ಕರ್ನಾಟಕ

karnataka

ETV Bharat / bharat

ಭಾರತ-ಚೀನಾ ಗಡಿ ಸಂಘರ್ಷ: ಯೋಧರಿಗೆ​ ಅಮೆರಿಕಾದ ಬೆಚ್ಚನೆ ಉಡುಪು! - ಭಾರತೀಯ ಸೈನಿಕರಿಗೆ ಅಮೆರಿಕದ ತೀವ್ರ ಶೀತ ಹವಾಮಾನ ಉಡುಪು,

ಕೆಲ ದಿನಗಳಲ್ಲಿ ಚಳಿ ಆರಂಭಗೊಳ್ಳುವ ಗಡಿ ನಿಯಂತ್ರಣ ರೇಖೆ ಬಳಿ ಯೋಧರಿಗೋಸ್ಕರ ಇದೀಗ ಅಮೆರಿಕದಿಂದ ಬೆಚ್ಚನೆ ಉಡುಪು ಅಮೆರಿಕದಿಂದ ತರಿಸಿಕೊಳ್ಳಲಾಗಿದ್ದು, ಸೈನಿಕರಿಗೆ ಹಸ್ತಾಂತರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

american extreme cold weather clothes, american extreme cold weather clothes give to indian soldier, american extreme cold weather clothes news, ಅಮೆರಿಕದ ತೀವ್ರ ಶೀತ ಹವಾಮಾನ ಉಡುಪು, ಭಾರತೀಯ ಸೈನಿಕರಿಗೆ ಅಮೆರಿಕದ ತೀವ್ರ ಶೀತ ಹವಾಮಾನ ಉಡುಪು, ಅಮೆರಿಕದ ತೀವ್ರ ಶೀತ ಹವಾಮಾನ ಉಡುಪು ಸುದ್ದಿ,
ಯೋಧರಿಗೆ​ ಅಮೆರಿಕಾದ ಬೆಚ್ಚನೆ ಉಡುಪು

By

Published : Nov 4, 2020, 7:40 PM IST

ನವದೆಹಲಿ: ಕಳೆದ ಕೆಲ ತಿಂಗಳಿಂದ ಭಾರತ-ಚೀನಾ ನಡುವೆ ಗಡಿ ಸಂಘರ್ಷ ಉದ್ಭವವಾಗಿದ್ದು, ಚೀನಾ ಗಡಿಯಲ್ಲಿ ಈಗಾಗಲೇ ಹೆಚ್ಚಿನ ಸೈನಿಕರು ನಿಯೋಜನೆಗೊಂಡಿದ್ದಾರೆ. ಇದೀಗ ಭಾರತ ಕೂಡ ಎಲ್ಲ ಸವಾಲುಗಳಿಗೆ ಸಜ್ಜಾಗುತ್ತಿದ್ದು, ಇದರ ಮಧ್ಯೆ ಭಾರತೀಯ ಸೇನೆಗೆ ಯುಎಸ್​​ನಿಂದ ತೀವ್ರ ಶೀತ ಹವಾಮಾನ ತಡೆಯುವ ಉಡುಪನ್ನು ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.

ಗಡಿ ನಿಯಂತ್ರಣ ರೇಖೆಯಲ್ಲಿ ಚೀನಿಯರ ಸವಾಲು ಎದುರಿಸಲು ಭಾರತ ಸರ್ವ ಸನ್ನದ್ಧವಾಗಿದೆ. ಅದರಲ್ಲಿ ಪ್ರಮುಖವಾಗಿ ಯೋಧರನ್ನ ಚಳಿಯಿಂದ ರಕ್ಷಣೆ ಮಾಡುವ ಉದ್ದೇಶದಿಂದ ಯುಎಸ್​ನಿಂದ ಬೆಚ್ಚನೆಯ ಉಡುಪುಗಳನ್ನು ಕೇಂದ್ರ ಸರ್ಕಾರ ತರಿಸಿಕೊಂಡಿತ್ತು. ಈಗ ಆ ಉಡುಪುಗಳು ಯೋಧರಿಗೆ ನೀಡಲಾಗಿದೆ. ಯೋಧರೊಬ್ಬರು ಯುಎಸ್​ನಿಂದ ಬಂದಿರುವ ಬೆಚ್ಚನೆಯ ಉಡುಪನ್ನು ಧರಿಸುವ ಫೋಟೋವನ್ನು ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.

ಸಿಯಾಚಿನ್​ ಮತ್ತು ಪೂರ್ವ ಲಡಾಖ್​​ ಸೆಕ್ಟರ್​ ಪಶ್ಚಿಮ ವಿಭಾಗದಲ್ಲಿ ಭಾರತೀಯ ಸೇನೆ ನಿಯೋಜನೆ ಮಾಡಲಾಗಿದ್ದು, ಅಲ್ಲಿ ವಿಪರೀತ ಶೀತ ಹವಾಮಾನ ಇರುವುದರಿಂದ ಬರೋಬ್ಬರಿ 60 ಸಾವಿರ ಉಡುಪುಗಳನ್ನು ಅಮೆರಿಕದಿಂದ ತರಿಸಿಕೊಳ್ಳಲಾಗಿದೆ. ಭಾರತ ಗಡಿ ಪ್ರದೇಶದಲ್ಲಿ 90 ಸಾವಿರ ಸೈನಿಕರ ನಿಯೋಜನೆ ಮಾಡಲಾಗಿದೆ. ಇನ್ನು ಎತ್ತರದ ಪರ್ವತ ಪ್ರದೇಶಗಳಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ ನಡೆಸುತ್ತಿರುವ ಕಾರಣ ಭಾರತೀಯ ಯೋಧರಿಗೆ ಚೆಚ್ಚನೆಯ ಉಡುಪು ಅವಶ್ಯವಾಗಿತ್ತು. ಹೀಗಾಗಿ ಸೈನಿಕರಿಗೆ ಈ ಬೆಚ್ಚನೆಯ ಉಡುಪುಗಳನ್ನು ಸರ್ಕಾರ ನೀಡಿದೆ. ಭಾರತ ಈಗಾಗಲೇ ಆಕ್ರಮಣಕಾರಿ ರೈಫಲ್​ ಸೇರಿದಂತೆ ವಿವಿಧ ಸಾಧನಗಳನ್ನು ಅಮೆರಿಕದಿಂದ ಪಡೆದುಕೊಳ್ಳುತ್ತಿದೆ.

ABOUT THE AUTHOR

...view details