡಬಹುದಾಗಿದ್ದು, ವಿಶೇಷ ರೈಲುಗಳು ದೆಹಲಿ, ಅಸ್ಸೋಂ, ಪಶ್ಚಿಮ ಬಂಗಾಳ, ಬಿಹಾರ,ಛತ್ತೀಸ್​ಗಢ, ಗುಜರಾತ್,ಜಮ್ಮು, ಜಾರ್ಖಂಡ್​, ಕರ್ನಾಟಕ, ಕೇರಳ,ಮಹಾರಾಷ್ಟ್ರ, ಒಡಿಶಾ, ತಮಿಳುನಾಡು, ತೆಲಂಗಾಣ ಹಾಗೂ ತ್ರಿಪುರಾದಲ್ಲಿ ಆರಂಭಗೊಳ್ಳಲಿವೆ.

ರೈಲ್ವೆ ಇಲಾಖೆ ವೆಬ್​​ಸೈಟ್​​ ಐಆರ್​​ಟಿಸಿಯಲ್ಲಿ ಮಾತ್ರ ಬುಕ್ಕಿಂಗ್​ ಮಾಡಲು ಅವಕಾಶ ನೀಡಲಾಗಿದ್ದು, ಪ್ರಯಾಣಿಕರು ತಮ್ಮೊಂದಿಗೆ ತೆಗೆದುಕೊಂಡು ಹೋಗುವ ಲಗೇಜ್​​ ಸಂಪೂರ್ಣ ತಪಾಸಣೆಗೊಳಪಡಿಸಬೇಕು ಹಾಗೂ ಮಾಸ್ಕ್​ ಧರಿಸುವುದು ಕಡ್ಡಾಯ ಎಂದು ರೈಲ್ವೆ ಇಲಾಖೆ ತಿಳಿಸಿದೆ. ರೈಲ್ವೆ ಪ್ರಯಾಣದ ವೇಳೆ ಸ್ಕ್ರೀನಿಂಗ್​ ಮಾಡುವುದಾಗಿ ಇಲಾಖೆ ಹೇಳಿದ್ದು, ಕೋವಿಡ್​ ಲಕ್ಷಣ ಕಂಡು ಬಂದರೆ ಪ್ರಯಾಣಕ್ಕೆ ಅವಕಾಶ ನೀಡಲ್ಲ ಎಂದಿದೆ. ಈಗಾಗಲೇ ವಿವಿಧ ರಾಜ್ಯಗಳಲ್ಲಿ ಉಳಿದುಕೊಂಡಿರುವ ವಲಸೆ ಕಾರ್ಮಿಕರನ್ನ 366 ಶ್ರಮಿಕ್​​ ವಿಶೇಷ ರೈಲುಗಳ ಮೂಲಕ ಕರೆದುಕೊಂಡು ಬರಲಾಗುತ್ತಿದ್ದು, ಅದರ ಮಧ್ಯೆ ಕೇಂದ್ರ ರೈಲ್ವೆ ಇಲಾಖೆ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.

ದೇಶದಲ್ಲಿ ಲಾಕ್​​ಡೌನ್​ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ದೇಶದಲ್ಲಿ ಪ್ರತಿದಿನ 12,000 ಸಾವಿರ ರೈಲು ಸಚಾರ ನಡೆಸುತ್ತಿದ್ದವು. ಇದರಿಂದ ಪ್ರತಿದಿನ Rs 28,032.80 ಕೋಟಿ ಗೂಡ್ಸ್​​ನಿಂದ ಹಾಗೂ 12,844.37 ಪ್ಯಾಸೆಂಜರ್​​ಗಳ ಪ್ರಯಾಣದಿಂದ ಹಣ ಬರುತ್ತಿತ್ತು. ಆದರೆ ಲಾಕ್​ಡೌನ್​​ ಹೇರಿಕೆ ಆಗಿರುವ ಕಾರಣ ರೈಲ್ವೆ ಇಲಾಖೆ ನಷ್ಟ ಅನುಭವಿಸಿದೆ.

Last Updated : May 11, 2020, 9:35 AM IST

ABOUT THE AUTHOR

...view details