ಕರ್ನಾಟಕ

karnataka

ETV Bharat / bharat

ಕೊರೊನಾ ಬಾಧಿತ ಚೀನಾದಿಂದ ಹಡಗಿನಲ್ಲಿ ಬಂದ ದಂಪತಿ ಒಡಿಶಾ ಆಸ್ಪತ್ರೆಗೆ ದಾಖಲು - ಒಡಿಶ್ಶಾ

ಸಿಂಗಾಪುರದ ಸರಕು ಹಡಗಿನಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ದಂಪತಿಯನ್ನು ಒಡಿಶಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಚೀನಾದಿಂದ ಪ್ಯಾರಡೀಪ್ ಬಂದರಿಗೆ ಹಡಗಿನಲ್ಲಿ ಬಂದ ವ್ಯಕ್ತಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಪತಿ-ಪತ್ನಿ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

Paradip
ಪ್ಯಾರಡೀಪ್

By

Published : Mar 4, 2020, 8:56 AM IST

ಪ್ಯಾರಡೀಪ್ (ಒಡಿಶಾ):ಸಿಂಗಪುರದ ಸರಕು ಹಡಗಿನಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ದಂಪತಿಯನ್ನು ಒಡಿಶಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಚೀನಾದಿಂದ ಪ್ಯಾರಡೀಪ್ ಬಂದರಿಗೆ ಹಡಗಿನಲ್ಲಿ ಬಂದ ವ್ಯಕ್ತಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಈ ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ದಂಪತಿಗಳಿಬ್ಬರನ್ನು ಕಟಕ್​ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿ ತಪಾಸಣೆ ಮುಗಿದ ಬಳಿಕ ಉತ್ತರ ಪ್ರದೇಶಕ್ಕೆ ಕರೆದುಕೊಂಡು ಹೋಗುವಂತೆ ಪ್ಯಾರಡೀಪ್ ಬಂದರಿನ ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ಪತ್ರೆಗೆ ದಾಖಲಾಗಿರುವ ದಂಪತಿ ಸೇರಿದಂತೆ ಒಟ್ಟು 23 ಸಿಬ್ಬಂದಿಯೊಂದಿಗೆ ಫೆ. 15ರಂದು ಚೀನಾದಿಂದ ಹೊರಟು ಮಾ.1ರಂದು ಪ್ಯಾರಡೀಪ್ ಬಂದರಿಗೆ ಬಂದು ತಲುಪಿದೆ. ಈ ಮಧ್ಯೆ ದಕ್ಷಿಣ ಕೊರಿಯಾ ಹಾಗೂ ಸಿಂಗಪುರಕ್ಕೂ ಹೋಗಿ ಬಂದಿದೆ.

ವೈದ್ಯಕೀಯ ತಪಾಸಣೆಯ ವೇಳೆ ವ್ಯಕ್ತಿಯಲ್ಲಿ ಸಾಮಾನ್ಯ ಜ್ವರ ಕಂಡು ಬಂದಿತ್ತು. ಮಾರಣಾಂತಿಕ ಕೊರೊನಾ ಬಾಧಿತ ದೇಶಗಳ ಮೂಲಕ ಹಡಗು ಸಂಚರಿಸಿದ್ದರಿಂದ ಮುಂಜಾಗೃತ ಕ್ರಮವಾಗಿ ಈ ದಂಪತಿಯನ್ನು ಎಸ್‌ಸಿಬಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಿದ್ದೆವು. ಆಸ್ಪತ್ರೆಗೆ ದಾಖಲಿಸುವ ಮುನ್ನ ಹಡಗಿನಲ್ಲೇ ದಂಪತಿಗೆ ಕೆಲವೊಂದು ನಿರ್ಬಂಧಗಳನ್ನು ಹೇರಲಾಗಿತ್ತು. ಈಗಾಗಲೇ ಪ್ಯಾರಡೀಪ್ ಬಂದರಿನಲ್ಲಿ ಲಂಗರು ಹಾಕಿರುವ ಹಡಗಿಗೆ ಯಾರು ಹೋಗದಂತೆ ಮತ್ತು ಹಡಗಿನಿಂದ ಯಾರು ಹೊರ ಬರದಂತೆ ನಿರ್ಬಂಧ ಹೇರಲಾಗಿದೆ ಎಂದು ಪ್ಯಾರಡೀಪ್ ಬಂದರು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಪ್ರಹ್ಲಾದ್​ ಪಾಂಡಾ ತಿಳಿಸಿದ್ದಾರೆ.

ಅಗತ್ಯವಿದ್ದರೆ ವೈದ್ಯರೇ ಹಡಗಿಗೆ ಭೇಟಿ ನೀಡುತ್ತಾರೆ. ಆಸ್ಪತ್ರೆಗೆ ದಾಖಲಾಗಿರುವ ದಂಪತಿಯನ್ನು ಕೊರೊನಾ ಶಂಕಿತ ಸೋಂಕು ಬಾಧಿತರು ಎಂದು ಪರಿಗಣಿಸಿ ಪ್ರತ್ಯೇಕ ವಾರ್ಡ್​ಗೆ ಸೇರಿಸಲಾಗಿದೆ. ಅವರ ರಕ್ತ ಮತ್ತು ಸ್ವ್ಯಾಬ್ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಎಸ್‌ಸಿಬಿಎಂಸಿಹೆಚ್ ತುರ್ತು ವಿಭಾಗದ ಅಧಿಕಾರಿ ಬಿ.ಎನ್. ಮಹಾರಾಣ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details