ಕರ್ನಾಟಕ

karnataka

ETV Bharat / bharat

ಗಡಿಯಲ್ಲಿ ನೇಪಾಳ ಪೊಲೀಸರ ಉಪಟಳ: ಚಿತ್ರಹಿಂಸೆ ನೀಡಿ ಭಾರತೀಯ ಪ್ರಜೆ ಬಿಡುಗಡೆ? - ನೇಪಾಳ ಪೊಲೀಸರು

ಭಾರತ - ನೇಪಾಳ ಗಡಿ ಪ್ರದೇಶವಾದ ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಗುಂಡಿನ ಚಕಮಕಿ ವೇಳೆ ಬಂಧನಕ್ಕೊಳಗಾಗಿದ್ದ ಭಾರತೀಯ ಪ್ರಜೆಗೆ ನೇಪಾಳ ಪೊಲೀಸರು ಹಿಂಸೆ ನೀಡಿ, ಇಂದು ಬಿಡುಗಡೆ ಮಾಡಿದ್ದಾರೆ ಎಂಬ ಮಾಹಿತಿ ದೊರೆತಿದೆ.

Indian held hostage by Nepal police released
ಭಾರತೀಯ ಪ್ರಜೆ ರಿಲೀಸ್

By

Published : Jun 13, 2020, 12:33 PM IST

ಸೀತಾಮರ್ಹಿ(ಬಿಹಾರ) :ಇಂಡೋ - ನೇಪಾಳ ಗಡಿಯಲ್ಲಿ ನಿನ್ನೆ ನಡೆದ ಗುಂಡಿನ ಚಕಮಕಿ ವೇಳೆ ಬಂಧನಕ್ಕೊಳಗಾಗಿದ್ದ ಭಾರತೀಯ ಪ್ರಜೆ ರಾಮ್​​ ಲಗನ್​ ಕಿಶೋರ್​ನನ್ನು ನೇಪಾಳ ಪೊಲೀಸರು ಇಂದು ಬಿಡುಗಡೆ ಮಾಡಿದ್ದಾರೆ.

ಭಾರತ - ನೇಪಾಳ ಗಡಿ ಪ್ರದೇಶವಾದ ಬಿಹಾರದ ಸೀತಾಮರ್ಹಿ ಜಿಲ್ಲೆಯ ಸೋನ್‌ಬರ್ಸಾದ ಜಾಂಕಿ ಗ್ರಾಮದ ಸಮೀಪ ಶುಕ್ರವಾರ ನೇಪಾಳ ಪೊಲೀಸರು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಓರ್ವ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದರು. ಅಲ್ಲದೇ ರಾಮ್​​ ಲಗನ್​ ಕಿಶೋರ್​ ಎಂಬಾತನನ್ನು ಬಂಧಿಸಿದ್ದರು. ಇಂದು ಆತನನ್ನು ನೇಪಾಳ ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಬಂಧನಕ್ಕೊಳಗಾಗಿದ್ದ ರಾಮ್​​ ಲಗನ್​ ಕಿಶೋರ್

ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಮ್​​ ಲಗನ್, ಮೈಮೇಲೆ ಆಗಿರುವ ಗಾಯದ ಗುರುತುಗಳನ್ನು ತೋರಿಸುತ್ತಾ ಪೊಲೀಸರು ನೀಡಿದ್ದ ಚಿತ್ರಹಿಂಸೆ ಕುರಿತು ತಿಳಿಸುತ್ತಾನೆ.

ಘಟನೆಯಿಂದಾಗಿ ಗ್ರಾಮದ ಜನರಲ್ಲಿ ಆತಂಕ ಮನೆಮಾಡಿದ್ದು, ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

ABOUT THE AUTHOR

...view details