ಗುವಾಹಟಿ(ಆಸ್ಸೋಂ): ದೇಶಾದ್ಯಂತ ಕೊರೊನಾ ಅಬ್ಬರ ಜೋರಾಗಿದ್ದು, ಇದರ ಮಧ್ಯೆ ಭಾರತೀಯ ರೈಲ್ವೆ ಇಲಾಖೆ ಹೊಸ ಹೊಸ ಪ್ರಯೋಗಕ್ಕೆ ಕೈ ಹಾಕುತ್ತಿದೆ. ಇದೀಗ ರೈಲ್ವೆ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಾಣ ಮಾಡಿದ್ದು, ಇದೇ ಮೊದಲ ಬಾರಿಗೆ ಬರೋಬ್ಬರಿ 2.8 ಕಿಲೋ ಮೀಟರ್ ಉದ್ದದ ರೈಲು ಓಡಿಸಿದೆ.
ರೈಲ್ವೆ ಇತಿಹಾಸದಲ್ಲೇ ಹೊಸ ದಾಖಲೆ: 2.8 ಕಿ.ಮೀ. ಉದ್ದದ 'ಶೇಷನಾಗ್' ರೈಲು ಓಡಿದ್ದು ಏಲ್ಲಿ!? - ಭಾರತೀಯ ರೈಲ್ವೆ ಇಲಾಖೆ ಶೇಷ್ನಾಗ್ ರೈಲು
ಕೊರೊನಾ ಅಬ್ಬರ ಜೋರಾಗಿದ್ದು, ಇದರ ಮಧ್ಯೆ ರೈಲ್ವೆ ಇಲಾಖೆ ಹೊಸದೊಂದು ದಾಖಲೆ ನಿರ್ಮಾಣ ಮಾಡಿದೆ.
![ರೈಲ್ವೆ ಇತಿಹಾಸದಲ್ಲೇ ಹೊಸ ದಾಖಲೆ: 2.8 ಕಿ.ಮೀ. ಉದ್ದದ 'ಶೇಷನಾಗ್' ರೈಲು ಓಡಿದ್ದು ಏಲ್ಲಿ!? Indian Railways reaches another milestone](https://etvbharatimages.akamaized.net/etvbharat/prod-images/768-512-7868659-thumbnail-3x2-wdfdfd.jpg)
ಇದಕ್ಕೆ ಸಂಬಂಧಿಸಿದಂತೆ ಇಂಡಿಯನ್ ರೈಲ್ವೆ ಟ್ವೀಟ್ ಮಾಡಿ ಮಾಹಿತಿ ನೀಡಿದೆ. ಎರಡು ನಿಮಿಷ 19 ಸೆಂಕೆಡ್ಗಳ ವಿಡಿಯೋ ಹರಿಬಿಟ್ಟಿರುವ ಇಂಡಿಯನ್ ರೈಲ್ವೆ, ಈ ರೈಲು BOXN ರೇಕ್ ಸೇರುವ ಮೂಲಕ ನಿರ್ಮಾಣ ಮಾಡಲಾಗಿದ್ದು, ನಾಲ್ಕು ಸೆಟ್ ವಿದ್ಯುತ್ ಲೋಕೋಮೋಟಿವ್‌ಗಳಿಂದ ನಿಯಂತ್ರಿಸಲ್ಪಡುತ್ತದೆ. ಒಂಭತ್ತು ಎಂಜಿನ್ ಮತ್ತು ನಾಲ್ಕು ಗಾರ್ಡ್ ವ್ಯಾನ್ ಹೊಂದಿದೆ.
ಶೇಷನಾಗ್ 251 ಬೋಗಿ ಹೊಂದಿರುವ ಸರಕು ಸಾಗಣೆ ರೈಲಾಗಿದ್ದು, ಆಗ್ನೇಯ ಮಧ್ಯ ರೈಲ್ವೆ (ಎಸ್‌ಇಸಿಆರ್) ನಾಗ್ಪುರ ವಿಭಾಗದಿಂದ ಕಾರ್ಯಾಚರಣೆ ನಡೆಸಿದೆ. ಇದಕ್ಕೂ ಎರಡು ದಿನ ಮುಂಚಿತವಾಗಿ ಬರೋಬ್ಬರಿ 177 ಬೋಗಿ ಹೊಂದಿದ್ದ 'ಸೂಪರ್ ಅನಾಕೊಂಡ್' ರೈಲು ಓಡಿಸಿರುವ ಬಗ್ಗೆ ರೈಲ್ವೆ ಇಲಾಖೆ ಟ್ವೀಟ್ ಮಾಡಿತ್ತು. ಈ ಹಿಂದೆ ಭಾರತೀಯ ರೈಲ್ವೆ ಸುಮಾರು 2 ಕಿಲೋ ಮೀಟರ್ ಉದ್ದದ ರೈಲು ಓಡಿಸಿ ದಾಖಲೆ ಬರೆದಿತ್ತು.