ನವದೆಹಲಿ:ದೇಶದಲ್ಲಿ ಮೇ 3ರವರೆಗೆ ಎರಡನೇ ಹಂತದ ಲಾಕ್ಡೌನ್ ಮುಂದುವರಿಯಲಿದ್ದು, ದೇಶದ ಜನರನ್ನುದ್ದೇಶಿಸಿ ನಮೋ ಈ ಮಾಹಿತಿ ಹೊರಹಾಕುತ್ತಿದ್ದಂತೆ ರೈಲ್ವೆ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ.
ಭಾರತೀಯ ರೈಲ್ವೆ ಮೇ 3ವರೆಗೆ ಟಿಕೆಟ್ ಬುಕ್ಕಿಂಗ್ ರದ್ಧು ಮಾಡಿ ಆದೇಶ ಹೊರಹಾಕಿದೆ. ಪ್ಯಾಸೆಂಜರ್, ಸಬರ್ಬನ್,ಕೋಲ್ಕತ್ತಾ ಮೆಟ್ರೋ ರೈಲು, ಪ್ರೀಮಿಯಂ ರೈಲು, ಮೇಲ್/ಎಕ್ಸ್ಪ್ರೆಸ್ ರೈಲುಗಳ ಬುಕ್ಕಿಂಗ್ ಇದೀಗ ಮೇ 3ರವರೆಗೆ ರದ್ದುಗೊಳಿಸಿದ್ದಾಗಿ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ದೇಶದಲ್ಲಿ ಈ ಹಿಂದೆ ಲಾಕ್ಡೌನ್ ಹೇರಿಕೆ ಮಾಡುತ್ತಿದ್ದಂತೆ ಏಪ್ರಿಲ್ 14ರವರೆಗೆ ಟಿಕೆಟ್ ಬುಕ್ಕಿಂಗ್ ರದ್ಧುಗೊಳಿಸಿ ರೈಲ್ವೆ ಇಲಾಖೆ ಮಾಹಿತಿ ಹೊರಹಾಕಿತ್ತು. ಇದೀಗ ಮತ್ತೊಂದು ಸಲ ದೇಶದಲ್ಲಿ ಲಾಕ್ಡೌನ್ ಹೇರಿಕೆ ಮಾಡಿರುವ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ.