ಹೈದರಾಬಾದ್:ಸುಮಾರು 12 ಗಂಟೆಗಳ ಕಾಲ ಪಾಕ್ ವಶದಲ್ಲಿದ್ದ ಇಬ್ಬರು ಭಾರತೀಯ ಅಧಿಕಾರಿಗಳು ಬಿಡುಗಡೆಯಾಗಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ಇಬ್ಬರು ಸಿಐಎಸ್‌ಎಫ್ ಅಧಿಕಾರಿಗಳು ಬಂಧನಕ್ಕೆ ಒಳಗಾಗಿದ್ದರು.
ಪಾಕ್ ವಶದಲ್ಲಿದ್ದ ಇಬ್ಬರು ಭಾರತೀಯ ಅಧಿಕಾರಿಗಳ ಬಿಡುಗಡೆ - ಸಿಐಎಸ್ಎಫ್ ಅಧಿಕಾರಿ
ಅಧಿಕಾರಿಗಳನ್ನು ಸುಮಾರು ಹನ್ನೆರಡು ಗಂಟೆಗಳ ಕಾಲ ಬಂಧನದಲ್ಲಿಟ್ಟಿದ್ದ ಪಾಕಿಸ್ತಾನ, ಅಂತಿಮವಾಗಿ ಇಬ್ಬರನ್ನು ಇಸ್ಲಾಮಾಬಾದ್‌ನಲ್ಲಿನ ಹೈಕಮಿಷನ್‌ಗೆ ಹಸ್ತಾಂತರಿಸಿದೆ.
ಹಿಟ್ ಅಂಡ್ ರನ್ ಆರೋಪದ ಮೇಲೆ ಅವರನ್ನು ಸುಮಾರು ಹನ್ನೆರಡು ಗಂಟೆಗಳ ಕಾಲ ಬಂಧನದಲ್ಲಿಟ್ಟಿದ್ದ ಪಾಕಿಸ್ತಾನ, ಅಂತಿಮವಾಗಿ ಇಬ್ಬರು ಅಧಿಕಾರಿಗಳನ್ನು ಇಸ್ಲಾಮಾಬಾದ್‌ನಲ್ಲಿನ ಹೈಕಮಿಷನ್‌ಗೆ ಹಸ್ತಾಂತರಿಸಿದೆ.
ಸಿಐಎಸ್ಎಫ್ ಅಧಿಕಾರಿಗಳಾದ ಡಿ ಬ್ರಹ್ಮ ಮತ್ತು ಪಾಲ್ ಸೆಲ್ವಾಡಾಸ್ ಇಬ್ಬರೂ ಭಾರತದ ರಾಜತಾಂತ್ರಿಕ ಕಾರ್ಯಾಚರಣೆಯಲ್ಲಿದ್ದರು. ಆದರೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇವರನ್ನು ವಶಕ್ಕೆ ಪಡೆದಿತ್ತು.