ಕರ್ನಾಟಕ

karnataka

ETV Bharat / bharat

ಭಾರತೀಯರ ಮೆದುಳು ಚೀನಿಯರಿಗಿಂತ ಚಿಕ್ಕದಂತೆ..ಯಾಕೆ ಅನ್ನೋದೆ ಇಂಟ್ರೆಸ್ಟಿಂಗ್​!​​ - ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ

ಐಐಐಟಿ ಹೈದರಾಬಾದ್‌ ಸಂಶೋಧಕರ ತಂಡ ರಚಿಸಿದ ದೇಶದ ಪ್ರಥಮ 'ಇಂಡಿಯನ್ ಬ್ರೈನ್ ಅಟ್ಲಾಸ್'ನಲ್ಲಿ ಚೀನಾ ಮತ್ತು ಕೊರಿಯಾದಂತಹ ಪಶ್ಚಿಮ ಮತ್ತು ಪೂರ್ವ ಜನರಿಗೆ ಹೋಲಿಸಿದರೆ ಭಾರತೀಯರ ಮೆದುಳಿನ ಪರಿಮಾಣದಲ್ಲಿ ಚಿಕ್ಕದಾಗಿದೆ ಎಂದಿದೆ. ಭಾರತದಂತಹ ಬಹು ಜನಾಂಗಿಯ ಜನಸಂಖ್ಯೆಯ ಮೆದುಳಿನ ವ್ಯತ್ಯಾಸಗಳನ್ನು ‘ಪ್ರಮಾಣಿತ’ ಮೆದುಳಿನ ಟೆಂಪ್ಲೆಟ್​ಗಳನ್ನು ಕಕೇಷಿಯನ್ ಮೆದುಳನ್ನು ಬಳಸಿ ರಚಿಸಿ ವಿಶ್ಲೇಷಿಸಿದ್ದು, ಸೂಕ್ತವಲ್ಲ ಎಂದು ಕೆಲ ತಜ್ಞರ ಅಭಿಪ್ರಾಯವಾಗಿದೆ.

ಮೆದುಳು

By

Published : Nov 1, 2019, 11:29 AM IST

ಹೈದರಾಬಾದ್​: ಅಂತಾರಾಷ್ಟ್ರೀಯ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಹೈದರಾಬಾದ್‌ನ ಸಂಶೋಧಕರು ರಚಿಸಿದ ಪ್ರಥಮ 'ಇಂಡಿಯನ್ ಬ್ರೈನ್ 'ಅಟ್ಲಾಸ್' ಅನ್ವಯ, ಚೀನಾ ಮತ್ತು ಕೊರಿಯಾದಂತಹ ಪಶ್ಚಿಮ ಮತ್ತು ಪೂರ್ವ ಜನರಿಗೆ ಹೋಲಿಸಿದರೆ ಭಾರತೀಯರ ಮೆದುಳಿನ ಸರಾಸರಿ ಎತ್ತರ, ಅಗಲ ಮತ್ತು ಪರಿಮಾಣದಲ್ಲಿ ಚಿಕ್ಕದಾಗಿದೆ ಎಂದು ಹೇಳಿದೆ.

ಈ ವ್ಯತ್ಯಾಸಗಳು ಹಿಪೊಕ್ಯಾಂಪಸ್‌ ಪರಿಮಾಣದಂತಹ ರಚನಾ ಮಟ್ಟದಲ್ಲಿಯೂ ಕಂಡುಬರುತ್ತವೆ. ಒಟ್ಟಾರೆಯ ‘ಐಬಿಎ100 ಕಾಕೇಷಿಯನ್ (ಜನಾಂಗ) ಒಂದಕ್ಕಿಂತ ಚೀನಿ ಮತ್ತು ಕೊರಿಯನ್ 'ಅಟ್ಲಾಸ್'ಗಳಿಗೆ (ತಲೆಬುರುಡೆಯ ಮೇಲ್ಭಾಗದ ಕಶೇರುಖಂಡ, ತಲೆಬುರುಡೆಯ ಆಕ್ಸಿಪಿಟಲ್ ಮೂಳೆಯ ರಚನೆ) ಹೋಲಿಸಬಹುದು ಎಂದು ಸಂಶೋಧನಾ ತಂಡ ಹೇಳಿದೆ.

ಮಾಂಟ್ರಿಯಲ್ ನ್ಯೂರೋಲಾಜಿಕಲ್ ಇನ್​ಸ್ಟಿಟ್ಯೂಟ್​ (ಎಂಎನ್‌ಐ) ಮತ್ತು ಇಂಟರ್​ನ್ಯಾಷನಲ್​ ಕನ್ಸೋರ್ಟಿಯಂ ಫಾರ್ ಬ್ರೈನ್ ಮ್ಯಾಪಿಂಗ್ (ಐಸಿಬಿಎಂ) 1993ರಲ್ಲಿ ಮೊದಲ ಡಿಜಿಟಲ್ ಮಾನವನ ಮೆದುಳಿನ ಅಟ್ಲಾಸ್ ಅನ್ನು ರಚಿಸಿ ಇತರ ಮೆದುಳಿನ ಅಟ್ಲೇಸ್‌ಗಳನ್ನು ಸಹ ಬಿಡುಗಡೆ ಮಾಡಿತ್ತು. ಇದನ್ನು ನರವಿಜ್ಞಾನ ಅಧ್ಯಯನದಲ್ಲಿ ಬಳಸಲಾಗುತ್ತದೆ. ಈ ‘ಪ್ರಮಾಣಿತ’ ಮೆದುಳಿನ ಟೆಂಪ್ಲೆಟ್​ಗಳನ್ನು ಕಕೇಷಿಯನ್ ಮಿದುಳುಗಳನ್ನು ಬಳಸಿ ರಚಿಸಲಾಗಿದೆ. ಭಾರತದಂತಹ ಬಹು ಜನಾಂಗಿಯ ಜನಸಂಖ್ಯೆಯ ಮೆದುಳಿನ ವ್ಯತ್ಯಾಸಗಳನ್ನು ವಿಶ್ಲೇಷಿಸಲು ಸೂಕ್ತವಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details