ಕರ್ನಾಟಕ

karnataka

By

Published : Nov 25, 2020, 7:19 PM IST

ETV Bharat / bharat

ಅಮೆರಿಕದ ಎರಡು ಡ್ರೋಣ್​ಗಳ ಗುತ್ತಿಗೆ ಪಡೆದ ನೌಕಾಪಡೆ: ಲಡಾಖ್​ನಲ್ಲಿ ನಿಯೋಜನೆ

ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆ ನೀಡಿದ 'ತುರ್ತು ಖರೀದಿ ಅಧಿಕಾರ'ಗಳ ಅಡಿಯಲ್ಲಿ ಈ ಡ್ರೋಣ್​ಗಳನ್ನು ನೌಕಾಪಡೆ ಖರೀದಿ ಮಾಡಿದ್ದು, ಲಡಾಖ್​ ಗಡಿಯಲ್ಲಿ ನಿಯೋಜನೆ ಮಾಡಲಾಗಿದೆ.

American Predator drones
ಅಮೆರಿಕದ ಡ್ರೋಣ್​​

ನವದೆಹಲಿ: ಗಾಲ್ವಾನ್ ಸಂಘರ್ಷದ ನಂತರ ಚೀನಾದೊಂದಿಗೆ ಮಾತುಕತೆಗಳು ನಡೆಯುತ್ತಿರುವ ಬೆನ್ನಲ್ಲೇ ಅಮೆರಿಕದ ಎರಡು ಡ್ರೋಣ್​ಗಳನ್ನು ಭಾರತ ಗುತ್ತಿಗೆಗೆ ಪಡೆದುಕೊಂಡಿದ್ದು, ಭಾರತದ ನೌಕಾಪಡೆಗೆ ಸೇರ್ಪಡೆಗೊಳಿಸಲಾಗಿದೆ.

ಈ ಡ್ರೋಣ್​ಗಳನ್ನು ಭಾರತ, ಚೀನಾ ಗಡಿಯ ಲಡಾಖ್​​ನಲ್ಲಿ ಹಾಗೂ ಹಿಂದೂ ಮಹಾಸಾಗರದಲ್ಲಿ ಭದ್ರತೆಗಾಗಿ ಬಳಸಲಾಗುತ್ತದೆ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ಮಾಹಿತಿ ನೀಡಿವೆ.

ಭಾರತಕ್ಕೆ ಶಾಕಿಂಗ್​! ಮಾತುಕತೆ ಆಡುತ್ತಲ್ಲೇ 3,488 ಕಿ.ಮೀ. ಗಡಿ ಉದ್ದಕ್ಕೂ ಚೀನಾ ರೇಡಾರ್ ಹದ್ದಿನ ಕಣ್ಣು..!

ನವೆಂಬರ್ ಎರಡನೇ ವಾರದಲ್ಲಿ ಅಮೆರಿಕದ ಡ್ರೋಣ್​ಗಳು ಭಾರತಕ್ಕೆ ಬಂದಿದ್ದು, ಐಎನ್​ಎಸ್ ರಜಲಿ ನೌಕಾನೆಲೆಯಲ್ಲಿ ನವೆಂಬರ್ 21ರಂದು ಕಾರ್ಯಾಚರಣೆ ಆರಂಭಿಸಿವೆ. ಸುಮಾರು 30 ಗಂಟೆಗಳ ಕಾಲ ಹಾರುವ ಸಾಮರ್ಥ್ಯ ಇರುವ ಈ ಡ್ರೋಣ್​ಗಳು ಭಾರತದ ಸಾಗರೋತ್ತರ ಭದ್ರತೆ ವಿಚಾರದಲ್ಲಿ ಬಹುಮುಖ್ಯವಾಗಿದೆ.

ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆ ನೀಡಿದ 'ತುರ್ತು ಖರೀದಿ ಅಧಿಕಾರ'ಗಳ ಅಡಿಯಲ್ಲಿ ಈ ಡ್ರೋಣ್​ಗಳನ್ನು ನೌಕಾಪಡೆ ಖರೀದಿ ಮಾಡಿದೆ. ಚೀನಾ ಹಾಗೂ ಭಾರತದ ಸಂಘರ್ಷ ಹಿನ್ನೆಲೆಯಲ್ಲಿ ರಕ್ಷಣಾ ಇಲಾಖೆ ಈ ಡ್ರೋನ್​ಗಳ ಖರೀದಿಗೆ ಅನುಮತಿ ನೀಡಿದೆ.

ಈ ಡ್ರೋಣ್​ಗಳಿಗೆ ಅಮೆರಿಕದಿಂದಲೇ ಸಿಬ್ಬಂದಿಯನ್ನು ತರಲಾಗಿದ್ದು, ಆ ಸಿಬ್ಬಂದಿ ನೌಕಾನೆಲೆಯಲ್ಲಿ ಕೆಲಸ ಮಾಡಲಿದ್ದಾರೆ. ಸದ್ಯಕ್ಕೆ ಒಂದು ವರ್ಷದ ಗುತ್ತಿಗೆಯನ್ನು ಪಡೆಯಲಾಗಿದ್ದು, ಇದೇ ರೀತಿಯಲ್ಲಿ 18 ಡ್ರೋಣ್​ಗಳನ್ನು ತರಲು ರಕ್ಷಣಾ ಇಲಾಖೆ ಚಿಂತನೆ ನಡೆಸಿದೆ.

ಭಾರತ ಹಾಗೂ ಚೀನಾದ ನಡುವೆ ಸಂಘರ್ಷ ನಡೆಯುತ್ತಿದ್ದು, ಭಾರತದ ಪರವಾಗಿ ಅಮೆರಿಕ ಕೆಲಸ ಮಾಡುತ್ತಿದೆ. ಕೆಲವು ವಿಚಾರಗಳಲ್ಲಿ ಸಂಪೂರ್ಣ ಬೆಂಬಲ ನೀಡಿದೆ. ಈಗ ರಕ್ಷಣಾ ಸ್ವಾಧೀನ ಪ್ರಕ್ರಿಯೆ-2020 ಹಾಗೂ ರಕ್ಷಣಾ ಸ್ವಾಧೀನ ಕೈಪಿಡಿ- 2009ರ ಪ್ರಕಾರ ಅಮೆರಿಕದ ಶಸ್ತ್ರಾಸ್ತ್ರಗಳನ್ನು ಗುತ್ತಿಗೆ ಪಡೆದುಕೊಳ್ಳಬಹುದಾಗಿದೆ.

ABOUT THE AUTHOR

...view details