ಲಂಡನ್(ಇಂಗ್ಲೆಂಡ್) : ಬ್ರಿಟನ್ನಲ್ಲಿ ರೂಪಾಂತರಿ ಕೊರೊನಾ ಹಾವಳಿ ಹೆಚ್ಚಾಗಿದ್ದು ದೇಶವ್ಯಾಪಿ ಲಾಕ್‌ಡೌನ್ ಹೇರಲಾಗಿದೆ. ಈ ಮಧ್ಯೆ ಎರಡೂ ರಾಷ್ಟ್ರಗಳ ನಡುವಿನ ಎಲ್ಲಾ ದೂತವಾಸ ಸೇವೆಗಳನ್ನು ಫೆಬ್ರವರಿ 20ರವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಇಂಗ್ಲೆಂಡ್ನ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಇಂಗ್ಲೆಂಡ್ನಲ್ಲಿ ಕೊರೊನಾ ರೂಪಾಂತರ ಹಿನ್ನೆಲೆಯಲ್ಲಿ ಐದನೇ ಹಂತದ ನಿರ್ಬಂಧಗಳನ್ನು ವಿಧಿಸಲಾಗಿದ್ದು, ಹೈಕಮೀಷನರ್ ಆಫ್ ಇಂಡಿಯಾ ಸೇವೆಗಳು ಫೆಬ್ರವರಿ 20ರವರೆಗೆ ಸ್ಥಗಿತಗೊಳ್ಳಲಿದೆ ಎಂದು ರಾಯಭಾರ ಕಚೇರಿ ಟ್ವಿಟರ್ನಲ್ಲಿ ಹೇಳಿದೆ.
ಇದನ್ನೂ ಓದಿ:'ಅಮೆರಿಕನ್ನರನ್ನು ಇರಾನ್ನಿಂದ ಹೊರ ಹಾಕುವ ಮೊದಲು ಮೂಳೆಗಳನ್ನು ಪುಡಿ ಪುಡಿ ಮಾಡಿ'
ಕೊರೊನಾ ಸಾಂಕ್ರಾಮಿಕ ರೋಗದ ಮಧ್ಯೆ ಹೊಸ ಕೊರೊನಾ ವೈರಸ್ ಮತ್ತಷ್ಟು ಆತಂಕ ಸೃಷ್ಟಿಸಿದೆ. ರೂಪಾಂತರಗೊಂಡ ವೈರಸ್ ಎಲ್ಲಾ ವೈರಸ್ಗಳಿಗಿಂತ ವೇಗವಾಗಿ ಹರಡುತ್ತದೆ ಎಂದು ವರದಿಗಳು ಸ್ಪಷ್ಟನೆ ನೀಡಿವೆ.
ರೂಪಾಂತರಿ ಕೊರೊನಾ ವೈರಸ್ ಈಗ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಪತ್ತೆಯಾಗಿದೆ. ಇನ್ನು ಸಾಮಾನ್ಯ ಕೊರೊನಾ ಸೋಂಕಿತರ ವಿಚಾರಕ್ಕೆ ಬರುವುದಾದರೆ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಪ್ರಕಾರ, ಇಂಗ್ಲೆಂಡಿನಲ್ಲಿ ಇದುವರೆಗೆ 2,782,709 ಸೋಂಕಿತರು ಕಂಡು ಬಂದಿದ್ದು, 76,428 ಮಂದಿ ಮೃತಪಟ್ಟಿದ್ದಾರೆ.