ಕರ್ನಾಟಕ

karnataka

ETV Bharat / bharat

ಪಾಕ್​ನಿಂದ ಮತ್ತೆ ಕದನ ವಿರಾಮ ಉಲ್ಲಂಘನೆ: ಭಾರತೀಯ ಯೋಧ ಹುತಾತ್ಮ - ಪೂಂಚ್​ ಜಿಲ್ಲೆಯ ಕೃಷ್ಣ ಘಾಟಿ ಸೆಕ್ಟರ್‌

ಜಮ್ಮು-ಕಾಶ್ಮೀರದ ಪೂಂಚ್​ ಜಿಲ್ಲೆಯ ಕೃಷ್ಣಾ ಘಾಟಿ ಸೆಕ್ಟರ್‌ನಲ್ಲಿ ಕಳೆದ ರಾತ್ರಿ ಪಾಕ್​ ಪಡೆ ನಡೆಸಿದ ಗುಂಡು ಹಾಗೂ ಶೆಲ್​ ದಾಳಿಯಲ್ಲಿ ಲ್ಯಾನ್ಸ್ ನಾಯಕ್ ಕರ್ನೈಲ್ ಸಿಂಗ್ ಹುತಾತ್ಮರಾಗಿದ್ದಾರೆ.

Indian Army soldier killed
ಲ್ಯಾನ್ಸ್ ನಾಯಕ್ ಕರ್ನೈಲ್ ಸಿಂಗ್

By

Published : Oct 1, 2020, 10:21 AM IST

ಜಮ್ಮು ಮತ್ತು ಕಾಶ್ಮೀರ: ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕಿಸ್ತಾನಿ ಪಡೆ ಮತ್ತೆ ಕದನ ವಿರಾಮ ಉಲ್ಲಂಘಿಸಿದ್ದು, ಘಟನೆಯಲ್ಲಿ ಭಾರತೀಯ ಯೋಧನೋರ್ವ ಹುತಾತ್ಮನಾಗಿದ್ದಾನೆ.

ಪೂಂಚ್​ ಜಿಲ್ಲೆಯ ಕೃಷ್ಣಾ ಘಾಟಿ ಸೆಕ್ಟರ್‌ನಲ್ಲಿ ಕಳೆದ ರಾತ್ರಿ ಪಾಕ್​ ಪಡೆ ನಡೆಸಿದ ಗುಂಡು ಹಾಗೂ ಶೆಲ್​ ದಾಳಿಯಲ್ಲಿ ಲ್ಯಾನ್ಸ್ ನಾಯಕ್ ಕರ್ನೈಲ್ ಸಿಂಗ್ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಜಮ್ಮುವಿನ ರಕ್ಷಣಾ ಪಿಆರ್​ಒ ತಿಳಿಸಿದ್ದಾರೆ.

ಸೆ. 20ರಂದು ಕೃಷ್ಣಾ ಘಾಟಿ ಸೆಕ್ಟರ್‌ನಲ್ಲಿ ಇದೇ ರೀತಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ್ದು, ನಮ್ಮ ಸೇನೆ ಪ್ರತ್ಯುತ್ತರ ನೀಡಿತ್ತು.

ABOUT THE AUTHOR

...view details