ನವದೆಹಲಿ:ಭಾರತೀಯ ನೌಕಾಪಡೆ ಮಂಗಳವಾರ ಬ್ರಹ್ಮೋಸ್ ಸೂಪರ್ಸಾನಿಕ್ ಕ್ಷಿಪಣಿಯ ಹಡಗು ವಿರೋಧಿ ಆವೃತ್ತಿಯನ್ನು ಯಶಸ್ವಿಯಾಗಿ ಪರೀಕ್ಷೆ ಮಾಡಿದೆ. ಈ ಕ್ಷಿಪಣಿ ಭಾರತೀಯ ನೌಕಾ ಪಡೆಯ ಬಲ ಹೆಚ್ಚಿಸಲಿದೆ.
ಅಂಡಮಾನ್ ಮತ್ತು ನಿಕೋಬರ್ ದ್ವೀಪ ಪ್ರದೇಶದಲ್ಲಿ ಐಎನ್ಎಸ್ ರಣವಿಜಯ್ ಮೂಲಕ ಬ್ರಹ್ಮೋಸ್ ಕ್ಷಿಪಣಿಯನ್ನು ಪರೀಕ್ಷೆ ಮಾಡಲಾಗಿದೆ. ಇದೇ ವಾರದ ಆರಂಭದಲ್ಲಿ ಭೂಮಿಯ ಮೇಲಿನ ಗುರಿಯ ಮೇಲೆ ದಾಳಿ ಮಾಡುವ ಬ್ರಹ್ಮೋಸ್ ಆವೃತ್ತಿಯನ್ನು ಅಂಡಮಾನ್ ಮತ್ತು ನಿಕೋಬರ್ನಲ್ಲಿ ಭಾರತೀಯ ನೌಕಾಪಡೆ ಪರೀಕ್ಷೆ ನಡೆಸಿತ್ತು.