ಕುಪ್ವಾರಾ(ಜಮ್ಮು ಮತ್ತು ಕಾಶ್ಮೀರ):ಭಾರತದ ಗಡಿಯೊಳಗೆ ಹಾರಾಟ ನಡೆಸುತ್ತಿದ್ದ ಪಾಕಿಸ್ತಾನದ ಕ್ವಾಡ್ಕಾಪ್ಟರ್ ಡ್ರೋನ್ಅನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.
ಪಾಕ್ನಿಂದ ಬಂದ ಡ್ರೋನ್ ಹೊಡೆದುರುಳಿಸಿದ ಭಾರತೀಯ ಸೇನೆ - Indian Army shoots down Pakistani drone near LoC
ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕೇರನ್ ಸೆಕ್ಟರ್‌ನಲ್ಲಿ ಅನುಮಾನಾಸ್ಪದವಾಗಿ ಹಾರಾಟ ನಡೆಸುತ್ತಿದ್ದ ಪಾಕಿಸ್ತಾನದ ಕ್ವಾಡ್ಕಾಪ್ಟರ್ ಡ್ರೋನ್ಅನ್ನು ಭಾರತೀಯ ಯೋಧರು ಗುಂಡು ಹಾರಿಸಿ ಹೊಡೆದುರುಳಿಸಿದ್ದಾರೆ.
ಪಾಕ್ನಿಂದ ಬಂದ ಡ್ರೋನ್ ಹೊಡೆದುರುಳಿಸಿದ ಭಾರತೀಯ ಸೇನೆ
ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕೇರನ್ ಸೆಕ್ಟರ್‌ನಲ್ಲಿನ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಅನುಮಾನಾಸ್ಪದವಾಗಿ ಡ್ರೋನ್ ಹಾರಾಟ ನಡೆಸುತ್ತಿತ್ತು. ಇದನ್ನು ಗಮನಿಸಿದ ಭಾರತೀಯ ಯೋಧರು ಇಂದು ಬೆಳಗ್ಗೆ 8 ಗಂಟೆಗೆ ಡ್ರೋನ್ ಮೇಲೆ ಗುಂಡು ಹಾರಿಸಿದ್ದಾರೆ.
ಪಾಕಿಸ್ತಾನ ಪಡೆಗೆ ಸೇರಿರುವ ಈ ಡ್ರೋನ್ಅನ್ನು ಚೀನಾ ಮೂಲದ DJI Mavic 2 Pro ಎಂಬ ಕಂಪನಿ ನಿರ್ಮಿಸಿದೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.