ಖೇಮ್ಕರನ್(ಪಂಜಾಬ್):ಮೇಲಿಂದ ಮೇಲೆ ನಾವು ಶಾಂತಿ ಒಪ್ಪಂದಕ್ಕೆ ಸಿದ್ಧರಿದ್ದೇವೆ ಎಂದು ಹೇಳುವ ಪಾಕ್, ತನ್ನ ನರಿ ಬುದ್ದಿಯನ್ನ ಮತ್ತೊಮ್ಮೆ ತೋರಿಸಿದೆ. ಕಳೆದ ಕೆಲ ದಿನಗಳ ಹಿಂದೆ ಡ್ರೋನ್ ಕ್ಯಾಮರಾ ಹರಿಬಿಟ್ಟಿದ್ದ ಪಾಕ್ ಇದೀಗ ಎಫ್-16 ಯುದ್ಧ ವಿಮಾನಗಳನ್ನ ಭಾರತದ ಗಡಿಯೊಳಗೆ ಒಳನುಗಿಸುವ ವಿಫಲ ಯತ್ನ ನಡೆಸಿದೆ.
ಮತ್ತೆ ದುಸ್ಸಾಹಸಕ್ಕೆ ಪಾಕ್ ಯತ್ನ... ಎಫ್-16 ಹಿಮ್ಮೆಟ್ಟಿಸಿದ ಮಿರಾಜ್,ಸುಖೋಯ್! - ಪಂಜಾಬ್
ಪಂಜಾಬ್ನ ಖೇಮ್ಕರನ್ ಸೆಕ್ಟರ್ ಬಳಿ ಭಾರತದ ಗಡಿಗೆ ಹತ್ತಿರವಾಗಿ ತಿರುಗಾಡುತ್ತಿದ್ದ ಪಾಕ್ನ ನಾಲ್ಕು ಯುಎವ್ಹಿ ಎಫ್-16 ಯುದ್ಧ ವಿಮಾನಗಳನ್ನ ಹಿಮ್ಮೆಟ್ಟಿಸುವಲ್ಲಿ ವಾಯುಸೇನೆಯ ಸುಖೋಯ್, ಮಿರಾಜ್ ಯುದ್ಧ ವಿಮಾನಗಳು ಯಶಸ್ವಿಯಾಗಿವೆ.
ಪಂಜಾಬ್ನ ಖೇಮ್ಕರನ್ ಸೆಕ್ಟರ್ ಬಳಿ ಭಾರತದ ಗಡಿಗೆ ಹತ್ತಿರವಾಗಿ ತಿರುಗಾಡುತ್ತಿದ್ದ ಪಾಕ್ನ ನಾಲ್ಕು ಯುಎವ್ಹಿ ಎಫ್-16 ಯುದ್ಧ ವಿಮಾನಗಳನ್ನ ಹಿಮ್ಮೆಟ್ಟಿಸುವಲ್ಲಿ ವಾಯುಸೇನೆಯ ಸುಖೋಯ್, ಮಿರಾಜ್ ಯುದ್ಧ ವಿಮಾನಗಳು ಯಶಸ್ವಿಯಾಗಿವೆ.
ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ನಾಲ್ಕು ಎಫ್-16 ಯುದ್ಧ ವಿಮಾನ ಭಾರತದ ಗಡಿಗೆ ಹತ್ತಿರವಾಗಿ ತಿರುಗಾಡುತ್ತಿದ್ದವು. ಇದನ್ನ ಭಾರತದ ರೆಡಾರ್ ಗಳು ಗಮನಿಸಿವೆ. ಬಳಿಕ ಭಾರತೀಯ ವಾಯುಸೇನೆಯ ಮಿರಾಜ್-2000 ಮತ್ತು ಸುಖೋಯ್-30ಎಂಕೆಐ ಯುದ್ಧ ವಿಮಾನಗಳು ಪಾಕಿಸ್ತಾನದ ಎಫ್-16 ವಿಮಾನಗಳನ್ನು ಹಿಮ್ಮೆಟ್ಟಿಸಿವೆ ಎಂದು ಸೇನಾ ಮೂಲಗಳು ಸ್ಪಷ್ಟಪಡಿಸಿವೆ. ದಾಳಿಯ ಸಂಪೂರ್ಣ ಮಾಹಿತಿ ಇನ್ನಷ್ಟೇ ಗೊತ್ತಾಗಬೇಕಿದೆ.