ಕರ್ನಾಟಕ

karnataka

ETV Bharat / bharat

ಭಾರತದ ಪ್ರಜಾಪ್ರಭುತ್ವ ತನ್ನ 'ಅತ್ಯಂತ ಕಠಿಣ ಹಂತವನ್ನು ದಾಟುತ್ತಿದೆ': ಸೋನಿಯಾ ಗಾಂಧಿ

ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಉಸ್ತುವಾರಿಗಳ ಸಭೆಯ ಅಧ್ಯಕ್ಷತೆ ವಹಿಸಿದ್ದ ಸೋನಿಯಾ ಗಾಂಧಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Sonia Gandhi
ಸೋನಿಯಾ ಗಾಂಧಿ

By

Published : Oct 18, 2020, 11:03 PM IST

ನವದೆಹಲಿ: ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮೂರು ಕೃಷಿ ಕಾನೂನುಗಳು, ಕೋವಿಡ್ -19 ಸಾಂಕ್ರಾಮಿಕ ರೋಗ, ಆರ್ಥಿಕ ಮಂದಗತಿ ಮತ್ತು ದಲಿತರ ವಿರುದ್ಧದ ದೌರ್ಜನ್ಯದ ನಿರ್ವಹಣೆಯಂತ ಸಂದರ್ಭದಲ್ಲಿ ಭಾರತದ ಪ್ರಜಾಪ್ರಭುತ್ವವು ತನ್ನ "ಅತ್ಯಂತ ಕಠಿಣ ಹಂತವನ್ನು ದಾಟುತ್ತಿದೆ" ಎಂದು ಕಿಡಿ ಕಾರಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ-ಉಸ್ತುವಾರಿಗಳ ಸಭೆಯನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಮಾತನಾಡಿದ ಸೋನಿಯಾ ಗಾಂಧಿ, ನಾಗರಿಕರ ಹಕ್ಕುಗಳನ್ನು ಬೆರಳೆಣಿಕೆಯಷ್ಟು ಬಂಡವಾಳ ಶಾಹಿಗಳಿಗೆ "ವ್ಯವಸ್ಥಿತವಾಗಿ" ಹಸ್ತಾಂತರಿಸುವ ಸರ್ಕಾರ ದೇಶವನ್ನು ಆಳುತ್ತಿದೆ ಎಂದಿದ್ದಾರೆ.

ಇತ್ತೀಚೆಗೆ ಜಾರಿಗೆ ಬಂದ ಕೃಷಿ ಕಾನೂನುಗಳ ಬಗ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸೋನಿಯಾ, ಬಿಜೆಪಿ ನೇತೃತ್ವದ ಸರ್ಕಾರ "ಮೂರು ಕೃಷಿ ವಿರೋಧಿ ಕಪ್ಪು ಕಾನೂನುಗಳನ್ನು" ತರುವ ಮೂಲಕ ಭಾರತದ ಚೇತರಿಸಿಕೊಳ್ಳುವ ಕೃಷಿ ಆರ್ಥಿಕತೆಯ ಅಡಿಪಾಯದ ಮೇಲೆ ಆಕ್ರಮಣ ಮಾಡಿದೆ ಎಂದಿದ್ದಾರೆ.

"ಮೂರು ಕೃಷಿ ವಿರೋಧಿ ಕಪ್ಪು ಕಾನೂನುಗಳನ್ನು" ತರುವ ಮೂಲಕ ಚೇತರಿಸಿಕೊಳ್ಳುವ ಕೃಷಿ ಆರ್ಥಿಕತೆ, "ಹಸಿರು ಕ್ರಾಂತಿಯ" ಲಾಭಗಳನ್ನು ಸೋಲಿಸಲು ಪಿತೂರಿ ನಡೆಸಲಾಗಿದೆ. ಕೋಟ್ಯಂತರ ಕೃಷಿ ಕಾರ್ಮಿಕರ ಜೀವನ, ಜೀವನೋಪಾಯ, ಗುತ್ತಿಗೆ ರೈತರು, ಸಣ್ಣ ರೈತರು, ದುಡಿಯುವ ಕಾರ್ಮಿಕರು ಮತ್ತು ಸಣ್ಣ ಅಂಗಡಿಯವರ ಮೇಲೆ ದಾಳಿ ಮಾಡಲಾಗಿದೆ. ಈ ಕೆಟ್ಟ ಪಿತೂರಿಯನ್ನು ಸೋಲಿಸಲು ಕೈಜೋಡಿಸುವುದು ನಮ್ಮ ಗಂಭೀರ ಕರ್ತವ್ಯವಾಗಿದೆ" ಎಂದಿದ್ದಾರೆ.

ಮೋದಿ ಸರ್ಕಾರದ "ಸಂಪೂರ್ಣ ಅಸಮರ್ಥತೆ" ಮತ್ತು "ದುರುಪಯೋಗ" ದಿಂದ ದೇಶವನ್ನು ಕೊರೊನಾ ವೈರಸ್ ಸಾಂಕ್ರಾಮಿಕ ಕೂಪಕ್ಕೆ ತಳ್ಳಲಾಯಿತು ಎಂದು ಆರೋಪಿಸಿದ್ದಾರೆ. ಅಲ್ಲದೆ ಭಾರತೀಯರ ಕಠಿಣ ಪರಿಶ್ರಮ ಮತ್ತು ಸತತ ಕಾಂಗ್ರೆಸ್ ಸರ್ಕಾರಗಳ ದೃಷ್ಟಿಕೋನದಿಂದ ಶ್ರಮದಾಯಕವಾಗಿ ನಿರ್ಮಿಸಲಾದ ಆರ್ಥಿಕತೆಯನ್ನು "ನೆಲಸಮ" ಮಾಡಿದೆ ಎಂದಿದ್ದಾರೆ.

ABOUT THE AUTHOR

...view details