ಕರ್ನಾಟಕ

karnataka

ETV Bharat / bharat

ಭಾರತೀಯ ನೌಕಾಪಡೆಗೆ 9ನೇ ಪಿ-8ಐ ಕಣ್ಗಾವಲು ವಿಮಾನ ಸೇರ್ಪಡೆ

ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ ಬಂದಿದೆ. ಅಮೆರಿಕದೊಂದಿಗೆ ಮಾಡಿಕೊಂಡಿದ್ದ ಒಪ್ಪಂದದಂತೆ ನೌಕಾಪಡೆಯು ಪಿ-8ಐ 9ನೇ ವಿಮಾನವು ಗೋವಾ ವಾಯುನೆಲೆಗೆ ಬಂದಿಳಿದಿದೆ.

Indian Navy receives ninth P-8I surveillance plane at Goa naval airbase
ಭಾರತೀಯ ನೌಕಾಪಡೆಗೆ 9ನೇ ಪಿ-8ಐ ಕಣ್ಗಾವಲು ವಿಮಾನ ಸೇರ್ಪಡೆ

By

Published : Nov 19, 2020, 9:54 AM IST

ನವದೆಹಲಿ: ಭಾರತೀಯ ನೌಕಾಸೇನೆಗೆ ಇನ್ನಷ್ಟು ಬಲ ತುಂಬಲು ಇದೀಗ 2009ರ ಒಪ್ಪಂದದಂತೆ ಜಲಾಂತರ್ಗಾಮಿ ನೌಕೆಗಳ ಮೇಲೆ ಕಣ್ಣಿಡಲು ಪಿ-8ಐ 9ನೇ ವಿಮಾನವು ಅಮೆರಿಕದಿಂದ ಗೋವಾ ವಾಯುನೆಲೆಗೆ ಬಂದಿಳಿದಿದೆ.

ಭಾರತ 8 ವಿಮಾನಗಳನ್ನು ಪಡೆದ ಬಳಿಕ ಹೆಚ್ಚುವರಿಯಾಗಿ ಇನ್ನೂ 4 ವಿಮಾನಗಳಿಗೆ ಬೇಡಿಕೆ ಇಟ್ಟಿತ್ತು. ಈ ನಾಲ್ಕು ವಿಮಾನದಲ್ಲಿ ಇದೀಗ ಗೋವಾಗೆ ಬಂದಿಳಿದ ವಿಮಾನ ಮೊದಲನೆಯದಾಗಿದೆ.

ಪಿ-8ಐ ವಿಮಾನವು ಪಿ-8ಎ ಪೋಸಿಡಾನ್ ವಿಮಾನದ ಉನ್ನತ ಹಂತದ್ದಾಗಿದ್ದು, ಯುಎಸ್​​​ ಸೇನೆಯ ಪಿ-3 ಫ್ಲೀಟ್​​​​​ನ ಬದಲಾಗಿ ಬೋಯಿಂಗ್ ಸಂಸ್ಥೆ ಅಭಿವೃದ್ಧಿ ಪಡಿಸಿದೆ.

ಭಾರತೀಯ ನೌಕಾಪಡೆಯು ಈ ಪಿ-8 ಸರಣಿಯ ವಿಮಾನಗಳ ಮೊದಲ ಅಂತಾರಾಷ್ಟ್ರೀಯ ಗ್ರಾಹಕವಾಗಿದ್ದು, ಜನವರಿ 1, 2009ರಲ್ಲಿ ಸುಮಾರು 2.1 ಬಿಲಿಯನ್ ಅಮೆರಿಕನ್​​ ಡಾಲರ್ ಮೊತ್ತದಲ್ಲಿ 8 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಪಿ-8ಐ ವಿಮಾನವು ಶತ್ರು ದೇಶದ ಜಲಾಂತರ್ಗಾಮಿ ನೌಕೆಗಳ ಮೇಲೆ ಕಣ್ಣಿಡಲಿದ್ದು, ಗುಪ್ತಚರ, ಕಣ್ಗಾವಲು ಮತ್ತು ಕರಾವಳಿ ಕಾರ್ಯಾಚರಣೆಗಳಿಗೆ ಸಜ್ಜುಗೊಂಡಿದೆ. ಅಲ್ಲದೆ ಇದರ ಸಂವಹನ ಮತ್ತು ನಿಯಂತ್ರಕಗಳ ಕೆಲ ಭಾಗಗಳು ಸ್ಥಳೀಯವಾಗಿ ಅಭಿವೃದ್ಧಿ ಪಡಿಸಿದ್ದಾಗಿವೆ.

ABOUT THE AUTHOR

...view details