ಮುಂಬೈ(ಮಹಾರಾಷ್ಟ್ರ):ಭಗವಾನ್ ಮಹಾವೀರ್ ಜಯಂತಿಯ ಅಂಗವಾಗಿ ಭಾರತೀಯ ಷೇರು ಮಾರುಕಟ್ಟೆಗಳನ್ನು ಇಂದು ಮುಚ್ಚಲಾಗಿದೆ. ಮುಂಬೈನ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಹಾಗೂ ದೆಹಲಿಯ ನ್ಯಾಷನಲ್ ಸ್ಟಾಕ್ನಲ್ಲಿ ಯಾವುದೇ ವ್ಯವಹಾರಗಳು ನಡೆಯುತ್ತಿಲ್ಲ.
ಫಾರೆಕ್ಸ್(ಫಾರಿನ್ ಎಕ್ಸ್ಚೇಂಜ್) ಹಾಗೂ ಸರಕುಗಳ ಮಾರುಕಟ್ಟೆಯಲ್ಲಿ ಚಟುವಟಿಕೆಗಳು ಸ್ತಬ್ಧವಾಗಿವೆ. ಸಾವಿರ ಕೋಟಿ ವ್ಯವಹಾರ ಮಾಡುವ ಲೋಹಗಳ ಸಗಟು ಮಾರುಕಟ್ಟೆಗಳು ಬಂದ್ ಆಗಿವೆ. ರಾಷ್ಟ್ರಾದ್ಯಂತ ಲಾಕ್ಡೌನ್ ಘೋಷಣೆಯಾದ ಕಾರಣದಿಂದ ಈಗಾಗಲೇ ಬಹುತೇಕ ಜೈನ್ ದೇವಾಲಯಗಳು ಮುಚ್ಚಿವೆ.
ಏಪ್ರಿಲ್ 3ರಂದು ಮುಂಬೈನ ಎಸ್ ಮತ್ತು ಪಿ (ಸ್ಟಾಂಡರ್ಡ್ ಅಂಡ್ ಪೂರ್)ನ ಸೆನ್ಸೆಕ್ಸ್ 674 ಪಾಯಿಂಟ್ ಅಥವಾ ಶೇ.2.39ರಷ್ಟು ಕುಸಿದು 27,591ಕ್ಕೆ ತಲುಪಿತ್ತು. ಇದೇ ವೇಳೆ ನಿಫ್ಟಿ-50 ಸುಮಾರು 170 ಪಾಯಿಂಟ್ ಅಥವಾ ಶೇ.2.06ರಷ್ಟು ಕುಸಿದು 8,084ಕ್ಕೆ ತಲುಪಿತ್ತು.
ಕೆಲವು ಏಷ್ಯಾದ ಷೇರು ಮಾರುಕಟ್ಟೆಗಳೊಂದಿಗೆ ದಕ್ಷಿಣ ಕೊರಿಯಾದ ಕೋಸ್ಪಿ ಶೇ.1.4ರಷ್ಟು ಏರಿಕೆ ಕಂಡಿತ್ತು. ಇದೇ ವೇಳೆ ಜಪಾನ್ನ ನಿಕ್ಕಿ ಕೂಡಾ ಶೇ.0.2ರಷ್ಟು ಏರಿಕೆ ಕಂಡಿತ್ತು. ಚೀನಾ ಷೇರು ಮಾರುಕಟ್ಟೆ ಸಾರ್ವಜನಿಕ ರಜೆಯ ಕಾರಣಕ್ಕೆ ಮುಚ್ಚಲ್ಪಟ್ಟಿವೆ. ಡೊನಾಲ್ಡ್ ಟ್ರಂಪ್ ದೇಶದ ಆರ್ಥಿಕತೆ ಸುಧಾರಿಸುತ್ತದೆ ಎಂಬ ಭರವಸೆ ವ್ಯಕ್ತಪಡಿಸಿದ ನಂತರ ಅಮೆರಿಕದ ಷೇರು ಮಾರುಕಟ್ಟೆ ಚೇತರಿಕೆ ಕಂಡಿದೆ.