ಕರ್ನಾಟಕ

karnataka

ETV Bharat / bharat

ಗಡಿಯಲ್ಲಿ ಪಾಕ್​ನಿಂದ ಗುಂಡಿನ ದಾಳಿ: ಮಕ್ಕಳನ್ನು ರಕ್ಷಿಸಿದ ಭಾರತೀಯ ಯೋಧರು - ಗಡಿಯಲ್ಲಿ ಪಾಕ್​ನಿಂದ ಗುಂಡಿನ ದಾಳಿ

ಗಡಿಯಲ್ಲಿ ಪಾಕ್ ಮತ್ತೆ ಫೈರಿಂಗ್ ಆರಂಭಿಸಿದ ಪರಿಣಾಮ ಸರ್ಕಾರ ಶಾಲೆಯ ಮಕ್ಕಳನ್ನು ಭಾರತೀಯ ಸೇನೆ ರಕ್ಷಿಸಿದೆ.

ಮಕ್ಕಳನ್ನು ರಕ್ಷಿಸಿದ ಭಾರತೀಯ ಯೋಧರು

By

Published : Sep 15, 2019, 8:44 AM IST

ಪೂಂಛ್: ಗಡಿಯಲ್ಲಿ ಪಾಕ್ ಮತ್ತೆ ಉದ್ಧಟತನ ಮೆರೆದು ಗುಂಡಿನ ದಾಳಿ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಬಾಲಾಕೋಟ್​ ವಲಯದ ಸಂದೋಟೆ ಗ್ರಾಮದ ಸರ್ಕಾರ ಶಾಲೆಯ ಮಕ್ಕಳನ್ನು ಭಾರತೀಯ ಸೇನೆ ರಕ್ಷಿಸಿದೆ.

ಗಡಿಯಲ್ಲಿ ಪಾಕ್​ ಗುಂಡಿನ ದಾಳಿ ನಡೆಸಿದ್ದರಿಂದ ಬಾಲಾಕೋಟ್ ಹಾಗೂ ಬೆಹ್ರೋಟ್ ಗ್ರಾಮದ ಶಾಲಾ ಮಕ್ಕಳನ್ನು ಬುಲೆಟ್ ಪ್ರೂಫ್ ವಾಹನದಲ್ಲಿ ಭಾರತೀಯ ಸೇನೆ ಸುರಕ್ಷಿತವಾಗಿ ಮನೆಗೆ ಕಳುಹಿಸಿದೆ. ಇನ್ನು ಭಾರತೀಯ ಯೋಧರು ಕೂಡ ಮರು ದಾಳಿ ಮೂಲಕ ಪಾಕ್​ಗೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ದಾಳಿ ವೇಳೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಜೊತೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಗಡಿ ಗ್ರಾಮದ ಜನರಿಗೆ ಎಚ್ಚರಿಕೆ ನೀಡಲಾಗಿದೆ.

ಮಕ್ಕಳನ್ನು ರಕ್ಷಿಸಿದ ಭಾರತೀಯ ಯೋಧರು

ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್ ಆಗಾಗ ತಂಟೆ ತೆಗೆಯುತ್ತಲೆ ಇರುತ್ತದೆ. ಇತ್ತೀಚೆಗೆ ಸೆ.1 ರಂದು ನಡೆದ ಗುಂಡಿನ ದಾಳಿಯಲ್ಲಿ ಭಾರತೀಯ ಸೈನಿಕರೊಬ್ಬರು ಹುತಾತ್ಮರಾಗಿದ್ದರು.

ABOUT THE AUTHOR

...view details